Wednesday, 28th July 2021

ಮಧುಗಿರಿ – ಶಿರಾ ರಾ.ಹೆದ್ದಾರಿ ಚತುಷ್ಪಥ ರಸ್ತೆಗೆ 265 ಕೋಟಿ ರೂ ಮಂಜೂರು

ಮಧುಗಿರಿ : ಮಧುಗಿರಿ – ಶಿರಾ ರಾಷ್ಟ್ರೀಯ ಹೆದ್ದಾರಿಯನ್ನು ಚತುಶ್ಪಥ ರಸ್ತೆಯನ್ನಾಗಿ ಮಾಡಲು 265 ಕೋಟಿ ರೂಗಳನ್ನು ಹೆದ್ದಾರಿ ಸಚಿವಾಲಯ ಮಂಜೂರು ಮಾಡಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ಪಟ್ಟಣದ ಮಾಲೀಮರಿಯಪ್ಪ ರಂಗಮಂದಿರದಲ್ಲಿ ೧೫೦ ಕ್ಯಾಬ್ ಚಾಲಕರಿಗೆ ವೈಯಕ್ತಿಕವಾಗಿ ಆಹಾರದ ಕಿಟ್ ವಿತರಿಸಿ ಮಾತನಾಡಿದ ಅವರು, ಉಪ ವಿಭಾಗದ ಶಿರಾ – ಮಧುಗಿರಿ ಹೆದ್ದಾರಿಯನ್ನು ಚತುಶ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ೨೬೫ ಕೋಟಿ ರೂ ಅನುದಾನ ಮಂಜೂರಾಗಿದೆ. ಕಾಮಗಾರಿ ಆರಂಭಿಸಿ ಭೂ ಸ್ವಾಧೀನಕ್ಕಾಗಿ ೨೦ ಕೋಟಿ ಈಗಾಗಲೇ ಸಿದ್ಧವಾಗಿದೆ. ಇದರೊಂದಿಗೆ ಮಧುಗಿರಿಯ ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸಲು ಹಣ ಮಂಜೂರು ಮಾಡಲು ಕೇಂದ್ರ ಪುರಾತತ್ವ ಇಲಾಖೆಯ ಮಾನದಂಡದ್ದಿAದಾಗಿ ವಿಳಂಬವಾಗುತ್ತಿದ್ದು ಇಲಾಖೆಯು ಕೂಡಲೇ ಅನುಮತಿ ನೀಡಬೇಕೆಂದು ಒತ್ತಾಯಿಸಿದ ಅವರು ಇದರಿಂದ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಆರ್ಥಿಕ ಚಟುವಟಿಕೆಗಳು ಆರಂಭ ಗೊಳ್ಳಲಿದೆ ಎಂದರು.

ಕರೊನಾ ಮಹಾಮಾರಿಯಾಗಿದ್ದು, ದೇಶದ ಯುವ ಸಂಪತ್ತಾದ ಮಕ್ಕಳ ಶಿಕ್ಷಣವನ್ನು ಕಸಿದುಕೊಂಡಿದೆ. ಇದು ನಿವಾರಣೆಯಾ ಗಲು ಹಾಗೂ ಕರೊನಾ ಆರ್ಭಟ ತಡೆಯಲು ಎಲ್ಲರೂ ಮುಂಜಾಗ್ರತಾ ಕ್ರಮವಾಗಿ ಲಸಿಕೆಯನ್ನು ಕಡ್ಡಾಯವಾಗಿ ಪಡೆಯುವುದು ಉತ್ತಮ ಎಂದರು.

ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಮಾತನಾಡಿ, ಚಾಲಕರ ಬದುಕು ಲಾಕ್‌ಡೌನ್ ನಿಂದಾಗಿ ಸಂಕಷ್ಟದಲ್ಲಿದೆ. ಇದನ್ನು ಅರಿತು ಶಾಸಕರು ವೈಯಕ್ತಿಕ ಸಹಾಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಎಲ್ಲರೂ ಕುಟುಂಬದ ರಕ್ಷಣೆಗಾಗಿ ಲಸಿಕೆ ಪಡೆಯಿರಿ ಎಂದರು.

ತಹಶೀಲ್ದಾರ್ ವೈ.ವಿ.ರವಿ ಮಾತನಾಡಿ, ಸಾವಿರ ಸಂಖ್ಯೆಯಲ್ಲಿದ್ದ ಸೋಂಕಿತರ ಸಂಖ್ಯೆ ಈಗ ಒಂದAಕಿಗೆ ಇಳಿದಿದ್ದು, ಶಾಸಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಸಾಧ್ಯವಾಗಿದೆ. ಮುಂದೆಯೂ ೩ ನೇ ಅಲೆ ಬರಲಿದ್ದು, ಮಕ್ಕಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಅದಕ್ಕಾಗಿ ಸರಕಾರ ಉಚಿತವಾಗಿ ನೀಡುತ್ತಿರುವ ಲಸಿಕೆಯನ್ನು ಎಲ್ಲರೂ ಕಡ್ಡಾಯವಾಗಿ ಪಡೆಯಬೇಕು ಎಂದರು.

ಡಿವೈಎಸ್ಪಿ ರಾಮಕೃಷ್ಣ, ತಾ.ಪಂ.ಇಓ ದೊಡ್ಡಸಿದ್ದಯ್ಯ, ಪುರಸಭೆ ಸದಸ್ಯರಾದ ಚಂದ್ರಶೇಖರ್‌ಬಾಬು, ಗಂಗರಾಜು, ಕೆ.ನಾರಾಯಣ್, ನರಸಿಂಹಮೂರ್ತಿ, ಮುಖ್ಯಾಧಿಕಾರಿ ಅಮರನಾರಾಯಣ್, ಜೆಡಿಎಸ್ ಮುಖಂಡ ತುಂಗೋಟಿ ರಾಮಣ್ಣ, ಎಸ್ಸಿ ಘಟಕದ ಅಧ್ಯಕ್ಷ ಗುಂಡಗಲ್ಲು ಶಿವಣ್ಣ, ಹೋಬಳಿ ಅಧ್ಯಕ್ಷ ತಿಮ್ಮಣ್ಣ, ನಿವೃತ್ತ ಪ್ರಾಂಶುಪಾಲ ಟಿ. ಗೋವಿಂದರಾಜು, ಕ್ಯಾಬ್ ಚಾಲಕರು ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *