Tuesday, 31st January 2023

ಮಂಗಳಮುಖಿ ಸರ್ಕಾರಿ ಶಿಕ್ಷಕಿಯಿಂದ ವಿಶ್ವವಾಣಿ ಪತ್ರಿಕೆಗೆ ಶುಭಹಾರೈಕೆ

ಸಂದರ್ಶನ: ಚಂದ್ರಶೇಖರ ಮದ್ಲಾಪೂರ, ವಿಶ್ವವಾಣಿ ವರದಿಗಾರ 

ಮಾನವಿ : ನಾಡಿನ ಸಮಸ್ತ ಪ್ರೋತ್ಸಾಹಕರಿಗೆ ಧನ್ಯವಾದಗಳು ತಿಳಿಸಿದ ಮಂಗಳಮುಖಿ ಶಿಕ್ಷಕಿ ಶ್ರೀ ಪೂಜಾ ( ಅಶ್ವಥಾಮ ) ನೀರಮಾನವಿ..

ನಾ ಹುಟ್ಟಿನಿಂದ ಗಂಡಸಿನ ದೇಹವಿದ್ದರೂ ಹೆಣ್ಣಿನ ಮನೋಭಾವದೊಂದಿಗೆ ಬೆಳೆ ದವರು ಪ್ರಾಥಮಿಕ ಶಿಕ್ಷಣದಿಂದ ಎಂ, ಎ, ಬಿ ಇ ಎಡ್ ವಿದ್ಯಾಭ್ಯಾಸ ಮುಗಿಯುವವರೆಗೂ ನಮ್ಮೂರಿನ ಸರ್ಕಾರಿ ಶಾಲೆಯಲ್ಲಿಯೇ ಒದಿದ್ದು ನಂತರ ಹೆಣ್ಣಿನ ಭಾವನೆಯನ್ನು ಹೊಂದಿರುವ ನಾನು ಎಲ್ಲರಂತೆಯೇ ಕುಟುಂಬದ ವಿರೋಧವನ್ನು ಎದುರಿಸ ಕನಿಷ್ಠ 7 ವರ್ಷಗಳ ಕಾಲ ಅಜ್ಞಾತ ದಿನಗಳನ್ನು ಅನುಭವಿಸಿದೆ.

ನಂತರ ನಮ್ಮ ಕುಟುಂಬದವರು ಪ್ರೀತಿ ವಿಶ್ವಾಸ ನಂಬಿಕೆಯೊಂದಿಗೆ ಮನೆಗೆ ಆಗಮಿಸಿದ ನಾನು ಶಿಕ್ಷಣವನ್ನು ಮುಂದುವರೆಸಿ ಇಂದಿನ ಸುಪ್ರೀಂ ಕೋರ್ಟ್ ಆದೇಶದಂತೆ ನಮ್ಮ ಸಮುದಾಯಕ್ಕೆ ಶೇಕಡಾ ೧% ರಷ್ಟು ನೀಡಿದ ಮೀಸಲಾತಿಯನ್ನು ಸದ್ಬಳಕೆ ಮಾಡಿ ಕೊಳ್ಳಲೇಬೇಕು ಎನ್ನುವ ದೃಢ ಮನಸ್ಸಿನಿಂದ ಪ್ರಾಥಮಿಕ ಶಾಲೆ ಶಿಕ್ಷಕರ ಪರೀಕ್ಷೆಗಾಗಿ ಹಗಲಿರುಳು ಓದುವುದಕ್ಕೆ ಆರಂಭ ಮಾಡಿ ಇಂದು ಅದೇ ಮೀಸಲಾತಿಯಲ್ಲಿ 6-8 ನೇ ತರಗತಿಯ ಶಿಕ್ಷಕಿಯಾಗಿ ಆಯ್ಕೆಯಾಗಿದ್ದು ತುಂಬಾ ಸಂತೋಷದ ವಿಷಯವಾಗಿದೆ.

ಇದಕ್ಕೆ ಸಹಕಾರ ಮಾಡಿ ಪತ್ರಿಕೆ ವರದಿ ಮಾಡಿದ ವಿಶ್ವವಾಣಿ ಕನ್ನಡ ದಿನಪತ್ರಿಕೆಗೆ ಅಭಿನಂದನೆಗಳು, ಹಾಗೂ ಕುಟುಂಬದವರಿಗೆ, ನಮ್ಮ ಮಂಗಳಮುಖಿ ಸಮುದಾಯದವರಿಗೆ, ನನಗೆ ಶಿಕ್ಷಣ ನೀಡಿದ ಶಿಕ್ಷಕರಿಗೆ, ನಮ್ಮೂರಿನ ಜನರಿಗೆ ಬಹಳ ಪ್ರಮುಖವಾಗಿ ನನ್ನ ಏಳಿಗೆಯನ್ನು ಕಂಡು ಪ್ರೋತ್ಸಾಹ ನೀಡಿ ಬೆಂಬಲಿಸುತ್ತಿರುವ ರಾಜ್ಯದ ಎಲ್ಲ ಹಿರಿಯರಿಗೆ ಬಹಳ ಪ್ರಮುಖವಾಗಿ ನನ್ನ ಸಾಧನೆ ಯನ್ನು ಗುರುತಿಸಿ ಮೊಟ್ಟಮೊದಲ ಮೊದಲ ಬಾರಿಗೆ ಪತ್ರಿಕೆಯಲ್ಲಿ ಪ್ರಕಟಿಸಿದ ನನ್ನ ಸ್ನೇಹಿತ ಹಾಗೂ ಆತ್ಮೀಯ ಅಣ್ಣನಾದ ಚಂದ್ರಶೇಖರ ಮದ್ಲಾಪೂರ ಇವರಿಗೆ ಹೃದಯ ಪೂರ್ವಕವಾದ ಧನ್ಯವಾದಗಳು.

ನಿಮ್ಮ ಪ್ರೋತ್ಸಾಹ ಸದಾಕಾಲವೂ ಇದ್ದಲ್ಲಿ ಶಿಕ್ಷಕ ವೃತ್ತಿಯಲ್ಲಿ ಮುಂದುವರೆದು ಮಾದರಿಯಾಗುವ ಗುರಿಯನ್ನು ಹೊಂದಿದ್ದು ಇನ್ನೂ ಉನ್ನತ ಹುದ್ದೆಗಾಗಿ ಪ್ರಯತ್ನ ಮಾಡುತ್ತೇನೆ ಎಂದು ಪೂಜಾ ತಿಳಿಸಿದ್ದಾರೆ.

error: Content is protected !!