Monday, 5th December 2022

ಪ್ರಿನ್ಸ್ ಮಹೇಶ್ ಬಾಬು’ಗೆ ಮಾತೃವಿಯೋಗ

ಹೈದರಾಬಾದ್:‌ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಾಯಿ ಇಂದಿರಾ ದೇವಿ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಇಂದಿರಾ ದೇವಿ ಕಳೆದ ಕೆಲವು ವಾರಗಳಿಂದ ಅಸ್ವಸ್ಥರಾಗಿದ್ದು, ಹೈದರಾ ಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೃಷ್ಣ ಹಾಗೂ ಇಂದಿರಾದೇವಿಗೆ ರಮೇಶ್ ಬಾಬು ಮತ್ತು ಮಹೇಶ್ ಬಾಬು ಇಬ್ಬರು ಗಂಡು ಮಕ್ಕಳು ಹಾಗೂ ಪದ್ಮಾವತಿ, ಮಂಜುಳಾ ಮತ್ತು ಪ್ರಿಯದರ್ಶಿನಿ ಮೂವರು ಹೆಣ್ಮಕ್ಕಳು ಇದ್ದಾರೆ.

ಕೆಲ ತಿಂಗಳ ಹಿಂದೆ ರಮೇಶ್ ಬಾಬು ಕೂಡ ಅನಾರೋಗ್ಯದಿಂದ ಮೃತಪಟ್ಟಿ ದ್ದರು. ಬೆನ್ನಲ್ಲೇ ತಾಯಿ ಇಂದಿರಾದೇವಿ ಕೊನೆಯುಸಿರೆಳೆದಿದ್ದಾರೆ.