Thursday, 3rd December 2020

ಸಿಬಿಐ ಮುಂದಿಟ್ಟುಕೊಂಡು ಕಟ್ಟಿ ಹಾಕುವ ಯತ್ನ: ಡಿಕೆ ಶಿವಕುಮಾರ್ ಆರೋಪ

ಬಳ್ಳಾರಿ: ಬಿಜೆಪಿ ಅವರು ಸಿಬಿಐ ಮುಂದಿಟ್ಟುಕೊಂಡು ನನ್ನನ್ನು ಕಟ್ಟಿ ಹಾಕಲು ಮುಂದಾಗಿದ್ದಾರೆ, ಇದು ನಿನ್ನೆ ಮೊನ್ನೆಯ ದ್ದಲ್ಲ, ಹಿಂದಿನಿಂದಲೂ ಅವರು ಇದನ್ನೇ ಮಾಡಿಕೊಂಡು ಬಂದಿದ್ದಾರೆ, ಅವರಿಗೆ ಬರುವ ದಿನಗಳಲ್ಲಿ ದೇಶದ ಜನರೇ ತಕ್ಕ ಉತ್ತರ‌ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಭಾನುವಾರ ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಆಸ್ತಿ ಸಂಪಾದನೆ ಸೇರಿದಂತೆ ನಾನಾ ಸುಳ್ಳು ಕಾರಣಗಳನ್ನು ಇಟ್ಟುಕೊಂಡು ಸಿಬಿಐದವರು ನೋಟೀಸ್‌ ನೀಡಿದ್ದು, ಅದಕ್ಕೆ ಉತ್ತರ‌ ನೀಡುವೆ, ಹೆದರುವ ಮಾತೇ ಇಲ್ಲ. ಪೂರ್ವ‌ನಿಯೋಜಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಸಮಯಾವಕಾಶ ಕೇಳಿರುವೆ, ಕಾನೂನಿಗೆ ಯಾವತ್ತೂ ಗೌರವ ಕೊಡುವ ವ್ಯಕ್ತಿ ನಾನು, ಬಿಜೆಪಿ ಅವರ ಬೆದರಿಕೆಗೆ ಹೆದರುವ ಜಾಯಮಾನ ನನ್ನದಲ್ಲ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಸೇರಿ ಉಪ‌ ಚುನಾವಣೆ ಹಿನ್ನೆಲೆಯಲ್ಲಿ ನಾಳೆಯಿಂದ ಮಸ್ಕಿ, ಬೀದರ್, ಬಸವಕಲ್ಯಾಣ ಸೇರಿದಂತೆ ನಾನಾ ಕಡೆ ಪ್ರವಾಸ ಹಮ್ಮಿಕೊಂಡಿರುವೆ. ಪಕ್ಷವನ್ನು ಮತ್ತಷ್ಟು ಗಟ್ಟಿ‌ಗೊಳಿಸಬೇಕು ಎನ್ನುವ ಕಾರಣಕ್ಕಾಗಿ ಪ್ರವಾಸ ಹಮ್ಮಿಕೊಂಡಿರುವೆ.

ಸಿಬಿಐದವರು ಅವರ‌ ಕೆಲಸ ಅವರು ಮಾಡಲಿ, ನನ್ನ ಕೆಲಸ ಮಾಡುವೆ, ಪಕ್ಷದ ಸಂಘಟನೆಗೆ‌ ಮುಂದಾಗಿರುವೆ, ಮುಂಬರುವ ಚುನಾವಣೆ ಹಿನ್ನೆಲೆ‌ ಸಿದ್ದತೆ ನಡೆದಿದ್ದು, ಈ ಹಿನ್ನೆಲೆ ಕಾರ್ಯಕರ್ತರ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಈ ಸಂದರ್ಭ ದಲ್ಲಿ ಹಗರಿಬೊಮ್ಮನಹಳ್ಳಿ ಶಾಸಕ‌ ಭೀಮಾ ನಾಯ್ಕ್, ಕಾಂಗ್ರೆಸ್ ಯುವ ಘಟಕದ‌ ಜಿಲ್ಲಾಧ್ಯಕ್ಷ‌ ಎಂ. ಹನುಮ ಕಿಶೋರ್ ಇತರ ರಿದ್ದರು.

Leave a Reply

Your email address will not be published. Required fields are marked *