Friday, 27th May 2022

ಪ್ರೀತಿ ಉಳಿಸಿಕೊಳ್ಳಲು ಹೀಗೆ ಮಾಡಿ !

ಶರಣ್ಯ ಕೋಲ್ಚಾರ್

ಪ್ರೀತಿ ಮಧುರ, ಅದು ಸೂಕ್ಷ್ಮ. ಪರಸ್ಪರ ಗೌರವದಿಂದ ಇದ್ದರೆ ಪ್ರೀತಿಯ ಗಿಡ ಬೆಳೆಯುತ್ತದೆ, ಫಲ ನೀಡುತ್ತದೆ.

ಒಂದು ಪ್ರೀತಿಯನ್ನು ಸುಂದರ ಪ್ರೀತಿಯಾಗಿ ಉಳಿಸಿಕೊಳ್ಳುವುದು ತುಂಬಾ ಕಷ್ಟ. ಏಕೆಂದರೆ ಪ್ರೀತಿ ಪರಸ್ಪರ ಭಾವನೆಗಳ
ತಾಕಲಾಟ. ಮಧುರ ಪಿಸು ಮಾತು. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಹೊಂದಿಕೊಳ್ಳುವ ಬದುಕು. ಪ್ರೀತಿಯನ್ನು ಪಡೆಯು ವುದು ಎಷ್ಟು ಕಷ್ಟವೋ, ಅದನ್ನು ಕಳೆದುಕೊಂಡಾಗ ಆಗುವ ನೋವು ಸಹಿಸಿಕೊಳ್ಳು ವುದು ಸಹ ತುಂಬಾ ಕಷ್ಟ. ಪ್ರೀತಿ ಒಂದು ಮಾಯೆ. ಅದೊಂದು ನಂಬಿಕೆ, ಭಾವನೆಯ ತೋರಣ. ಅತಿರೇಕದ ಪ್ರೀತಿಯಿಂದ ಜೀವನ ಹಾಳು ಮಾಡಿಕೊಳ್ಳದೆ ಮಧುರವಾದ, ವಿಶ್ವಾಸದ ಪ್ರೀತಿಯನ್ನು ತಮ್ಮದಾಗಿಸಿ. ಇಂತಹ ಆತ್ಮೀಯ, ಹುಚ್ಚು ಪ್ರೀತಿನ ಉಳಿಸಿ ಕೊಳ್ಳೊದು ಹೇಗೆ?

೧ ಪ್ರೀತಿ ಮತ್ತು ನಂಬಿಕೆ
ಚಂದ್ರ ಸೂರ್ಯನನ್ನು ಅವಲಂಬಿಸಿದಂತೆ ಪ್ರೀತಿಗೆ ತಳಹದಿಯೇ ನಂಬಿಕೆ. ಪ್ರೇಮಿಗಳಿ ಬ್ಬರು ಪರಸ್ಪರ ನಂಬಿಕೆ ವಿಶ್ವಾಸದಿಂದಿ ಹೊಂದಿಕೊಂಡಿದ್ದರೆ ಪ್ರೀತಿ ಅಂದವಾಗುತ್ತದೆ. ಯಾವುದೇ ಕಾರಣಕ್ಕೂ ಮನಪೂರ್ತಿ ಒಪ್ಪಿದ ಪ್ರೀತಿಗೆ ನಂಬಿಕೆ ದ್ರೋಹ ಮಾಡ ಬೇಡಿ.

