Monday, 16th May 2022

ಸಂತೋಷ್ ಗುಡಿಗಾರರ ಮನೆಗೆ ಭೇಟಿ ನೀಡಿದ ಸಚಿವ ಆನಂದ್ ಸಿಂಗ್

ಶಿರಸಿ: ಯಲ್ಲಾಪುರಕ್ಕೆ ಭೇಟಿ ನೀಡಿದ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಸಂತೋಷ್ ಗುಡಿಗಾರರ ಮನೆಗೆ ಭೇಟಿ ನೀಡಿದರು.

ಸ್ವಂತ ವಾಹನದಲ್ಲಿ ಯಲ್ಲಾಪುರಕ್ಕೆ ಆಗಮಿಸಿದ ಆನಂದ್ ಸಿಂಗ್, 4ನೇ ವರ್ಷದ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ದಾವಣಗೆರೆಯ ಹರಿಹರ ತಾಲೂಕಿನ ರಾಜನಳ್ಳಿ ಮಠಕ್ಕೆ ರಥ ನೀಡುತ್ತಿರುವದರಿಂದ ಪ್ರಸನ್ನ ನಂದಪುರಿ ಸ್ವಾಮೀಜಿ ಜತೆ ಭೇಟಿ ನೀಡಿದರು.

ಇದೇ ವೇಳೆ, ನೆರೆದ ಮಾಧ್ಯಮದವರೊಂದಿಗೆ ಮಾತನಾಡಿ, ರಾಜಕೀಯದ ಬಗ್ಗೆ ಏನೂ ಮಾತನಾಡಲ್ಲ‌. ಶಿರಸಿಯಲ್ಲಿ ಸ್ಪೀಕರ್ ಹಾಗೂ ಹೆಬ್ಬಾರನ್ನು ಭೇಟಿಯಾಗಲ್ಲ ಎಂದರು.