Tuesday, 9th August 2022

ರಸ್ತೆ ಮಧ್ಯದಲ್ಲೇ ಹೊತ್ತಿ ಉರಿದ ಲಾರಿ: ಚಾಲಕ, ಕ್ಲೀನರ್​​ ಪಾರು

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ರಾಮನಕೊಪ್ಪ ಗ್ರಾಮದ ಬಳಿ ಚಲಿಸುತ್ತಿದ್ದ ಲಾರಿ ರಸ್ತೆ ಮಧ್ಯದಲ್ಲೇ ಹೊತ್ತಿ ಉರಿದು, ಚಾಲಕ ಮತ್ತು ಕ್ಲೀನರ್​​ ಪ್ರಾಣಾಪಾಯದಿಂದ ಪರಾರಿಯಾಗಿದ್ದಾರೆ.

ಆಂಧ್ರದಿಂದ ಹಾವೇರಿ ಕಡೆ ಬಣ್ಣದ ವಸ್ತುಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿ ಶಿಗ್ಗಾವಿ ಬಳಿ ಬರುತ್ತಿದ್ದಂತೆ ಶೌಚಾಲಯಕ್ಕೆ ಹೋಗಬೇಕೆಂದು ಲಾರಿ ನಿಧಾನಗೊಳಿಸಿದ ಕೂಡಲೇ ಬೆಂಕಿ ತಗುಲಿದೆ. ಕೂಡಲೇ ಟ್ರೈವರ್ ಮತ್ತು ಕ್ಲೀನರ್​ ಲಾರಿನಿಂದ ಇಳಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ.

ಎರಡು ಮೂರು ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಪೆಂಟ್ ನ ಡಬ್ಬಿ ಗಳು, ಡ್ರಿಲ್ಲಿಂಗ್ ಮಷಿನ್ಗಳು, ಮೋಟಾರ್ ಆಯಿಲ್ ಬಾಕ್ಸ್ ಗಳು ಸೇರಿದಂತೆ ವಿವಿಧ ವಸ್ತು ಗಳು ಸುಟ್ಟು ಕರಕಲಾಗಿದೆ.

ಶಿಗ್ಗಾಂವಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಅಗ್ನಿ ನಂದಿಸಿದ್ದಾರೆ. ಈ ಬಗ್ಗೆ ತಡಸ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.