Friday, 7th May 2021

ರಾಬರ್ಟ್ ಮಂಗ್ಲಿಯ ಡ್ಯಾನ್ಸ್‌ ವಿಡಿಯೋ ವೈರಲ್

ಬೆಂಗಳೂರು: ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ತೆಲುಗು ವರ್ಷನ್‌ನಲ್ಲಿ ‘ಕಣ್ಣೇ ಅದಿರಿಂದಿ’ ಹಾಡನ್ನು ಹಾಡುವ ಮೂಲಕ ಜಾಲತಾಣದ ಟ್ರೆಂಡ್ ಆಗಿ ಕನ್ನಡಿಗರನ್ನು ಮೋಡಿ ಮಾಡಿದ ಮಂಗ್ಲಿ ಸೀರೆಯುಟ್ಟು ಮಾಡಿದ ಡ್ಯಾನ್ಸ್‌ ಇದೀಗ ವೈರಲ್ ಆಗಿದೆ.

ಕಲಾದೇವಿ ಅಥವಾ ಅದೃಷ್ಟಲಕ್ಷ್ಮಿ ಯಾವಾಗ ಯಾರಿಗೆ ಯಾವ ಸಮಯದಲ್ಲಿ ಕೈಹಿಡಿಯುತ್ತಾಳೆ ಎಂದು ಹೇಳುವುದು ಕಷ್ಟ ಸಾಧ್ಯ. ತಾಳ್ಮೆ ಹಾಗೂ ಕಠಿಣ ಪರಿಶ್ರಮವಿದ್ದರೆ ಅದೃಷ್ಟ ಲಕ್ಷ್ಮಿ ನಮ್ಮನ್ನು ವರಿಸಿ ಯಶಸ್ಸು ಎಂಬ ತುತ್ತ ತುದಿಗೆ ಕರೆದು ಕೊಂಡು ಹೋಗುತ್ತಾಳೆ. ಅನೇಕ ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ನಿರತರಾಗಿದ್ದು, ತೆಲುಗಿನ ಜಾನಪದ ಗೀತೆಗಳಿಗೆ ಮತ್ತು ತಮ್ಮದೇ ಆದ ಶೈಲಿಯಲ್ಲಿ ಆಲ್ಬಂ ಸಾಂಗ್ ಮಾಡುತ್ತಾ ಹೊಸ ರೀತಿಯ ಟ್ರೆಂಡ್ ಹುಟ್ಟು ಹಾಕಿದ್ದ ಮಂಗ್ಲಿ, ರಾಬರ್ಟ್ ಸಿನಿಮಾದ ನಂತರ ಸೂಪರ್ ಹಿಟ್ ಆಗಿದ್ದಾರೆ.

ಸಿನಿಮಾಗಳಲ್ಲಿಯೂ ಕೂಡಾ ಗಾಯನ ಮಾಡಿ ಒಂದಿಷ್ಟು ಜನರಿಗೆ ತಮ್ಮ ಹೆಸರು ತಿಳಿಯುವಂತೆ ಮಾಡಿಕೊಂಡಿದ್ದರು. ಆದರೆ ಅವರ ಹೆಸರು ಲೋಕಕ್ಕೆ ಪರಿಚಯವಾಗಿದ್ದು ಮಾತ್ರ ಕನ್ನಡ ಸಿನಿಮಾದಿಂದ. ತೆಲುಗು ಸಿನಿಮಾರಂಗಕ್ಕೆ ಮಾತ್ರ ಸೀಮಿತವಾಗಿದ್ದ ಅವರ ಹೆಸರು ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ‘ಕಣ್ಣೆ ಅದರಿಂದೆ’ ಎಂಬ ಹಾಡಿನ ಮೂಲಕ ಜಾಲತಾಣದಲ್ಲಿ ಹವಾ ಎಚ್ಚಿಸಿದ್ದರು.

