Thursday, 19th May 2022

ಮೊಬೈಲ್ ಫೋನ್: ಸೌಲಭ್ಯವೊಂದು ಚಟವಾಗುತ್ತಿರುವ ಪರಿ!

 ರಮಾನಂದ ಶರ್ಮಾ, ಬೆಂಗಳೂರು
ಹವ್ಯಾಸಿ ಬರಹಗಾರ

ಆಧುನಿಕ ಜಗತ್ತಿನ ಅತಿ ಆಕರ್ಷಕ ಮತ್ತು ಜನೋಪಯೋಗಿ ಆವಿಷ್ಕಾರಗಳಲ್ಲಿ ಮೊಬೈಲ್ ಫೋನ್‌ಗೆ ವಿಶೇಷ ಸ್ಥಾಾನವಿದೆ. ‘ಅಂಗೈಯಲ್ಲಿ ಜಗತ್ತು’ ಎಂದರೆ ಇದೇ!

ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಒಂದು ಕಾಲೇಜಿನಲ್ಲಿ, ನಿಷೇಧವಿದ್ದರೂ ಕಾಲೇಜಿಗೆ, ಕ್ಲಾಾಸ್‌ರೂಂ ಗೆ ಮೊಬೈಲ್ ತಂದು ಬಳಸಿದ್ದಕ್ಕೆೆ, ಆ ಕಾಲೇಜಿನ ಪ್ರಿಿನ್ಸಿಿಪಾಲರು ಮೊಬೈಲ್‌ಗಳನ್ನು ವಿದ್ಯಾಾರ್ಥಿಗಳ ಕೈಯಿಂದ ಕಸಿದು, ಅವುಗಳನ್ನು ಬಟ್ಟೆೆಯಲ್ಲಿ ಕಟ್ಟಿಿ ಸುತ್ತಿಿಗೆಯಲ್ಲಿ ಬಡಿದು ಪುಡಿಮಾಡಿದರಂತೆ. ಈ ಘಟನೆ ಮಾಧ್ಯಮದಲ್ಲಿ ಭಾರಿ ಸುದ್ದಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕೆಲದಿನಗಳಿಂದ ಹರಿದಾಡುತ್ತಿಿದೆ. ಅ ಪ್ರಿಿನ್ಸಿಿಪಾಲರು ತಮ್ಮ ಕ್ರಮವನ್ನು ಬಲವಾಗಿ ಸಮರ್ಥಿಸಿ ಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪರ- ವಿರೋಧ ಅಭಿಪ್ರಾಾಯಗಳು ಬಡಿದಾಡಿಕೊಳ್ಳುತ್ತಿಿವೆ. ಈ ಕ್ರಮ ಅವರು ದಿಢೀರೆಂದು ತೆಗೆದುಕೊಂಡಿದ್ದಲ್ಲ. ಅದಕ್ಕೆೆ ಮೊದಲು ವಿದ್ಯಾಾರ್ಥಿಗಳಿಗೆ ಅವರು ಸಾಕಷ್ಟು ತಿಳಿ ಹೇಳಿದ್ದರಂತೆ ಮತ್ತು ಎಚ್ಚರಿಕೆಯನ್ನೂ ನೀಡಿದ್ದರಂತೆ.

ಆಧುನಿಕ ಜಗತ್ತಿಿನ ಅತಿ ಆಕರ್ಷಕ ಮತ್ತು ಜನೋಪಯೋಗಿ ಆವಿಷ್ಕಾಾರಗಳಲ್ಲಿ ಮೊಬೈಲ್ ಫೋನ್‌ಗೆ ವಿಶೇಷ ಸ್ಥಾಾನವಿದೆ. ‘ಅಂಗೈಯಲ್ಲಿ ಜಗತ್ತು’ ಎಂದರೆ ಏನು ಎಂದು ತಿಳಿಯದವರು ಮೊಬೈಲ್ ಬಳಸುವವರನ್ನು ಕೇಳಬೇಕು. ಬ್ರಹ್ಮಾಾಂಡವನ್ನೇ ಬಿಚ್ಚಿಿಡುತ್ತಾಾರೆ. ಇಂದು ಬದುಕಿನಲ್ಲಿ ಮತ್ತು ಬದುಕಿಗೆ ಅತ್ಯವಶ್ಯವಾದ ವಸ್ತು ಯಾವುದೆಂದು ಕೇಳಿದರೆ ದಿನಸಿ, ಕಾಯಿಪಲ್ಲೆ, ಹಣ್ಣಹಂಪಲು ಮತ್ತು ಉಡುಪುಗಳನ್ನು ಹಿಂದೆ ಹಾಕಿ ಮೊಬೈಲ್ ಫೋನ್ ಮೊದಲ ಸ್ಥಾಾನ ಪಡೆಯುವುದು ನಿಶ್ಚಿಿತ.

