Tuesday, 31st January 2023

ಅಲ್ಪಸಂಖ್ಯಾತ ಸ್ಥಾನಮಾನ: ಸ್ಮಾರ್ಥ ಬ್ರಾಹ್ಮಣರ ಅರ್ಜಿ ವಜಾ

ಚೆನ್ನೈ: ಮಿಳುನಾಡಿನಲ್ಲಿ ನೆಲೆಸಿ ಅದ್ವೈತದ ಧಾರ್ಮಿಕ ತತ್ವವನ್ನು ಪ್ರಚಾರ ಮಾಡುತ್ತಿರುವ ಸ್ಮಾರ್ಥ ಬ್ರಾಹ್ಮಣರು ಅಲ್ಪ ಸಂಖ್ಯಾತ ಸ್ಥಾನಮಾನಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಎಸ್ ರವೀಂದ್ರ ಭಟ್ ಅವರನ್ನೊಳ ಗೊಂಡ ಪೀಠವು ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ, ಸ್ಮಾರ್ಥ ಬ್ರಾಹ್ಮಣರು ಧಾರ್ಮಿಕ ಪಂಗಡವಲ್ಲ. ಆದ್ದರಿಂದ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲಾಗುವುದಿಲ್ಲ. ಹೀಗಾದರೆ, ನಾವು ಅಲ್ಪಸಂಖ್ಯಾತರ ರಾಷ್ಟ್ರವನ್ನು ಹೊಂದುತ್ತೇವೆ ಎಂದು ಪೀಠ ಆಕ್ಷೇಪ ವ್ಯಕ್ತಪಡಿಸಿದೆ.

ಕಳೆದ ಜೂನ್ 7ರಂದು ಮದ್ರಾಸ್ ಹೈಕೋರ್ಟ್, ಸ್ಮಾರ್ಥ ಬ್ರಾಹ್ಮಣರು ಭಾರತದ ಸಂವಿಧಾನದ 26 (ಧಾರ್ಮಿಕ ವ್ಯವಹಾರ ಗಳನ್ನು ನಿರ್ವಹಿಸುವ ಸ್ವಾತಂತ್ರ್ಯ) ಅಡಿ ಯಲ್ಲಿ ಪ್ರಯೋಜನಗಳಿಗೆ ಅರ್ಹರಲ್ಲ ಎಂದು ಹೇಳಿತ್ತು.

“ಸ್ಮಾರ್ಥ ಬ್ರಾಹ್ಮಣರು ಜಾತಿ/ಸಮುದಾಯಕ್ಕೆ ಯಾವುದೇ ವಿಶಿಷ್ಟತೆಯಿಲ್ಲದೆ, ಮೀಸಲಾತಿ ನೀಡಿದರೆ ತಮಿಳು ನಾಡು ರಾಜ್ಯದ ಇತರ ಬ್ರಾಹ್ಮಣರಿಂದ ಅವರನ್ನು ಪ್ರತ್ಯೇಕಿಸುತ್ತದೆ.
error: Content is protected !!