Tuesday, 17th May 2022

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಯಶಸ್ವಿ “ಮಾಧ್ಯಮ ಸೇವಾರತ್ನ ಪ್ರಶಸ್ತಿ ಪ್ರದಾನ” ಕಾರ್ಯಕ್ರಮ

ರಾಯಚೂರು: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಮಲ್ಲೇಶ್ವರಂ ಬಳಿಯಿರುವ ಪ್ರಸಿದ್ಧ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಪತ್ರಿಕೋದ್ಯಮದಲ್ಲಿ ಅಪಾರ ಸಾಧನೆ ಮಾಡಿರುವ ಹಿರಿಯ ಪತ್ರಕರ್ತರಿಗೆ “ಮಾಧ್ಯಮ ಸೇವಾ ರತ್ನ ಪ್ರಶಸ್ತಿ” ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹಿರಿಯ ಪತ್ರಕರ್ತರನ್ನು ಮತ್ತು ಗಣ್ಯರನ್ನು ಪ್ರಸಿದ್ಧ ಜಾನಪದ ಕಲಾ ತಂಡಗಳು ಅದ್ದೂರಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆ ತರಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವನ್ನು ಪರಮ ಪೂಜ್ಯ ಮಹರ್ಷಿ ಡಾ. ಆನಂದ್ ಗುರೂಜಿಯವರು ವಹಿಸಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಡಾ. ಟಿ.ಎಸ್. ನಾಗಭರಣರವರು ಮತ್ತು ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ರವರು ಆಗಮಿಸಿದ್ದರು.

ಗಣ್ಯರೆಲ್ಲ ಸೇರಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಧ್ಯಮ ಸೇವಾರತ್ನ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸುಚಿಸುವ ಸಲುವಾಗಿ ಡಿಸ್ಟ್ರಿಕ್ 317 F ಲಯನ್ಸ್ ಕ್ಲಬ್ ವತಿಯಿಂದ ಶ್ರೀಮತಿ ಗೌರಿಯವರು ಗೌರವಯುತವಾಗಿ ಧ್ವಜ ವಂದನೆ ಕಾರ್ಯಕ್ರಮ ನಡೆಸಿಕೊಟ್ಟರು.ಈ ಸಮಯದಲ್ಲಿ ಎಲ್ಲರೂ ನಿಂತು ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡುವುದರ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು. ಜಿ.ಎನ್.ರವಿಕುಮಾರ್ ರವರು ಎಲ್ಲಾ ಅತಿಥಿಗಳಿಗೆ ಆತ್ಮೀಯ ಸ್ವಾಗತ ಕೋರಿದರು.

ಮಹೇಶ್ ಲಲಿತ ಕಲಾ ತಂಡದವರು ಹಚ್ಚೇವು ಕನ್ನಡದ ದೀಪ ಗೀತೆಗೆ ಸುಂದರ ನೃತ್ಯ ಮಾಡಿ, ನೋಡಗರ ಮನ ಸೆಳೆದರು.
ಕಾರ್ಯಕ್ರಮದ ರೂವಾರಿಗಳಾದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಡಾ. ಟಿ. ಶಿವಕುಮಾರ್ ನಾಗರ ನವಿಲೆಯವರು ತಮ್ಮ ಪ್ರಾಸ್ತಾವಿಕ ನುಡಿಗಳನ್ನಡುತ್ತಾ. ನಮ್ಮ ಸಂಸ್ಥೆ ಸದಾ ಪತ್ರಕರ್ತರ ಬೆನ್ನೆಲುಬಾಗಿ ನಿಂತಿದೆ. ಸುದ್ದಿ ವಿನಿಮಯವಾಗುವಲ್ಲಿ ಇವರ ಪಾತ್ರ ಅಪಾರವಾಗಿದ್ದು, ಇವರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಈಗಾಗಲೇ ನಮ್ಮ ಸಂಸ್ಥೆ ಬಹಳಷ್ಟು ಕಾರ್ಯಕ್ರಮಗಳಲ್ಲಿ ಇವರನ್ನು ಗುರುತಿಸುವ ಕೆಲಸ ಮಾಡಿದ್ದೇವೆ.