೨ ಪ್ರೀತಿಯಲ್ಲಿ ಅನುಮಾನ ಸಲ್ಲ
ಪ್ರೇಮಿಗಳಲ್ಲಿ ಬಿರುಕು ಮೂಡಲು ಅನುಮಾನ ಪ್ರಮುಖ ಕಾರಣ. ಕರೆ ಮಾಡಿದಾಗ ಬ್ಯುಸಿ ಬಂದರೆ ಪ್ರಶ್ನೆಗಳು ‘ಯಾರೊಂದಿಗೆ ಮಾತಾಡ್ತಿದ್ದೆ?’ ಇಷ್ಟೇ ಸಾಕು ಜಗಳಕ್ಕೆ. ‘ಏನು ಮಾತಾಡಿದೆ, ಸ್ಕ್ರೀನ್ ಶಾಟ್ ಕಳುಹಿಸು’ ಎಂದರೆ ಮುಗಿತು. ಬದಲಾಗಿ ಉತ್ತಮ ಪ್ರೀತಿಯಾದರೆ ಅವರೇ ‘ಯಾರೊಂದಿಗೋ ಮಾತನಾಡುತ್ತಿದ್ದೆ , ಕಾಯಿಸಿದಕ್ಕಾಗಿ ಕ್ಷಮೆ ಇರಲಿ’ ಎಂದು ಧೈರ್ಯವಾಗಿ ಹೇಳುವು ದರಿಂದ ಪ್ರೀತಿ ಇನ್ನಷ್ಟು ಬಲವಾಗುವುದು.

೩ ಮನಸ್ಸು ಮುಕ್ತವಾಗಿರಲಿ
ಕೆಲವು ಪ್ರೇಮಿಗಳು ನಾನು ಹೇಳಿದ್ದೇ ಆಗಬೇಕು, ನನ್ನ ಮಾತೇ ಕೇಳಬೇಕು ಎನ್ನುವುದುಂಟು. ಗೆಳೆಯರೊಂದಿಗೆ ಹೊರಗಡೆ ಇದ್ದೇನೆ ಎಂದಾಗ ನೋಡೋಣ ಸೆಲಿ ಕಳುಹಿಸು ಅಥವಾ ವಿಡಿಯೋ ಕಾಲ್ ಮಾಡು ಎಂದು ಪೀಡಿಸುವುದು, ಮನಸ್ತಾಪಕ್ಕೆ, ಜಗಳಕ್ಕೆ ಕಾರಣವಾಗುತ್ತದೆ. ಗೆಳೆಯರು ಕೂಡ ದೂರ ಆಗುವ ಸಾಧ್ಯತೆ ಇರುತ್ತದೆ. ಬದಲಾಗಿ ‘ಎಂಜಾಯ್ ಮಾಡು, ಜಾಗ್ರತೆ ಆಗಿರು, ಏನಾದ್ರೂ ಹೇಳಬೇಕೆಂದರೆ ಕರೆ ಮಾಡು’ ಎಂದರೆ ಸಾಕು ಪ್ರೀತಿ ಇನ್ನೂ ಮುದ್ದಾಗಿರುತ್ತದೆ.

೪ ಅತಿಯಾದ ನಿರ್ಬಂಧ ಬೇಡ
ಪ್ರೇಮಿಯನ್ನು ಅತಿಯಾಗಿ ನಿರ್ಬಂಧಿಸಬೇಡಿ. ನೀನು ಇಂತದ್ದೇ ಬಟ್ಟೆ ಹಾಕಿಕೋ, ಇದೇ ತರ ಇರಬೇಕು ಎಂದು ಪದೇ ಪದೇ ಹೇಳುತ್ತಾ ಕಿರಿಕಿರಿ ಮಾಡಬೇಡಿ. ಬದಲಾಗಿ ಅವರ ಇಷ್ಟಗಳನ್ನು ಗೌರವಿಸಿ.

೫ ಅನವಶ್ಯಕ ಕರೆ ಮಾಡಬೇಡಿ
ಕೆಲವು ಪ್ರೇಮಿಗಳು ಪದೇ ಪದೇ ಕರೆ ಮಾಡಿ ಕಿರಿಕಿರಿ ಮಾಡುವುದು ಹಿಂಸೆಯಾಗುತ್ತದೆ. ಆ ಸಂದರ್ಭದಲ್ಲಿ ಮೊಬೈಲ್ ಸ್ವಿಚ್ ಆಫ್  ಮಾಡಿದರೆ ಗಲಾಟೆ, ಕೋಪ, ರಾದ್ಧಾಂತ ವಾಗುತ್ತದೆ. ಬದಲಾಗಿ ನಿಮ್ಮ ಬಿಡುವಿನ ಸಮಯವನ್ನು ತಿಳಿಸಿ ಕರೆ ಮಾಡಿ ವಿಚಾರಿಸಿ ಕೊಳ್ಳಿ. ಪ್ರೀತಿಯನ್ನು ಹಂಚಿಕೊಳ್ಳಿ.