ಕನ್ನಡದಲ್ಲಿ ಶ್ರೇಯಾ ಘೋಷಾಲ್ ಹಾಡಿರುವ ‘ಕಣ್ಣು ಹೊಡೆಯೋಕಾ’ ಎಂಬ ಉತ್ತರ ಕರ್ನಾಟಕ ಶೈಲಿಯ ಗೀತೆಯನ್ನು ತೆಲುಗಿ ನಲ್ಲಿ ಮಂಗ್ಲಿ, ಕಣ್ಣೆ ಅಂದಿರಿಂದಿ ಎಂದು ಹಾಡಿದ್ದರು. ಹೈದ್ರಾಬಾದ್‌ನಲ್ಲಿ ನಡೆದ ರಾಬರ್ಟ್ ಸಿನಿಮಾದ ಅದ್ದೂರಿ ಪ್ರೀ ರಿಲೀಸ್ ಈವೆಂಟ್ ವೇದಿಕೆ ಮೇಲೆ ಮಂಗ್ಲಿ ‘ಕಣ್ಣೇ ಅದಿರಿಂದಿ’ ಎಂಬ ಹಾಡು ಹಾಡುತ್ತಿದ್ದಂತೆ ನೆರೆದಿದ್ದ ಜನಸಾಗರ ಹುಚ್ಚೆೆದ್ದು ಕುಣಿ ದಿತ್ತು.

ಆದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕೂಡ ಹಾಯಿತು. ಅದರಲ್ಲೂ ಕನ್ನಡಿಗರಿಗೆ ಕನ್ನಡದ ಹಾಡಿಗಿಂತ ಹೆಚ್ಚಾಗಿ ಈ ತೆಲುಗು ಹಾಡು ಬಹಳ ಇಷ್ಟವಾಯಿತು. ಕನ್ನಡಿಗರು ‘ಕಣ್ಣು ಹೊಡೆಯೋಕೆ’ ಹಾಡನ್ನು ಬಿಟ್ಟು ‘ಕಣ್ಣೆ ಅದಿರಿಂದಿ’ ಹಾಡನ್ನು ಗುನುಗೋಕೇ ಶುರು ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪ್ರತಿಯೊಬ್ಬರ ಸ್ಟೇಟಸ್‌ನಲ್ಲೂ ಇದೇ ಹಾಡು ಕಾಣಿಸಿಕೊಂಡಿತ್ತು. ಒಂದು ಹಾಡು ಈ ಗಾಯಕಿಗೆ ಎಷ್ಟು ಜನಪ್ರಿಯತೆ ತಂದು ಕೊಟ್ಟಿತು ಎಂದರೆ ಇದೀಗ ಸಾಮಾಜಿಕ ಜಾಲತಾಣ ದಲ್ಲಿ ಇವರ ಕುರಿತು ಅನೇಕ ವಿಚಾರಗಳು ಹೊರ ಬರುತ್ತಲೇ ಇದೆ. ಅಲ್ಲದೆ ಕನ್ನಡ ಪ್ರಿಯರು ಕನ್ನಡದಲ್ಲಿ ಒಂದು ಹಾಡು
ಹಾಡ ಬೇಕು ಎಂದು ಒತ್ತಾಯಿಸಿದರು.

ಇತ್ತ ಯೂಟ್ಯೂಬ್‌ನಲ್ಲಿ ಈ ಹಿಂದೆ ಮಂಗ್ಲಿ ಮಾಡಿದ್ದ ಆಲ್ಬಂ ಹಾಡುಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಒಟ್ಟಾರೆ
ಅವರ ಧ್ವನಿ ಪ್ರತಿಯೊಬ್ಬರಿಗೂ ಕೂಡ ಇಷ್ಟವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಪೇಜ್‌ಗಳು ಕೂಡ ಕ್ರಿಯೇಟ್ ಆಗಿದೆ. ಇದರಲ್ಲಿ ತೆಲುಗು ಪ್ರೇಕ್ಷಕರಿಗಿಂತ ಕನ್ನಡದವರೇ ಹೆಚ್ಚಾಗಿರುವುದು ವಿಶೇಷ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ
ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಮಂಗ್ಲಿ ಅವರು ಒಂದು ನೃತ್ಯ ಶಾಲೆಯಲ್ಲಿ ಸೀರೆ ಯುಟ್ಟು ನೃತ್ಯ ಮಾಡಿರುವ ವಿಡಿಯೋ ಫುಲ್ ವೈರಲ್ ಆಗಿದೆ.

Leave a Reply

Your email address will not be published. Required fields are marked *