Friday, 7th October 2022

ಸಚಿವ ಈಶ್ವರಪ್ಪ ಉಡಾಫೆ ಮಾತು

ನಾಲಿಗೆ ಹರಿಬಿಟ್ಟ ಈಶು

ಬೆಂಗಳೂರು: ಇತ್ತೀಚೆಗೆ ಮೃತಪಟ್ಟ ಶಾಸಕರು, ಸಚಿವರು ಹಾಗೂ ಸಂಸದರ ಬಗ್ಗೆ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ಉಡಾಫೆಯ ಮಾತನ್ನಾಡಿದ್ದು, ಕೆಂಗಣ್ಣಿಗೆ ಗುರಿಯಾದರು.

ಕೊರೊನಾ ಅಂತ ಹೆದರಿ ಕುತ್ಕೋಳ್ಬೆಕಾ ಎಂದು ಶಾಲೆ ಆರಂಭದ ವಿಚಾರದ ಬಗ್ಗೆ ಗರಂ ಆದರು. ಸಚಿವರು ಸತ್ತರು ಅಂಕ ಲೋಕಸಭೆ ಮುಚ್ಚಬೇಕಾ? ಸಚಿವರು ಸತ್ತಿದ್ದಾರೆ, ಸಂಸದರೂ ಸತ್ತಿದ್ದಾರೆ, ಹಾಗಂತ ಲೋಕಸಭೆಯನ್ನು ಮುಚ್ಚಬೇಕಾ ? ರೈತ ಸತ್ತ ಅಂತ ಉಳುಮೆ ನಿಲ್ಲಿಸಕ್ಕೆ ಆಗುತ್ತಾ ? ಈ ರೀತಿ ಕೇಂದ್ರ ಸಚಿವರ ಸಾವಿನ ಬಗ್ಗೆ ಈಶು ಹಗುರವಾದ ಮಾತನ್ನಾಡಿದ್ದಾರೆ.