೬ ತಪ್ಪುಗಳನ್ನು ಪದೇ ಪದೇ ನೆನಪಿಸಬೇಡಿ
ಅಕಸ್ಮಾತ್ ಏನಾದ್ರೂ ತಪ್ಪು ಮಾಡಿದರೆ ಅದನ್ನು ಮತ್ತೆ ಮತ್ತೆ ಎತ್ತು ಹೇಳುತ್ತಿರಬೇಡಿ. ಇದು ಪ್ರೇಮಿಯಲ್ಲಿ ಬೇಸರ ಮೂಡಿಸು ತ್ತದೆ. ಬದಲಾಗಿ ಇನ್ನು ಮುಂದೆ ತಪ್ಪು ಮಾಡದಂತೆ ಸಕಾರಾತ್ಮಕವಾಗಿ ತಿಳಿ ಹೇಳಿ. ಹೀಗೆ ಮಾಡುತ್ತಿದ್ದರೆ ಸರಿ ಹೋಗುತ್ತಿತ್ತು ಎನ್ನಿ. ಎಂದಿಗೂ ಸಮರ್ಥಿಸಿಕೊಳ್ಳಬೇಡಿ ತಪ್ಪುಗಳು ಹೆಚ್ಚಾಗಬಹುದು.

೭ ವೈಯಕ್ತಿಕವಾಗಿ ಗೌರವಿಸಿ
ತಾವು ಪ್ರೀತಿಸುವ ವ್ಯಕ್ತಿಯ ವೈಯಕ್ತಿಕ ಜೀವನವನ್ನು ಗೌರವಿಸಿ. ಅವರ ಬಗ್ಗೆ ಹೇಳಿಕೊಂಡಾಗ, ಹೊಗಳಿಕೊಂಡಾಗ ಸುಮ್ಮನೆ ಆಲಿಸಿ. ವೈಯಕ್ತಿಕವಾಗಿ ಹೀಯಾಳಿಸಿಬೇಡಿ. ಪ್ರೀತಿಯಲ್ಲಿ ತಾಳ್ಮೆಯು ಮುಖ್ಯ. ಕಷ್ಟಗಳು ಇಂದಲ್ಲ ನಾಳೆ ಸರಿಯಾಗಬಹುದೆಂದು
ಧೈರ್ಯ ತುಂಬಿ. ಆಗ ಪ್ರೀತಿ ಹೆಚ್ಚಾಗುತ್ತದೆ.

೮ ಪೋಷಕರನ್ನು ಹೀಯಾಳಿಸಿಬೇಡಿ
ಯಾವುದೇ ಕಾರಣಕ್ಕೂ ಪೋಷಕರನ್ನು ದೂರಬೇಡಿ. ನಿಮ್ಮ ಕೋಳಿ ಜಗಳದ ಮಧ್ಯೆ ಅವರನ್ನು ತರಬೇಡಿ. ನಂಬಿಕೆ ಉಳಿಸಿ ಕೊಳ್ಳುವ ಸಲುವಾಗಿ ಆಣೆ ಪ್ರಮಾಣ ಮಾಡಬೇಡಿ. ನಿಮ್ಮ ಹೆತ್ತ ತಂದೆ ತಾಯಿಯನ್ನು ಗೌರವಿಸಿ.

೯ ಪ್ರೀತಿಯಲ್ಲಿ ಮೈ ಮರೆಯಬೇಡಿ
ಪ್ರೀತಿ ಮಾಡುವ ಸಂದರ್ಭದಲ್ಲಿ ಪವಿತ್ರವಾದ ಪ್ರೀತಿಯನ್ನಷ್ಟೇ ಅನುಭವಿಸಿ. ದೇಹ ಸುಖದ ಆಸೆ ಬೇಡ. ಏಕೆಂದರೆ ಇದು ಪ್ರೀತಿ ಮುರಿದುಕೊಳ್ಳುವ ಸಂದರ್ಭ ಸೃಷ್ಟಿಸಲೂ ಬಹುದು, ದೊಡ್ಡ ಅನಾಹುತ ತಂದಿಡಬಹುದು.

