Friday, 7th May 2021

2022ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ಪೂರ್ಣ: ಸಚಿವ ಕೆ.ಗೋಪಾಲಯ್ಯ

ಬಿಜೆಪಿ ಸರ್ಕಾರದ ಸಿಎಂ ಯಾರೂ ಎಂದು ನಿರ್ಧರಿಸಲು ಸಿದ್ದರಾಮಯ್ಯ ಯಾರು; ಕಟೀಲ್ ಪ್ರಶ್ನೆ

ಹಾಸನ: ಬೆಂಗಳೂರು- ಮಂಗಳೂರಿಗೆ ಪ್ರಮುಖ ರಸ್ತೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ರ ಕಾಮಗಾರಿ ಮುಂದಿನ ವರ್ಷ 2022 ರ ವೇಳೆಗೆ ತ್ವರಿತ ಗತಿಯಲ್ಲಿ ಪೂರ್ಣ ಗೊಳಿಸಲು ಸೂಚನೆ ನೀಡಿರುವುದಾಗಿ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ಆಲೂರಿನ ಬೈರಾಪುರ ತಿರುವಿನಲ್ಲಿ ಕಾಮಗಾರಿ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ‌‌ ಕೆಲ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಕಾಮಗಾರಿ ತ್ವರಿತ ಗೊಳಿಸಲು ಸೂಚನೆ ನೀಡಿದ್ದೇನೆ ಹಾಗೂ ಪ್ರತಿ ತಿಂಗಳು ಕಾಮಗಾರಿ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದು ಎಂದರು.

ಮಂಗಳೂರಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಕಾರಣ ಅಲ್ಲಿನ ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡಿದ್ದು ಹಿಂದೆ ಇದ್ದಂತಹ ಗುತ್ತಿಗೆದಾರ ಬ್ಯಾಕ್ ಲೀಸ್ಟ್ ಗೆ ಹಾಕಲಾಗಿದ್ದು ಈ ಹಿನ್ನೆಲೆಯಲ್ಲಿ ಹೊಸ ಟೆಂಡರ್ ಕರೆದು ಇದೀಗ ಕಾಮಗಾರಿ ನಡೆಸುತ್ತಿರುವವರೊಂದಿಗೆ ಎರಡು ಖಾತೆ ತೆರೆಯಲಾಗಿದ್ದು ಕಾಮ ಗಾರಿ ನಡೆಯುವ ಹಂತ ಹಂತದ ಕೆಲಸಕ್ಕೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಮಳೆಗಾಲ ಬರುವ ವೇಳೆಗೆ ಹದಗೆಟ್ಟ ರಸ್ತೆಯ ಗುಂಡಿ ಮುಚ್ಚಲು ಸೂಚನೆ ನಿಡಲಾಗಿದೆ .ಮುಂದಿನ 2022 ರ ಏಪ್ರಿಲ್ ವೇಳೆಗೆ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣವಾಗಲಿದೆ ಇದಕ್ಕೆ ಬೇಕಾಗುವ ಸಾಮಗ್ರಿ ಹಾಗೂ ಅನುದಾನಕ್ಕೆ ಯಾವುದೇ ಕೊರತೆ ಇಲ್ಲಾ ಎಂದರು.

ಈ ವೇಳೆ ಮಾತನಾಡಿದ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಕಾಮ ಗಾರಿ ಪೂರ್ಣ ವಾದರೆ ಮಂಗಳೂರಿಗೆ ಸಂಪರ್ಕ ಕ್ಕೆ ಹೆಚ್ಚು ಅನುಕೂಲ ವಾಗಲಿದೆ . ಈ‌ ಮಾರ್ಗದ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿರುವ ಬಗ್ಗೆ ಗಡ್ಕರಿ ಗಮನಕ್ಕೆ ತರಲಾಗಿ ಅವರ ನಿರ್ದೇಶನ ದ ಹಿನ್ನೆಲೆಯಲ್ಲಿ ಇಂದು ಕಾಮಗಾರಿ ಪ್ರಗತಿ ಕಂಡಿದೆ ಹಿಂದೆ ಏಕೆ ಕಾಮಗಾರಿ ನಿಂತಿತ್ತು‌ ಎಂದು ನಾವು ಹೇಳಬೇಕಿಲ್ಲಾ ಎಲ್ಲಾ ರಾಜಕೀಯ ಕಾರಣ ಎಂದು ಪರೋಕ್ಷವಾಗಿ ಜಿಲ್ಲೆಯ ಜೆಡಿಎಸ್ ನಾಯಕರನ್ನು ದೂರಿದರು.

ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲಾ ಮೈಸೂರು ಬೆಂಗಳೂರು ಮಾರ್ಗದ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ವೇಗ ಸಾಧಿಸಲು ಅವರಿಂದ ಮಾರ್ಗದರ್ಶನ ಹಾಗೂ ಸಲಹೆ ಪಡೆಯುವಂತೆ ಹೆದ್ದಾರಿ ಕಾಮಗಾರಿ ಅಧಿಕಾರಿ ಮಣಿಕಂಠನ್ ಅವರಿ್ಗೆಗೆ ಸೂಚನೆ ನೀಡಿದರು.ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರ ಸಲಹೆ ಸೂಚನೆಯಂತೆ ಮುಂದಿನ ದಿನಗಳಲ್ಲಿ ಹೆದ್ದಾರಿ ಕಾಮಗಾರಿ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ನಡೆಯಲಿದೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು.

ನಮ್ಮ ಪಕ್ಷದ ಸಿಎಮ್ ಯಾರೂ ಎಂದು ನಿರ್ಧಾರ ಮಾಡೋಕೆ ಸಿದ್ರಾಮಯ್ಯ ಯಾರು?
ಬಿಜೆಪಿ ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್ ಅವರು ನಮ್ಮ ಪಕ್ಷದ ಮುಖ್ಯಮಂತ್ರಿ ಯಾರು ಎಂದು ನಿರ್ಧರಿಸಲು ಸಿದ್ದರಾಮಯ್ಯ ಯಾರು…?? ಅವರ ಪಕ್ಷದಲ್ಲಿ ಗೊಂದಲ ಏರ್ಪಟ್ಟಿದೆ ಅದನ್ನು ಮೊದಲು ಸರಿಪಡಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಹಾಗೂ ನಮ್ಮ ಪಕ್ಷದಲ್ಲಿ ಸಿಎಂ ಕುರ್ಚಿ ಖಾಲಿಇಲ್ಲ ಯಡಿಯೂರಪ್ಪ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿದರು.

ಹಾಸನ ಜಿಲ್ಲೆಯಲ್ಲಿ ನಡೆದ ಜನ ಸೇವಕ ಸಮಾವೇಶ ಮತ್ತು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದ ಬಿ ಜೆ ಪಿ ಬೆಂಬಲಿತ ಅಭ್ಯರ್ಥಿಗಳಿಗೆ ಸನ್ನಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ದಲ್ಲಿ ರಾಜ್ಯಾಧ್ಯಕ್ಷ ‌ ನಳೀನ್ ಕುಮಾರ್ ಕಟೀಲು ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ಸಂಸದ ಪ್ರತಾಪ್ ಸಿಂಹ . ಜಿಲ್ಲಾಧ್ಯಕ್ಷ ಉಲ್ಲಳ್ಳಿ ಸುರೇಶ್ . ಶಾಸಕ ಪ್ರೀತಮ್ ಗೌಡ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ರಾಜ್ಯ ಎಸ್ ಸಿ ಮೊರ್ಚಾ ಛಲವಾದಿ ನಾರಾಯಣ ಸ್ವಾಮಿ ಮಾಜಿ ಶಾಸಕ ಎ ಮಂಜು ಪ್ರಭಾರಿ ಮೈಲಿ ರಮೇಶ್ ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ಹರು.

Leave a Reply

Your email address will not be published. Required fields are marked *