Thursday, 11th August 2022

ಉಕ್ರೇನ್​​ನಿಂದ ಭಾರತಕ್ಕೆ ಮರಳಿದ ಸ್ನೇಹಾ ಪಾಟೀಲ್​​

ವಿಜಯಪುರ: ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಈ ನಡುವೆ ಉಕ್ರೇನ್​ನಲ್ಲಿ ಎಂಬಿಬಿಎಸ್​​​ನ ಎರಡನೇ ಸೆಮಿಸ್ಟರ್​​​ನಲ್ಲಿ ಓದುತ್ತಿದ್ದ ಸ್ನೇಹಾ ಪಾಟೀಲ್​ ಎಂಬ ಯುವತಿ ಭಾರತಕ್ಕೆ ಬಂದು ತಲುಪಿದ್ದಾರೆ.

ವಿಜಯಪುರದ ಐಶ್ವರ್ಯ ನಗರ ನಿವಾಸಿ ಗುತ್ತಿಗೆದಾರ ರಮೇಶ ಪಾಟೀಲ್​​ ಅವರ ಪುತ್ರಿ ಸ್ನೇಹಾ ಪಾಟೀಲ್​​ ಫೆ.22ಕ್ಕೆ ಉಕ್ರೇನ್​​ನಿಂದ ವಿಮಾನದ ಮೂಲಕ ಹೊರಟಿದ್ದರು. ಫೆ.23ಕ್ಕೆ ಬೆಂಗಳೂರಿಗೆ ಆಗಮಿಸಿದ್ದರು.‌ ಅಲ್ಲಿಂದ ರಸ್ತೆ ಮೂಲಕ ವಿಜಯಪುರಕ್ಕೆ ಆಗಮಿಸಿದ್ದಾರೆ.‌ ವಿದ್ಯಾರ್ಥಿನಿ ಸ್ನೇಹಾ ಪಾಟೀಲ್​​​ ಸುರಕ್ಷಿತವಾಗಿ ವಿಜಯಪುರಕ್ಕೆ ಆಗಮಿಸಿದ್ದರಿಂದ ಮನೆಯಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ.

ಸ್ನೇಹಾ ಪಾಟೀಲ್​​ ಫೆಬ್ರವರಿ 22ಕ್ಕೆ ಉಕ್ರೇನ್​​ನಿಂದ ವಿಮಾನದ ಮೂಲಕ ಹೊರಟಿದ್ದರು. ಫೆ.23ಕ್ಕೆ ಬೆಂಗಳೂರಿಗೆ ಆಗಮಿಸಿ, ಅಲ್ಲಿಂದ ರಸ್ತೆ ಮೂಲಕ ಇಂದು ಸಂಜೆ ವಿಜಯಪುರಕ್ಕೆ ಆಗಮಿಸಿದ್ದಾರೆ.‌