೧೦ ಭೇಟಿಯ ಸಂದರ್ಭದಲ್ಲಿ ಎಚ್ಚರ ಇರಲಿ
ಪರಸ್ಪರ ಭೇಟಿಯಾಗುವ ಸಂದರ್ಭದಲ್ಲಿ ಚೆಲ್ಲು ಚೆಗಿ ವರ್ತಿಸಬೇಡಿ. ಇದು ಮುಜುಗರ ಉಂಟು ಮಾಡಬಹುದು. ಅತಿಯಾಗಿ ಖರ್ಚು ಮಾಡಬೇಡಿ. ಮಾತನಾಡುವಾಗ ಪದೇ ಪದೇ ಮೊಬೈಲ್ ನೋಡಬೇಡಿ. ಎದುರು ಬದುರಾಗಿ ಕುಳಿತಾಗ ಪ್ರೇಮಿಯ
ಕಣ್ಣುಗಳನ್ನು ದಿಟ್ಟಿಸಿ ನೋಡಿ. ಆಕೆ ಅಥವಾ ಆತನ ವ್ಯಕ್ತಿತ್ವವನ್ನು ಸರಿಯಾಗಿ ಅಳೆಯಿರಿ.

ಉತ್ತಮ ವರ್ತನೆಯನ್ನು ಹೊಗಳಿಕೊಳ್ಳಿ. ಪರಸ್ಪರ ಕಷ್ಟಗಳಿಗೆ ಸ್ಪಂದಿಸಿ, ನೆರವಾಗಿ. ಭೇಟಿಯಾಗುವ ಸಮಯವನ್ನು ಸುಂದರ ವಾಗಿ ಕಳೆಯಿರಿ. ಪದೇ ಪದೇ ಭೇಟಿಯಾಗಬೇಡಿ. ಇದು ಅತಿಯಾದ ಸಲುಗೆಗೆ ಕಾರಣವಾಗುತ್ತದೆ. ಕೋಪ ಬಂದಾಗ ಸಾರ್ವಜನಿಕ ವಾಗಿ ಅವಮಾನಿಸಿಸಬೇಡಿ. ಇನ್ನೊಬ್ಬರನ್ನು ಹೋಲಿಕೆ ಮಾಡಬೇಡಿ. ಪ್ರೀತಿ ಸೂಕ್ಷ್ಮ. ಕನ್ನಡಿ ಒಮ್ಮೆ ಒಡೆದು ಚೂರಾದರೆ ಜೋಡಿಸುವುದು ಕಷ್ಟ. ಜೋಡಿಸಿದರೂ ಮೊದಲಿನ ಸೌಂದರ್ಯ ಇರಲಾರದು. ಆದ್ದರಿಂದ ಪ್ರೀತಿಯನ್ನು ಪ್ರೀತಿಯಿಂದ ಉಳಿಸಿ, ಬೆಳೆಸಿ, ಸಲಹಿ.

ಕಿವಿಮಾತು: ಪ್ರೀತಿಯಲ್ಲಿ ಮುನಿಸು ಸಹಜ. ಕೋಪ ಬಂದಾಗೆಲ್ಲ ಸುಮ್ಮನೆ ಇರಿ, ಸ್ವಲ್ಪ ಹೊತ್ತು ಕಳೆದು, ‘ಬೇಬಿ, ನಾನೊಮ್ಮೆ
ನಿಮ್ಮನ್ನು ಅಪ್ಪಿಕೊಳ್ಳಲೇ?’ ಎಂದು ದೀನವಾಗಿ ಕೇಳಿ. ನಿಜವಾದ ಪ್ರೇಮಿ ‘ನೋ’ ಅನ್ನೊದಿಲ್ಲ. ಇನ್ನೆಲ್ಲಿದೆ ಕೋಪ? ಇಂತಹ ರಗಳೆ ಬೇಡವೆಂದರೆ ಪ್ರೀತಿಯ ವಿಚಾರಕ್ಕೆ ತಲೆ ಹಾಕದೆ ಆರಾಮವಾಗಿರಿ. ಬಿಂದಾಸ್ ಆಗಿ ಹೊಸತ್ತನ್ನು ಕಲಿಯುವತ್ತ ಮನಸ್ಸು ಮಾಡಿ.