Friday, 7th May 2021

ಮಟ್ಕಾ ಬುಕ್ಕಿ ಅಶ್ವಥ್ ನಾರಾಯಣ ಬಂಧನ

ಪಾವಗಡ/ತುಮಕೂರು: ಮಧುಗಿರಿ ಉಪವಿಭಾಗ ವ್ಯಾಪ್ತಿಯ ಪಾವಗಡ ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ವ್ಯಾಪಕವಾಗಿ ಮಟ್ಕಾ ಜೂಜಾಟ ದಂಧೆ ನಡೆಸುತ್ತಿದ್ದ ಪ್ರಮುಖ ಮಟ್ಕಾ ಬುಕ್ಕಿಅಶ್ವಥ್ ನಾರಾಯಣನನ್ನು ಗುಂಡಾ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.

ಹಲವಾರು ವರ್ಷಗಳಿಂದ ಪಾವಗಡ ತಾಲೂಕಿನಲ್ಲಿ ಸತತವಾಗಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದು ಪೊಲೀಸರು ಎಷ್ಟು ಬಾರಿ ತಾಕೀತು ಮಾಡಿದರು ತನ್ನ ಹಳೆಯ ಚಾಳಿಯನ್ನು ಬಿಡದೆ ತನ್ನ ಮಟ್ಕಾ ಆಟವನ್ನು ಮುಂದುವರಿಸಿದ್ದ.

ಇದಕ್ಕೆ ಸಂಬಂಧಿಸಿದಂತೆ ಮಧುಗಿರಿ ಉಪವಿಭಾಗದ ಡಿವೈಎಸ್ಪಿ ರಾಮಕೃಷ್ಣ ರವರು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ತುಮಕೂರು ಜಿಲ್ಲೆ ಇವರ ಮೂಲಕ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಗೆ ಸಲ್ಲಿಸಲಾಗಿತ್ತು ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಅಕ್ರಮ ಚಟುವಟಿಕೆಗಳ ತಡೆ ಅಧಿನಿಯಮ ಸಾವಿರ 1985 ಅಡಿಯಲ್ಲಿ ಅಶ್ವಥ್ ನಾರಾಯಣ ನನ್ನ ಜಿಲ್ಲಾ ಕಾರಾಗೃಹದಲ್ಲಿ ಸ್ಥಾನಬದ್ಧತೆ ಬಂಧನದಲ್ಲಿ ಇಡಲು ಆದೇಶ ಮಾಡಿರುತ್ತಾರೆ.ಇದರನ್ವಯ ವ್ಯಕ್ತಿಯನ್ನು ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿ ಇಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರಿ ಮಟ್ಕಾ ಕಿಂಗ್ಪಿನ್ ಅಶ್ವತ್ ನಾರಾಯಣ್ ಬಂಧನಕ್ಕೆ ಶ್ರಮಿಸಿದ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೋನ ವಂಶಿಕೃಷ್ಣರವರು ಅಭಿನಂದಿಸಿದ್ದಾರೆ.

 

Leave a Reply

Your email address will not be published. Required fields are marked *