Thursday, 23rd March 2023

ಸಚಿವ ಮಾಧುಸ್ವಾಮಿ ವಿರುದ್ದ ಸಂಸದ ಬಸವರಾಜು ಗುಸು ಗುಸು

ಕೆಟ್ಟ ನನ್ಮಗ ನಮ್ಮ ಜಿಲ್ಲೆಯನ್ನೇ ಹಾಳು ಮಾಡಿಬಿಟ್ಟಿದ್ದಾನೆ

ತುಮಕೂರು: ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದ್ದಾನಲ್ಲ. ಕೆಟ್ಟ ನನ್ಮಗ. ನಮ್ಮ ಜಿಲ್ಲೆಯನ್ನೇ ಹಾಳು ಮಾಡಿಬಿಟ್ಟಿದ್ದಾನೆ ಎಂದು ಸಚಿವ ಮಾಧು ಸ್ವಾಮಿ ವಿರುದ್ಧ ಸಂಸದ ಜಿ.ಎಸ್ ಬಸವರಾಜ್ ಹರಿಹಾಯ್ದಿದ್ದಾರೆ.

ತುಮಕೂರಿನಲ್ಲಿ ಸುದ್ದಿಗೋಷ್ಠಿ ವೇಳೆ ಸಂಸದ ಜಿ.ಎಸ್ ಬಸವರಾಜ್ ಹಾಗೂ ಸಚಿವ ಬೈರತಿ ಬಸವರಾಜ್ ಅವರು ಸಚಿವ ಮಾಧುಸ್ವಾಮಿ ಗುಸು, ಗುಸು ಎಂದು ಮಾತನಾಡಿಕೊಂಡಿದ್ದಾರೆ. ಈ ವೇಳೆ ಸಚಿವ ಮಾಧುಸ್ವಾಮಿ ವಿರುದ್ಧ ಸಂಸದ ಬಸವರಾಜು ಆರೋಪಗಳ ಸುರಿಮಳೆಯೇ ಹರಿಸಿದ್ದಾರೆ.

ಈ ನನ್ನ ಮಗ ನಮ್ಮ ಮಂತ್ರಿ ಹೇಗೆ ಅಂತ ಗೊತ್ತಾ. ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದಾನಲ್ಲ. ಕೆಟ್ಟ …. ಮಗ. ನಮ್ಮ ಜಿಲ್ಲೆಯನ್ನೇ ಹಾಳು ಮಾಡಿ ಬಿಟ್ಟಿದ್ದಾನೆ ಎಂದು ಬಸವರಾಜು ಬೈಯಲು ಆರಂಭಿಸುತ್ತಾರೆ. ಆಗ ಬೈರತಿ ಬಸವರಾಜ್ ಸುಮ್ಮನಿರು ಆಮೇಲೆ ಈ ಬಗ್ಗೆ ಮಾತನಾಡೋಣಾ ಎನ್ನುತ್ತಾರೆ.

ನಂತರ ಒಂದು ಸೀಟ್ ಬರಲ್ಲ. ಮಾತು ಎತ್ತಿದ್ದರೆ ಹೊಡಿ, ಬಡಿ, ಕಡಿ ಅಂತಾನೆ. ಅವನ್ಯಾರೋ ಎಕ್ಸಿಕ್ಯುಟಿವ್ ಇಂಜಿನಿಯರ್ ಗೆ ಹೇಳುತ್ತಾನೆ. ಹೆಂಡತಿ ಸೀರೆ ಒಗೆಯುವುದಕ್ಕೆ ಇವನು ಲಾಯಕ್ ಅಂತಾ. ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸಲ್ಲ. ಮೊನ್ನೆ ಸಾವಿರ ಕೋಟಿ ಡಿಕ್ಲೈರ್ ಮಾಡಿಕೊಂಡು ಬಂದಿ ದ್ದಾನೆ. ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ, ಕರೆಯೋದು ಇಲ್ಲ. ನಿಮ್ಮ ಇಲಾಖೆಗೆ ಬಂದು ಹೇಳಿದರೇ ತಲೆಕೆಡಿಸಕೊಳ್ಳಬೇಡಿ. ಎಂದು ಹೆಸರೇ ಹೇಳದೇ ಮಾಧುಸ್ವಾಮಿ ವಿರುದ್ಧ ಪರೋಕ್ಷವಾಗಿ ಜಿ.ಎಸ್ ಬಸವರಾಜ್ ವಾಗ್ದಾಳಿ ನಡೆಸಿದ್ದಾರೆ.

ತುಮಕೂರು ಪಾಲಿಕೆ ಕಟ್ಟಡ ಹಾಗೂ ಎಂಪ್ರೆಸ್ ಕಾಲೇಜ್ ಸಭಾಂಗಣ ಸೇರಿದಂತೆ ಸ್ಮಾರ್ಟ್ ಸಿಟಿಯ ವಿವಿಧ ಕಟ್ಟಡಗಳ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದ್ದ ಮಾಧುಸ್ವಾಮಿ ಕ್ಯಾಬಿನೆಟ್ ಸಭೆ ಹಿನ್ನೆಲೆ ಅರ್ಧದಲ್ಲಿಯೇ ಎದ್ದು ಹೊರಡುತ್ತಾರೆ. ಈ ವೇಳೆ ಬೈರತಿ ಬಸವರಾಜ್ , ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿ ಹೋಗೋಣ ಬಾ ಎಂದು ಕರೆದರೂ ಮಾಧುಸ್ವಾಮಿ ಬಾರದೇ ಹೊರಡಿದ್ದಾರೆ.

error: Content is protected !!