Tuesday, 21st March 2023

ಮದಲೂರು ಕೆರೆಗೆ ನೀರು ಹರಿಸಿದರೆ ಜೈಲಿಗೆ ಕಳುಹಿಸುತ್ತೇನೆ: ಸಚಿವ ಮಾಧುಸ್ವಾಮಿ

ಜೈಲಿಗೆ ಹೋಗುವುದಾದರೆ ನಾನೆ ಮೊದಲು ಹೋಗುತ್ತೇನೆ: ಶಾಸಕ ರಾಜೇಶ್ ಗೌಡ

ತುಮಕೂರು: ಶಿರಾ ಉಪಚುನಾವಣೆ ನಂತರ ಮೌನವಾಗಿದ್ದ ಮದಲೂರು ಕೆರೆಗೆ ನೀರು ಹರಿಸುವ ವಿಚಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಜಿಪಂ ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಮಾತನಾಡಿ, ಹೇಮಾವತಿ ನೀರನ್ನು ಶಿರಾ, ಕಳ್ಳಂಬೆಳ್ಳ ಕೆರೆಗೆ ಹರಿಸಬೇಕು, ಮದಲೂರು ಕೆರೆಗೆ ನೀರು ಹರಿಸಿದರೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಯಿಸಿರುವ ಶಾಸಕ ರಾಜೇಶ್ ಗೌಡ, ಉಪಚುನಾವಣೆಯಲ್ಲಿ ನೀಡಿದ್ದ ವಾಗ್ದಾನದಂತೆ ಮದಲೂರು ಕೆರೆಗೆ ನೀರು ಹರಿಸಲು ಪಕ್ಷ, ಸರಕಾರ ಬದ್ದವಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೂ ಮಾತನಾಡಲಾಗಿದೆ. ನೀರು ಹರಿಸುವ ವಿಚಾರವಾಗಿ ಜೈಲಿಗೆ ಹೋಗುವುದಾದರೆ ನಾನೆ ಮೊದಲು ಹೋಗುತ್ತೇನೆ ಎಂದು ಹೇಳಿದ್ದಾರೆ.

ಸಚಿವ ಮಾಧುಸ್ವಾಮಿಯವರ ಮಾತು ಜಿಲ್ಲಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಉಪಚುನಾವಣೆಯಲ್ಲಿ ಗೆದ್ದ ನಂತರ ಮದಲೂರು ಕೆರೆ ಮರೆಯುವುದು ಸರಿಯಲ್ಲ, ಇದೇ ರೀತಿಯಾದರೆ ಪ್ರತಿಭಟನೆ ನಡೆಸಲಾಗುವುದೆಂದು ಹೋರಾಟಗಾರರು ಎಚ್ಚರಿಸಿದ್ದಾರೆ.

error: Content is protected !!