Tuesday, 26th October 2021

ಸೆ.೩೦ ರಂದು ಲೋಕ್ ಅದಾಲತ್‌

ಕೊರಟಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ಇದೆ 2021ರ ಸೆ.30 ರಂದು ಲೋಕ್ ಅದಾಲತ್‌ನ್ನ ಆಯೋಜಿಸಲಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಜಿ. ಡಿ. ದೇವರಾಜು ತಿಳಿಸಿದರು.

ಪಟ್ಟಣದ ನ್ಯಾಯಲಯದ ಅವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತುಮಕೂರು ಹಾಗೂ ತಾಲೂಕು ವಕೀಲರ ಸಂಘದ ಸಹಯೋಗದೊಂದಿಗೆ ತಾಲೂಕಿ ನಾದ್ಯಂತ ಸಂಚಾರ ಮಾಡುವ ವಾಹನವನ್ನ ಚಾಲನೆ ನೀಡಿ ಮಾತನಾಡಿದ ಅವರು ಕೊರಟಗೆರೆ ತಾಲೂಕು ನ್ಯಾಯಾಲಯಗಳಲ್ಲಿ ವಿಚಾರಣೆ ಬಾಕಿ ಇರುವ ಪ್ರಕರಣಗಳನ್ನ ರಾಜೀ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಇದೆ ಸೆ.30 ರಂದು ಲೋಕ್ ಅದಾಲತ್‌ನಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡ, ಮಹಿಳೆ ಮತ್ತು ಮಕ್ಕಳು, ಕಾರ್ಖಾನೆ ಕಾರ್ಮೀಕರು, ಗುಂಪು, ಗಲಬೆಗಳು ಸೇರಿದಂತೆ ಇತರ ಕಾನೂನು ಸೇವೆಗಳನ್ನ ಉಚಿತ ವಾಗಿ ನೆರವು ಪಡೆಯಬಹುದಾಗಿದೆ. ತಾಲೂಕಿನ ನ್ಯಾಯಾ ಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನ ರಾಜಿ ಸಂಧಾನ ಮಾಡುವ ಮೂಲಕ ಪ್ರಕರಣವನ್ನ ಖುಲಸೆ ಮಾಡಿಕೊಳ್ಳ ಬಹುದಾಗಿದೆ. ಈ ಲೋಕ್ ಅದಾಲತ್ ಸದುಪಯೋಗ ಪಡೆದುಕೊಂಡು ಕಾರ್ಯಕ್ರಮವನ್ನ ಯಶ್ವಸಿಗೊಳಿಸಿ ಎಂದು ತಿಳಿಸಿದರು.

ಹಿರಿಯ ವಕೀಲ ಟಿ. ಕೃಷ್ಣಮೂರ್ತಿ ಮಾತನಾಡಿ ಸೆ.30ರ ಬುಧವಾರ ಬೃಹತ್ ಲೋಕ್ ಅದಾಲತ್‌ನ್ನ ಕೊರಟಗೆರೆ ನ್ಯಾಯಾಲಯದ ಅವರಣದಲ್ಲಿ ಆಯೋಜನೆ ಮಾಡಲಾಗಿದೆ. ಕೋರ್ಟ್ನಲ್ಲಿರುವ ಇರುವಂತಹ ಎಲ್ಲಾ ಕಕ್ಷಿದಾರರು ಸಹ ಅವರ ಪ್ರಕರಣಗಳಿಗೆ ಇರುವ ಪ್ರಕರಣ ಗಳನ್ನ ರಾಜಿ ಮಾಡಿಕೊಳ್ಳಬಹುದಾಗಿದೆ ಈ ಅವಕಾಶವನ್ನ ತಪ್ಪದೇ ಬಳಸಿಕೊಳ್ಳಿ ಎಂದರು.

ಇದೆ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಸೈಯದ್ ಮುಜಾಮಿಲ್ ಹಿರಿಯ ವಕೀಲರಾದ ಶಿವರಾಮಯ್ಯ, ಕೃಷಮೂರ್ತಿ, ನಾಗರಾಜು, ಮಧು ಸೂದನ್, ಹುಸೇನ್ ಪಾಷ, ಅರುಂಧತಿ, ಪೊಲೀಸ್ ಅಧಿಕಾರಿ ವಿಷ್ಣು ಕದಂ, ಜಗದೀಶ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *