Wednesday, 5th October 2022

ಪೈಲೆಟ್‍ ಸಮಯ ಪ್ರಜ್ಞೆ: ಸಚಿವರು ಪ್ರಾಣಾಪಾಯದಿಂದ ಪಾರು

ಬೆಂಗಳೂರು: ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಸಚಿವರಿಬ್ಬರು ಪೈಲೆಟ್‍ನ ಸಮಯ ಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರಾದರು.

ಸಚಿವರಾದ ಮುರುಗೇಶ್ ಆರ್. ನಿರಾಣಿ ಹಾಗೂ ಎಂ.ಟಿ.ಬಿ.ನಾಗರಾಜ್ ಅವರುಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.

ಇಂದು ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಎಂ.ಟಿ.ಬಿ.ನಾಗರಾಜ್ ಮತ್ತು ಮುರು ಗೇಶ್ ನಿರಾಣಿ ಅವರು ಮೈಸೂರಿನ ಹುಣ ಸೂರು ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ನಡೆಯಬೇಕಿದ್ದ ಉದ್ಯಮಿ ಯಾಗು -ಉದ್ಯೋಗ ನೀಡು ಮತ್ತು ಕೈಗಾರಿಕಾ ಅದಾಲತ್ ಕಾರ್ಯಕ್ರಮದಲ್ಲಿ ತೆರಳ ಬೇಕಿತ್ತು.

ಬೆಳಗ್ಗೆ ವಿಮಾನ ನಿಲ್ದಾಣದಲ್ಲಿ ಖಾಸಗಿ ಕಂಪನಿಗೆ ಸೇರಿದ ಹೆಲಿಕಾಪ್ಟರನ್ನು ಬುಕ್ ಮಾಡಲಾಯಿತು. ನಿಗದಿತ ಸಮಯಕ್ಕೆ ಸರಿಯಾಗಿ ಇಬ್ಬರು ಸಚಿವರು ಎಚ್‍ಎಎಲ್‍ಗೆ ಬಂದರು. ಇನ್ನೇನು ಹೆಲಿಕಾಪ್ಟರ್ ಹೊರಡಬೇಕು ಎನ್ನುವಷ್ಟರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು.

ತಾಂತ್ರಿಕ ದೋಷ ಇರುವುದರಿಂದ ಹಾರಾಟ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಬೇರೆ ಹೆಲಿಕಾಪ್ಟರ್ ನೋಡಿಕೊಳ್ಳುವಂತೆ ಸಲಹೆ ಮಾಡಿದ. ಕೊನೆಗೆ ಇಬ್ಬರು ಸಚಿವರು ರಸ್ತೆ ಮಾರ್ಗವಾಗಿ ಮೈಸೂರಿಗೆ ತೆರಳಿದರು.