ಕೊಪ್ಪಳ: ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯಿತಿ ಸೇರಿ ಜಿಲ್ಲೆಯಲ್ಲಿ ಐದು ಸ್ಥಳೀಯ ಸಂಸ್ಥೆಗಳಿಗೆ ಮತದಾನ ಬಿರುಸಿನಿಂದ ನಡೆದಿದೆ.
ಭಾಗ್ಯನಗರ ಪಪಂನಲ್ಲು ಒಟ್ಟು 19 ವಾರ್ಡ್ ಗಳಿದ್ದು, ಈಗಾಗಲೆ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದೆ. ಉಳಿದ 17 ಸ್ಥಾನಗಳಿಗೆ ಮತದಾನ ನಡೆದಿದೆ. ಬೆಳಗ್ಗೆ 10 ಗಂಟೆವರೆಗೆ ಶೇ. 9.71ರಷ್ಟು ಮತದಾನವಾದ ವರದಿಯಾಗಿದೆ. ಪಪಂನಲ್ಲಿ ಒಟ್ಟು 77 ಸಾವಿರ ಮತದಾರು ಇದ್ದು, ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಅದರಂತೆ ಜಿಲ್ಲೆಯ ಕಾರಟಗಿ, ಕನಕಗಿರಿ, ಕಯಕನೂರು ಹಾಗೂ ತಾವರಗೇರಿಯಲ್ಲಿ ಸಹ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆದಿದೆ.
ಕಾರಟಗಿಯ 23 ವಾರ್ಡ್ ಗಳ ಪೈಕಿ ಒಂದು, ಕನಕಗಿರಿಯ 17 ವಾರ್ಡ್, ತಾವರಗೇರಿಯ 18 ವಾರ್ಡ್ ಗಳ ಪೈಕಿ 3 ವಾರ್ಡ್ ನಲ್ಲಿ ಹಾಗೂ ಕುಕನೂರು ಪಟ್ಟಣ ಪಂಚಾಯಿತಿಯ 19 ವಾರ್ಡ್ ಗಳಿಗೆ ಮತದಾನ ಜರುಗಿದೆ. ಮತದಾನ ಕೇಂದ್ರಗಳಿಗೆ ಉತ್ಸಾಹದಿಂದಲೇ ಮತದಾರರು ಧಾವಿಸಿ ಹಕ್ಕು ಚಲಾಯಿಸಿದ್ದಾರೆ. ಕೋವಿಡ್ ನಿಯಮದಂತೆ ಮತದಾನ ನಡೆದಿದೆ. ಯಾವುದೇ ಗೊಂದಲವಾಗದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.