ಪತ್ರಕರ್ತರ ಮಕ್ಕಳಿಗೆ ಟ್ಯಾಬ್ ನೀಡುವುದು, ಪುಸ್ತಕ ವಿತರಣೆ, ಉಚಿತ ವಿದ್ಯಾಭ್ಯಾಸ ನೀಡುವ ಕೆಲಸ ಮಾಡಿದ್ದೇವೆ. ಈ ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿರುವ ಹಿರಿಯ ಪತ್ರಕರ್ತ ರಿಗೆ “ರಾಜ್ಯ ಮಾಧ್ಯಮ ಸೇವಾರತ್ನ ಪ್ರಶಸ್ತಿ” ನೀಡುತ್ತಿರುವುದು ನನಗೆ ಬಹಳ ಸಂತೋಷವಾಗುತ್ತಿದೆ. ನನ್ನ ಬಹುದಿನಗಳ ಕನಸು ಈ ದಿನ ನನಸಾಗಿದೆ. ನಮ್ಮ ಸಂಸ್ಥೆ ವತಿಯಿಂದ ಹಾಗೂ ವಯಕ್ತಿಕವಾಗಿ ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳನ್ನು ತಿಳಿಸುತ್ತಾ, ಕಾರ್ಯಕ್ರಮಕ್ಕೆ ಆಗಮಿಸಿ ಸಹಕರಿಸಿದ ಅತಿಥಿ ಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಎಲ್.ಎಸ್.ಶಾಸ್ತ್ರಿ, ಸಿದ್ದರಾಜು, ಎಂ.ಎಸ್. ಮಣಿ, ಮಾಲತೇಶ್ ಅಂಗೂರ, ಪಿ.ಆರ್.ಓ. ನಾಗೇಂದ್ರ, ಮಹೇಶ್ ಅಂಗಡಿ, ಶಿವಲಿಂಗಪ್ಪ ದೊಡ್ಡಮಣಿ, ನಂಜುಂಡಪ್ಪ.ವಿ, ಮಹಮ್ಮದ್ ಬಾಷಾ ಗೂಳ್ಯ, ಕೆ. ಎಸ್. ಸೋಮಶೇಖರ್, ಲೋಚನೇಶ್ ಬಸಪ್ಪ ಹೂಗಾರ, ಎಸ್. ಕೇಶವ, ಡಾ.ಉದಯರವಿ, ಡಾ. ಶೇಖರ ಅಜೆಕಾರು, ಸಿ.ಎಂ.ಜೋಶಿ, ಸಿದ್ದರಾಮಪ್ಪ ಸಿರಿಗೇರಿ, ವಾಸುದೇವ್ ಜೋಶಿ ರವರಿಗೆ ರಾಜ್ಯ ಮಾಧ್ಯಮ ಸೇವಾರತ್ನ ಪ್ರಶಸ್ತಿಯನ್ನು,ಎಂ. ಡಿ. ಕೌಶಿಕ್, ಅಣಜಿ ನಾಗರಾಜ್, ನಿರ್ಮಲ ಡಿ. ಆರ್ ಇವರಿಗೆ ರಾಜ್ಯ ಕಲಾ ಸೇವಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪ್ರಶಸ್ತಿ ವಿತರಿಸಿ ಮಾತನಾಡಿದ ಡಾ. ಸಿ. ಸೋಮಶೇಖರ್ ರವರು ಶಿವಕುಮಾರ್ ರವರ ಪ್ರಾಮಾಣಿಕತೆ ಈ ದಿನ ವೇದಿಕೆಯೇ ನಿರೂಪಿಸು ತ್ತಿದೆ. ಬಹಳ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದ್ದು, ಇವರ ಸಂಸ್ಥೆ ಇನ್ನಷ್ಟು ಸಾಧನೆ ಮಾಡಲಿ ಹಾಗೆಯೇ ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು ಎಂದರು. ನಂತರ ಡಾ. ಟಿ. ಎಸ್. ನಾಗಭರಣರವರು ಮಾತನಾಡಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡುವುದರ ಜೊತೆಗೆ ನಾಡಿನ ಜಾನಪದ ಕಲೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದೆ ಶುಭ ವಾಗಲಿ ಇನ್ನಷ್ಟು ಯಶಸ್ವಿ ಕಾರ್ಯಕ್ರಮಗಳು ನಿಮ್ಮಿಂದಾಗಲಿ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಡಾ. ವಿ. ಸೌಭಾಗ್ಯ ಮತ್ತು ಕೃಷ್ಣೆಗೌಡ ರವರಿಗೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ 2021ನೇ ಸಾಲಿನ “ಆದರ್ಶ ದಂಪತಿಗಳ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಮಹರ್ಷಿ ಡಾ.ಆನಂದ್ ಗುರೂಜಿಯವರು ಮಾತನಾಡುತ್ತಾ, ಶಿವಕುಮಾರ್ ಯಾವುದೇ ಕೆಲಸ ಮಾಡಿದರೂ,ಅದರ ಹಿಂದೆ ಒಳ್ಳೆ ಉದ್ದೇಶವಿರುತ್ತದೆ. ಇಂದಿನ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ನಿಮ್ಮ ಪ್ರತಿ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಮತ್ತು ಆಶೀರ್ವಾದ ಇದ್ದೆ ಇರುತ್ತೆ ಎಲ್ಲರಿಗೂ ಶುಭವಾಗಲೆಂದು ಹರಸಿದರು. ಪ್ರಖ್ಯಾತ ಜಾದೂಗಾರರಾದ ಎಂ.ಡಿ. ಕೌಶಿಕ್ ರವರು ಮ್ಯಾಜಿಕ್ ಮಾಡುವುದರ ಮೂಲಕ ರಂಜಿಸಿದರು. ನಿರ್ಮಲ ಮತ್ತು ಅರುಣ್ ರವರು ಸುಗಮ ಸಂಗೀತವನ್ನು ಹಾಡಿ ನೆರೆದ ಜನರ ಮನಗಳನ್ನು ತಣಿಸಿದರು. ರವಿಸಂತು ಮತ್ತು ಶ್ವೇತರವರು ಅದ್ಭುತವಾದ ನಿರೂಪಣೆ ಮಾಡಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.

ಈ ಸುಂದರ ಸಂದರ್ಭದಲ್ಲಿ ಡಾ. ಲಯನ್ ಶೋಭಾ, ಪದ್ಮನಾಗರಾಜ್, ಸ್ನೇಹ ರಾಕೇಶ್, ಡಾ. ವಿ. ಸೌಭಾಗ್ಯ, ಕೃಷ್ಣೆಗೌಡ, ಕಲಾನವೀನ್ ಮತ್ತು ಜ್ಯೋತಿ ತಲ್ಲೂರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.