ಮೊಬೈಲ್ ಫೋನ್ ಹಿಡಿದಾಗ ಅಪಘಾತವಾದರೆ, ತಮ್ಮ ಜೀವಕ್ಕಿಿಂತ ಹೆಚ್ಚಾಾಗಿ ಮೊಬೈಲ್ ಸುರಕ್ಷಿತತೆ ಬಗೆಗೆ ಹೆಚ್ಚಿಿನ ಗಮನ ಕೊಡುತ್ತಾಾರೆ ಎನ್ನುವ ಗಂಗಾವತಿ ಪ್ರಾಾಣೇಶರ ಜೋಕ್‌ನಲ್ಲಿ ಅರ್ಥವಿಲ್ಲದಿಲ್ಲ. ಮದುವೆ ಮಾಡಿಕೊಟ್ಟ ಹೆಣ್ಣುಮಗಳು ಗಂಡನ ಮನೆಗೆ ಹೊರಟವಳು ಓಡೋಡಿ ಹಿಂದೆ ಬರುತ್ತಿಿರುವುದನ್ನು ನೋಡಿ ತಾಯಿ ಹೌಹಾರಿದ್ದಳಂತೆ. ಅವಳು ಮರೆತುಹೋದ ಮೊಬೈಲ್ ತೆಗೆದು ಕೊಂಡು ಹೋಗಲು ಬಂದಿದ್ದಳು ಎನ್ನುವುದನ್ನು ತಿಳಿದು ನಿಟ್ಟುಸಿರು ಬಿಟ್ಟಳು ಎನ್ನುವ ಜೋಕ್ ಸತ್ಯಕ್ಕೆೆ ದೂರವಾಗಿಲ್ಲ.

ಪ್ರತಿಯೊಂದು ಆವಿಷ್ಕಾಾರವನ್ನೂ ಒಂದು ಒಳ್ಳೆೆ ಉದ್ದೇಶಕ್ಕೆೆ ಮಾಡಲಾಗಿರುತ್ತದೆ. ಆದರೆ, ಇದರ ದುರ್ಬಳಕೆಯೇ ಹೆಚ್ಚಾಾಗುತ್ತಿಿದೆ ಎನ್ನುವುದಂತೂ ನಿಜ. ಎಪ್ಪತ್ತು-ಎಂಬತ್ತರ ದಶಕ ಭಾರತದಲ್ಲಿ ರೇಡಿಯೋ-ಟ್ರಾಾನ್ಸಿಿಸ್ಟರ್ ಯುಗವಾಗಿತ್ತು. ಇದರ ಬಳಕೆ ಎಷ್ಟಾಾಗಿತ್ತೆೆಂದರೆ ರಸ್ತೆೆಯಲ್ಲಿ ಅಡ್ಡಾಾಡುವವರು ಹೆಗಲಿಗೆ ಟ್ರಾಾನ್ಸಿಿಸ್ಟರ್ ತಗುಲಿಸಿಕೊಂಡು ಹೋಗುತ್ತಿಿದ್ದರು. ಹೊಲಗಳಲ್ಲಿ ಗದ್ದೆ ಉಳುವ ರೈತರು ನೇಗಿಲ ತುದಿಗೆ ಟ್ರಾಾನ್ಸಿಿಸ್ಟರ್ ನೇತು ಹಾಕಿಕೊಳ್ಳುತ್ತಿಿದ್ದರು. ಆ ಕಾಲದಲ್ಲಿ, ಈಗಿನಂತೆ ಮನರಂಜನೆ ಪ್ರಧಾನವಾದ ಖಾಸಗಿ ಎಫ್‌ಎಂ ಆಕಾಶವಾಣಿ ಕೇಂದ್ರಗಳು ಇರದೇ, ಸರಕಾರಿ ನಿಯಂತ್ರಿಿತ ಆಕಾಶವಾಣಿ ಕೇಂದ್ರಗಳು ಇದ್ದು, ಕೇಳುಗರಿಗೆ ಏನು ಬೇಕು ಎನ್ನುವದನ್ನು ಸರಕಾರ ನಿರ್ದೇಶಿಸುತ್ತಿಿತ್ತು.

