Friday, 27th May 2022

ಹಿಮದಲ್ಲಿ ಮಾನ್ವಿ ಎಂದು ಬರೆದ ಯೋಧ

ಮಾನ್ವಿ: ತಾಲ್ಲೂಕಿನ ಉಟಕನೂರು ಗ್ರಾಮದ ಗುಡದಯ್ಯ ಕಾಶ್ಮೀರದ ಕುಪ್ಪವಾಡದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಜ15ರಂದು ನಡೆದ ಭಾರತೀಯ ಸೇನಾ ದಿನಾಚಾರಣೆ ವೇಳೆ ಹಿಮದಲ್ಲಿ ಮಾನ್ವಿ ಎಂದು ಬರೆದ ಪೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು -7 ಡಿಗ್ರೀ ಮೈಕೊರೆವ ಚಳಿಯಲ್ಲಿ ದೇಶದ ರಕ್ಷಣೆಗೆ ನಿಂತ ಯೋಧನ ಸೇವೆಯ ಬಗ್ಗೆ ತಾಲ್ಲೂಕಿನ ಜನರು ಅಭಿಮಾನ ಸೂಚಿಸಿದ್ದು ಈ ಭಾವಚಿತ್ರ ವೈರಲ್ ಆಗುತ್ತಿದೆ.