ಕೊರಟಗೆರೆ: ನಮಸ್ಕಾರ ಎಸ್ಪಿ ಸಾಹೇಬರೇ ನಾವು ಕಳೆದ 4ವರ್ಷದಿಂದ ಪರಸ್ಪರ ಪ್ರೀತಿಸಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದೀವಿ.. ನಮ್ಮ ಬಳಿ ಮದುವೆ ಆಗಿರುವ ಪ್ರಮಾಣ ಪತ್ರ ಇದೆ ನಮಗೆ ರಕ್ಷಣೆ ನೀಡಿ ಎಂಬ ವಿಡೀಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ನಮ್ಮೀಬ್ಬರ ಸ್ವಇಚ್ಚೆಯಿಂದ ಮಧುವೆ ಆಗಿದ್ದೇವೆ. ನಮಗೆ ಯಾರು ಸಹ ಬೆಂಬಲ ನೀಡಿಲ್ಲ. ನಮಗೆ ರಕ್ಷಣೆ ನೀಡಿದರೇ ಕೊರಟಗೆರೆ ಠಾಣೆಗೆ ಬರಲು ಸಿದ್ದರಿದ್ದೇವೆ. ಇಲ್ಲವಾದಲ್ಲಿ ಆತ್ಮಹತ್ಯೆಯೇ ನಮಗೆ ದಾರಿ ಎಂದು ಯುವ ಪ್ರೇಮಿಗಳು ತುಮಕೂರು ಎಸ್ಪಿ ಮತ್ತು ಕೊರಟಗೆರೆ ಸಿಪಿಐಗೆ ಮನವಿ ಮಾಡಿಕೊಂಡಿದ್ದಾರೆ.
ನಮ್ಮ ಪ್ರೀತಿಯ ವಿಚಾರ ಮನೆಯಲ್ಲಿ ತಿಳಿಸಿದರೂ ನಮಗೆ ಒಪ್ಪಿಗೆ ನೀಡಿದಿರುವ ಪರಿಣಾಮ ಪೋಷಕರ ವಿರೋದದ ನಡುವೆ ನಾವು ಮದುವೆ ಆಗಿದ್ದೇವೆ. ಕೊರಟಗೆರೆ ಪಟ್ಟಣದ 4ನೇ ವಾರ್ಡಿನ ವಾಸಿಯಾದ ನೇಹಭಾನು ಆದ ನನಗೆ 22ವರ್ಷ ಮತ್ತು ನನ್ನ ಗಂಡ ಶಬ್ಬೀರ್ ಎಂಬಾತನಿಗೆ 23ವರ್ಷ ವಯಸ್ಸಾಗಿದೆ ಎಂದು ವಿಡೀಯೊದಲ್ಲಿ ತಿಳಿಸಿದ್ದಾರೆ.
ಸಿಪಿಐ ನಧಾಪ್ ಪ್ರತಿಕ್ರಿಯೆ..: ಪೋಷಕರು ತಮ್ಮ ಮಗಳು ಕಾಣೆ ಆಗಿರುವ ಬಗ್ಗೆ ನೀಡಿದ ದೂರಿನ ಅನ್ವಯ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಇಬ್ಬರು ದಂಪತಿಗಳು ಠಾಣೆಗೆ ಬಂದಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರು ವಯಸ್ಕರಾದ ಪರಿಣಾಮ ಬದುಕಲು ಅವಕಾಶ ಕಲ್ಪಿಸಲಾಗಿದೆ ಎಂದು ಕೊರಟಗೆರೆ ಸಿಪಿಐ ನಧಾಪ್ ಪ್ರತಿಕ್ರಿಯೆ ನೀಡಿದ್ದಾರೆ.