ಸರಕಾರ ಉಣಬಡಿಸುತ್ತಿಿದ್ದ ಊಟ ಕ್ರಮೇಣ ರುಚಿ ಕಳೆದುಕೊಳ್ಳುತ್ತಿಿರಲು, ಟೂ ಇನ್ ಒನ್ ಮತ್ತು ಟೇಪ್ ರೆಕಾರ್ಡರ್ ಆ ಸ್ಥಾಾನವನ್ನು ತುಂಬಿತು. ಸಂಗೀತ, ಮುಖ್ಯವಾಗಿ ಚಲನಚಿತ್ರಗೀತೆಗಳಿಂದಾಗಿ ಅದು ಹಲವು ವರ್ಷ ಮನೆಮಾತಾಯಿತು. ಇವು ಇಲ್ಲದ ಮನೆಗಳು ಸೂತಕದ ಮನೆಗಳಂತೆ ಕಳಾಹೀನವಾಗಿರುತ್ತಿಿದ್ದವು. ತೊಂಬತ್ತರ ದಶಕದಲ್ಲಿ ಟಿವಿ ಪ್ರವೇಶವಾಗುತ್ತಿಿರುವಂತೆ ಹಳೆಯ ಆವಿಷ್ಕಾಾರಗಳು ಮನೆಯ ಮಾಳಿಗೆಗೆ ಸೇರಿದವು. ದೂರದರ್ಶನದ ಏಕಾಚಕ್ರಾಾಧಿಪತ್ಯ ಅಂತ್ಯಕಂಡು ಖಾಸಗಿ ಚಾನೆಲ್‌ಗಳು, ವಿವಿಧ ರೀತಿಯ ಆ್ಯಂಟೆನಾಗಳು, ಕೇಬಲ್‌ಗಳು ಉಪಗ್ರಹ ಪ್ರಸಾರದ ಡಿಟಿಎಚ್ ಗಳು ತುಂಬಿಕೊಂಡು ಡ್ರಾಾಯಿಂಗ್ ರೂಮುಗಳು ಸಂಗೀತ,ಧಾರಾವಾಹಿಗಳು, ಚಲನಚಿತ್ರಗಳಿಂದ ಮತ್ತು ಕ್ರಿಿಕೆಟ್ ಕಾಮೆಂಟರಿಗಳಿಂದ ನಲುಗಿದವು.

