Wednesday, 29th June 2022

ಸಾಗರದಲ್ಲಿ ಮೇ.30ರಿಂದ ನಾಲ್ಕು ದಿನ ಲಾಕ್ ಡೌನ್

ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನಲ್ಲಿ ಕರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳ ಆಗುತ್ತಿರುವ ಹಿನ್ನಲೆಯಲ್ಲಿ, ಭಾನುವಾರದಿಂದ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡ ಲಾಗಿದೆ.

ಸಾಗರ ತಾಲೂಕು ಎಸಿ ನಾಗರಾಜ್ ಅವರು, ತಾಲೂಕಿನ ಅನೇಕ ಭಾಗಗಳಲ್ಲಿ ಲಾಕ್ ಡೌನ್ ನಡುವೆಯೂ, ಸೋಂಕಿನ ನಿಯಂತ್ರಣ ಮಾತ್ರ ಆಗಿಲ್ಲ. ಸೋಂಕು ನಿಯಂತ್ರಣಕ್ಕಾಗಿ, ತಾಲೂಕು ಆಡಳಿತದಿಂದ ಭಾನುವಾರದಿಂದ ನಾಲ್ಕು ದಿನ ತಾಲೂಕಿನಾಧ್ಯಂತ ಸಂಪೂರ್ಣ ಲಾಕ್ ಡೌನ್ ಮಾಡುವಂತ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಇನ್ನೂ ಭಾನುವಾರ, ಸೋಮವಾರ, ಮಂಗಳವಾರ ಮತ್ತು ಬುಧವಾರ ಸೇರಿದಂತೆ ನಾಲ್ಕು ದಿನ ಸಂಪೂರ್ಣವಾಗಿ ತಾಲೂಕಿ ನಾಧ್ಯಂತ ಲಾಕ್ ಡೌನ್ ವಿಧಿಸಲಾಗಿದೆ. ಈ ಸಂದರ್ಭದಲ್ಲಿ ತುರ್ತು ಸಂದರ್ಭದಲ್ಲಿ ಮಾತ್ರವೇ ಓಡಾಡೋದಕ್ಕೆ ಅವಕಾಶ ನೀಡಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡೋದಕ್ಕೆ ಸೂಚಿಸಲಾಗಿದೆ. ಕೇವಲ ಹಾಲು, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್, ಬ್ಯಾಂಕ್ ಸೇರಿದಂತೆ ಕೆಲ ಅಗತ್ಯಸೇವೆ ಒದಗಿಸುವಂತ ಇಲಾಖೆಗಳಿಗೆ ಮಾತ್ರವೇ ಅನುಮತಿಸಲಾಗಿದೆ ಎಂದರು.