Thursday, 3rd December 2020

ಕಪಿಲ್ ದೇವ್ ಅವರು ಶೀಘ್ರ ಚೇತರಿಸಿಕೊಳ್ಳಲಿ: ಶುಭ ಹಾರೈಸಿದ ಶಿಕ್ಷಣ ಸಚಿವ

ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರು ನವದೆಹಲಿಯ ಆಸ್ಪತ್ರೆಯಲ್ಲಿ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. 61 ವರ್ಷಗಳ ಕಪಿಲ್ ದೇವ್ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ವಿವಿಧ ಕ್ಷೇತ್ರಗಳ ಗಣ್ಯರು, ಕ್ರಿಕೆಟ್ ಅಭಿಮಾನಿಗಳು ಹಾಗೂ ಕಪಿಲ್ ದೇವ್ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ರಾಜ್ಯ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರೂ ಕಪಿಲ್ ದೇವ್ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿ ದ್ದಾರೆ. 1983 ರಲ್ಲಿ ವಿಶ್ವಕಪ್ ಗೆದ್ದಾಗಿನ ಹುಮ್ಮಸ್ಸೇ ಇಂದೂ ಸಹ! ಬೇಗ ಗುಣಮುಖರಾಗಿ ಹಲವಾರು ವರ್ಷ ಮಾರ್ಗದರ್ಶನ ನೀಡಿ ಎಂದು ಸುರೇಶ್ ಕುಮಾರ್ ಪ್ರಾರ್ಥಿಸಿದ್ದಾರೆ.

Leave a Reply

Your email address will not be published. Required fields are marked *