ಹಿರಿಯರು ನ್ಯೂಸ್ ಚಾನೆಲ್‌ಗೆ, ಮಹಿಳೆಯರು ಪ್ರಾಾಂತೀಯ ಭಾಷೆಗಳ ಧಾರಾವಾಹಿಗಳಿಗೆ, ಮಕ್ಕಳು ಸ್ಪೋೋಟ್‌ಸ್‌ ಚಾನೆಲ್‌ಗಳಿಗೆ ಹೆಣ್ಣುಮಕ್ಕಳು ಹಿಂದಿ/ಇಂಗ್ಲಿಿಷ್ ಧಾರಾವಾಹಿಗಳಿಗೆ ಮತ್ತು ಚಲನಚಿತ್ರಗಳಿಗೆ ಮುಗಿಬೀಳುತ್ತಿಿರಲು, ಮನೆಗಳಲ್ಲಿ ಚಾನೆಲ್ ವಾರ್ ಟಾಪ್ ಗೇರ್ ತಲುಪಿತು. ಮನೆಯಲ್ಲಿ ಟಿವಿ ಇಲ್ಲವೆಂದು ಮತ್ತು ತಮ್ಮ ನೆಚ್ಚಿಿನ ಚಾನೆಲ್ ವೀಕ್ಷಿಸಲು ಅವಕಾಶ ಸಿಗಲಿಲ್ಲವೆಂದು ಆತ್ಮಹತ್ಯೆೆ ಮಾಡಿಕೊಳ್ಳುವವವರೆಗೂ ಹುಚ್ಚಾಾಟ ನಡೆದಿದ್ದೂ ಹೌದು. ಅದು ಒಂದು ಬಗೆಯಲ್ಲಿ ಇತ್ಯರ್ಥವಾಗಿ ಈಗ ಕೆಲವು ಮನೆಗಳಲ್ಲಿ ಪ್ರತಿ ಕೋಣೆಗೆ ಒಂದು ಟಿವಿ ಸೆಟ್ ಇರುತ್ತದೆ.

ಇನ್ನೊೊಂದು ಕಡೆಯಿಂದ ‘ನೆಟ್ ಫ್ಲಿಿಕ್‌ಸ್‌’ ಮತ್ತು ‘ಅಮೆಜಾನ್ ಪ್ರೈಂ ವಿಡಿಯೋ’ದಂತಹ ಆವಿಷ್ಕಾಾರಗಳು ಬಂದವು. ಅದರ ಫಲವಾಗಿ ಅಂಗೈಯಲ್ಲಿ ಅರಮನೆಯನ್ನು ನೋಡುವ ಸೌಲಭ್ಯ ದೊರಕಿ ಮನೆ- ಮನೆಗಳಲ್ಲಿ ನಡೆಯುತ್ತಿಿದ್ದ ಚಾನೆಲ್ ವಾರ್ ನಿಯಂತ್ರಣಕ್ಕೆೆ ಬಂತು. ಕುಟುಂಬದ ಪ್ರತಿ ಸದಸ್ಯರೂ ಮನೆಯ ಯಾವುದೋ ಮೂಲೆಯಲ್ಲಿ ಕುಳಿತು ತಮ್ಮದೇ ಲೋಕದಲ್ಲಿ ಮುಳುಗಿರುವಾಗಿ ದರೋಡೆ ಮಾಡಿದರೂ, ಮನೆಯಲ್ಲಿದ್ದವರನ್ನು ಕೊಲೆ ಮಾಡಿ ಹೋದರೂ ಅವರಿಗೆ ತಿಳಿಯುವುದಿಲ್ಲ. ಕಣ್ಣೆೆದುರಿಗೆ ಮೊಬೈಲ್ ಮತ್ತು ಕಿವಿಯಲ್ಲಿ ಇಯರ್ ಫೋನ್ ಸದಾ ಇರುವ ಅವರೊಡನೆ ಸಂವಹನ ಮಾಡಬೇಕಿದ್ದರೆ, ಪುಪ್ಪುುಸ ಶಕ್ತಿಿಯನ್ನು ಗರಿಷ್ಠವಾಗಿ ತೋರಿಸಬೇಕು ಅಥವಾ ಹತ್ತಿಿರ ಹೋಗಿ ಭುಜ ಮುಟ್ಟಿಿ ಎಚ್ಚರಿಸಬೇಕು. ಈ ನಿಟ್ಟಿಿನಲ್ಲಿ ಪ್ರತಿಮನೆಯಲ್ಲೂ ಹಿರಿಯರು ಮತ್ತು ಕಿರಿಯರ ಮಧ್ಯೆೆ ಹೊಸದೊಂದು ಕುರುಕ್ಷೇತ್ರ ನಿತ್ಯ ನಡೆಯುತ್ತಿಿರುತ್ತದೆ.

ಒಂದು ಕಾಲಕ್ಕೆೆ ಮನೆಯಿಂದ ಹೊರಹೋಗುವ ಮಹಿಳೆಯರು, ಮುಖ್ಯವಾಗಿ ಕಚೇರಿಗಳಿಗೆ ಹೋಗುವ ಮಹಿಳೆಯರ ಕೈಯಲ್ಲಿ ಒಂದು ವ್ಯಾಾನಿಟಿ ಬ್ಯಾಾಗ್ ಮತ್ತು ಒಂದು ಮ್ಯಾಾಗಜಿನ್ ಇರುತ್ತಿಿದ್ದವು. ಇಂದು ಮ್ಯಾಾಗಜಿನ್ ಬದಲು ಅಲ್ಲಿ ಮೊಬೈಲ್ ಮಿಂಚುತ್ತಿಿದೆ. ಅವರು ವ್ಯಾಾನಿಟಿ ಬ್ಯಾಾಗ್- ಲಂಚ್ ಬಾಕ್ಸನ್ನಾಾದರೂ ಮರೆಯಬಹುದು, ಅದರೆ ಮೊಬೈಲ್‌ನ್ನು ಎಂದೂ ಮರೆಯುವುದಿಲ್ಲ ಎನ್ನುವ ತಮಾಷೆ ಜಾರಿಯಲ್ಲಿದೆ. ಮಹಿಳೆಯರು ಅದನ್ನು ಸದಾ ಅಂಗೈಯಲ್ಲಿಯೇ ಇಟ್ಟುಕೊಳ್ಳುವುದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆೆ ನಿರ್ವಾಹಕರಿಗೆ ದೊಡ್ಡ ತಲೆ ಬೇನೆ ಯಾಗಿದೆಯಂತೆ. ಬಹುತೇಕ ಪ್ರಯಾಣಿಕರು ಮೊಬೈಲ್‌ನಲ್ಲಿ ಮಗ್ನರಾಗಿರುವಾಗ, ಅವರನ್ನು ಎಚ್ಚರಿಸಿ ಟಿಕೆಟ್ ನೀಡವುದೇ ಪ್ರಯಾಸದ ಕೆಲಸ ಎನ್ನುತ್ತಾಾರೆ ನಿರ್ವಾಹಕರು. ಎಷ್ಟೋೋ ಪ್ರಯಾಣಿಕರು ತಮ್ಮ ಸ್ಟಾಾಪ್ ನಲ್ಲಿ ಇಳಿಯಲು ಮರೆತರೆ, ಇನ್ನು ಕೆಲವರು ತಮ್ಮ ನಿಲ್ದಾಾಣದಲ್ಲಿ ಇಳಿಯಲು ಮರೆತು ಮುಂದಿನ ನಿಲ್ದಾಾಣದಲ್ಲಿ ಇಳಿಯುತ್ತಾಾರಂತೆ; ತಮಗೆ ತಮ್ಮ ನಿಲ್ದಾಾಣವನ್ನು ಜ್ಞಾಪಿಸಿಲ್ಲ ಎಂದು ಕಂಡಕ್ಟರ್ ಜತೆ ಜಗಳ ತೆಗೆಯುತ್ತಾಾರಂತೆ!

