Thursday, 2nd February 2023

ಕಾಫಿ ತೋಟಗಳಲ್ಲಿ ವನ್ಯಜೀವಿ ದಾಂಧಲೆ: ಸ್ಪಂದಿಸದ ಅರಣ್ಯ ಸಚಿವ

ಮಡಿಕೇರಿ: ಕಾಡಾನೆ, ನವಿಲು, ಚಿರತೆ, ಹುಲಿ, ಮಂಗ, ಕಾಡೆಮ್ಮೆ, ಕಾಡುಹಂದಿ ಹಾವಳಿಯಿಂದಾಗಿ ಬೆಳೆಗಾರರಿಗೆ ತೀವ್ರ ನಷ್ಟ ವಾಗುತ್ತಿದ್ದರೂ ಅರಣ್ಯ ಸಚಿವರು ಸ್ಪಂದಿಸುತ್ತಿಲ್ಲ.

ಕಾಫಿ ಬೆಳೆಗಾರರ 23 ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಅಸಮಧಾನ ಇಂಥ ಒಂದು ಅಸಮಾಧಾನ ವ್ಯಕ್ತವಾಗಿದೆ.

ಮಡಿಕೇರಿಯಲ್ಲಿ ಕನಾ೯ಟಕ ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಪ್ರಮುಖರು ಅತೖಪ್ತಿ ಹೊರ ಹಾಕಿದ್ದು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಕನಾ೯ಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ ಹೆಚ್.ಟಿ. .ಮೋಹನ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಅರಣ್ಯ ಸಚಿವ ಆನಂದ್ ಸಿಂಗ್ ಧೋರಣೆಗೆ ಸಭೆಯಲ್ಲಿ ಖಂಡನೆ ವ್ಯಕ್ತವಾಗಿದೆ.

 

error: Content is protected !!