Tuesday, 9th August 2022

ಕರ್ನಾಟಕ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಮರಿಯಮ್ಮನಹಳ್ಳಿ ಘಟಕಕ್ಕೆ ಚಾಲನೆ

ಹೊಸಪೇಟೆ: ತಾಲ್ಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ದುರ್ಗಾದಾಸ ರಂಗಮಂದಿರದಲ್ಲಿ, ಕರ್ನಾಟಕ ಅಸಂಘಟಿತ ಕಾರ್ಮಿಕರ ಕ್ಷೇಮಾ ಭಿವೃದ್ಧಿಸಂಘ ಮರಿಯಮ್ಮನಹಳ್ಳಿ ಹೋಬಳಿ ಘಟಕ ಉದ್ಘಾಟನಾ ಸಮಾರಂಭ ನಡೆಯಿತು.

ಪರ್ತಕರ್ತ ಸತ್ಯನಾರಾಯಣ ಮಾತನಾಡಿ, ಸಂಘಟನೆಗಳ ಕುರಿತು ಸಮಾಜದಲ್ಲಿ ಉತ್ತಮ ಅಭಿಪ್ರಾಯಗಳಿಲ್ಲದ ಕಾರಣ, ಸಂಘಟಕರು ಉತ್ತಮ ಕಾರ್ಯಗಳನ್ನು ಹಮ್ಮಿ ಕೊಂಡು, ಸಂಘಟನೆಗಳ ಕುರಿತು ಇರುವ ಅಭಿಪ್ರಾಯವನ್ನು ಹೋಗಲಾಡಿಸಲು ಪ್ರಯತ್ನಿಸಬೇಕು ಎಂದರು.

ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹನುಮಂತಪ್ಪ ಮಾತನಾಡಿ, ಸಂಘಟನೆಯ ಕಾರ್ಯಕರ್ತರ ಮಕ್ಕಳ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸ ಬೇಕು. ಅಲ್ಲದೇ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಹೋರಾಟವನ್ನು ಹಮ್ಮಿಕೊಂಡು ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮನೋಭಾವ ಹೊಂದ ಬೇಕೆಂದು ಕರೆ ನೀಡಿದರು.

ರಾಜಕಾರಣದಿಂದ ಸಂಘಟನೆಗಳು ಅಂತರಕಾಯ್ದು ಕೊಳ್ಳುವ ಮೂಲಕ, ಹೋರಾಟದ ಮೂಲಕ ಸೌಲಭ್ಯ ಹಾಗು ಹಕ್ಕುಗಳಿಗೆ ಹೋರಾಟ ಹಮ್ಮಿಕೊಂಡು ಸಂಘಟನೆ ಬಲಪಡಿಸಲು ಮುಂದಾಗ ಬೇಕೆಂದು ಕರೆ ನೀಡಿದರು.

ಹೊಸಪೇಟೆ ಕಾರ್ಮಿಕ ನಿರೀಕ್ಷಕ ಎಂ.ಅಶೋಕ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ರಂಗಕಲಾವಿದೆ ಡಾ.ಕೆ.ನಾಗರತ್ನಮ್ಮ, ಕಲಾವಿದ ಹುರುಕೊಳ್ಳಿ ಮಂಜುನಾಥ,ರಾಜ್ಯ ಅಧ್ಯಕ್ಷ ಗವಿಸಿದ್ದಪ್ಪ ಬಿ.ನಾಯಕ, ರಾ.ಪ್ರ.ಕಾರ್ಯದರ್ಶಿ ರಾಮುಆಶ್ರೀತ್, ರಾಜ್ಯ ಗೌರವಾ ಧ್ಯಕ್ಷ ರು ಪ್ರಸಾದ್ ಕುಮಾರ್ ರಾಜ್ಯ ಉಪಾಧ್ಯಕ್ಷರು ಎಚ್. ಹನುಮಂತಪ್ಪ ರಾಜ್ಯಖಜಾಂಚಿ ರವಿಕುಮಾರ್,ವಿಜಯನಗರ ಜಿಲ್ಲಾಧ್ಯಕ್ಷ ಬಿ.ಆನಂದ,ಸಂಘಟಕರಾದ ಹರಿಶ್ಚಂದ್ರ ನಾಯ್ಕ, ಅಂಜಿನಪ್ಪ, ರಶೀದ್,ರಮೇಶ್ ಮಡಿವಾಳ, ವೀರೇಶಕುಂಬಾರ, ರೈತಸಂಘದ ಸಿ.ಬಿ.ವಸ್ತ್ರದ,ಎಸ್.ವೈ.ಕುರಿ,ಹೋಬಳಿ ಘಟಕದ ಕಮಲಾನಾಯ್ಕ,ಬಿ.ಡಿ.ರಾಮನಾಯ್ಕ,ಹುಸೇನ್ ಬಾಷ, ಸೈಫುಲ್ಲಾ, ಸುಭಾನ್, ಎ.ಅಸ್ಲಂ,ಬಾಪೂರಿ ರಾಜ,ಶೌಕತ್ ಅಲಿ,ಭರಮಲಿಂಗಪ್ಪ ಸೇರಿದಂತೆ ಇತರರಿದ್ದರು.