ಪತ್ರಿಿಕೆಗಳ ಪುಟ ತಿರುವಿದಾಗ ಮೊಬೈಲ್ ಫೋನ್‌ಗಳಿಂದಾದ ಅವಾಂತರಗಳ ಸರಮಾಲೆಯೇ ಸಿಗುತ್ತದೆ. ಮೊಬೈಲ್ ಹಿಡಿದು ವಾಹನ ಚಾಲನೆ ಮಾಡಿ ಅಪಘಾತಕ್ಕೀಡಾಗಿ ಜೀವ ಕಳೆದುಕೊಂಡವರು, ಬದುಕಿದ್ದೂ ಸತ್ತವರು, ರೈಲು ಹಳಿ ದಾಟುವಾಗ ರೈಲಿಗೆ ಸಿಕ್ಕು ಸ್ವರ್ಗ ಸೇರಿದವರು, ರಸ್ತೆೆಯಲ್ಲಿ ಚಲಿಸುವಾಗ ಗಟಾರದಲ್ಲಿ ಬಿದ್ದವರು, ರಸ್ತೆೆ ಗುಂಡಿಯಲ್ಲಿ ಬಿದ್ದವರು, ಲಿಫ್‌ಟ್‌‌ನಲ್ಲಿ ಉರುಳಿದವರು, ಮಹಡಿ ಮೆಟ್ಟಿಿಲು ಹತ್ತುವಾಗ ಹೆಜ್ಜೆೆ ತಪ್ಪಿಿ ಮುಗ್ಗರಿಸಿದವರು, ಗ್ಲಾಾಸ್ ಬಾಗಿಲುಗಳನ್ನು ಮುಖಕ್ಕೆೆ ಹೊಡೆಸಿಕೊಂಡವರು, ರಸ್ತೆೆಯಲ್ಲಿ ಎದುರಿನಿಂದ ಬರುತ್ತಿಿರುವವರಿಗೆ ಮುಖಾಮುಖಿ ಡಿಕ್ಕಿಿ ಹೊಡೆದು ಮುಜುಗರ ಅನುಭವಿಸಿದವರು, ಮೊಬೈಲ್ ಕಳೆದುಕೊಂಡು ಅದರೊಂದಿಗೆ ತಮ್ಮ ವೈಯಕ್ತಿಿಕ ಮಾಹಿತಿ ಮತ್ತು ಖಾಸಗಿ ಫೋಟೋಗಳನ್ನು ಕಳೆದುಕೊಂಡು ಪರಿತಪಿಸಿದವರು…ಇವರೆಲ್ಲರ ಲೆಕ್ಕ ತೆಗೆದರೆ ಮೊಬೈಲ್ ಮಾಡುತ್ತಿಿರುವ ಅವಾಂತರಗಳ ಅರಿವು ಆಗದಿರದು.

ಮದ್ಯಪಾನ, ಡ್ರಗ್‌ಸ್‌ ಮತ್ತು ಸಿಗರೇಟ್‌ನಂತೆ ಮೊಬೈಲ್ ಕೂಡಾ ಒಂದು ರೀತಿಯಲ್ಲಿ *ಜ್ಚಿಿಠಿಜಿಟ್ಞ ಅಥವಾ ಚಟ ಎಂದು ಸಮಾಜ ವಿಜ್ಞಾಾನಿಗಳು ಅಭಿಪ್ರಾಾಯ ಪಡುತ್ತಾಾರೆ. ಅದನ್ನು ಸುಲಭವಾಗಿ ಬಿಡಿಸುವುದು ಕಷ್ಟ ಎನ್ನುತ್ತಾಾರೆ. ಸಣ್ಣ ಮಕ್ಕಳು ಅತ್ತರೆ, ರಗಳೆ ಮಾಡಿದರೆ ರಮಿಸಿ, ಮುದ್ದಾಡಿ, ಕಾಗಕ್ಕ- ಗುಬ್ಬಕ್ಕ , ಹಸು ದನಗಳ ಕಥೆ ಹೇಳಿ, ನಾಯಿ ಮರಿ- ಹಕ್ಕಿಿ ಪಕ್ಷಿಗಳನ್ನು ತೋರಿಸಿ, ಹಾಡು ಹೇಳಿ ಮತ್ತು ಆಟಿಗೆ ಸಾಮಾನುಗಳನ್ನು ನೀಡಿ ಸುಮ್ಮನಾಗಿಸುವ ಕಾಲ ಮುಗಿದು ಮಕ್ಕಳ ಕೈಗೆ ಮೊಬೈಲ್ ಆನ್ ಮಾಡಿ ನೀಡಿ ಅವರನ್ನು ಸುಮ್ಮನಾಗಿಸುವ ಟ್ರೆೆಂಡ್ ಆರಂಭವಾಗಿದೆ.

ಮೊಬೈಲ್ ಕುರಿತ ಒಂದು ಸಕರಾತ್ಮಕ ಸಂಗತಿಯನ್ನೂ ಇಲ್ಲಿ ಹೇಳಬೇಕು. ಅದರ ಗೀಳು ಕೌಟುಂಬಿಕ- ಸಾಮಾಜಿಕ ಸ್ವಾಾಸ್ಥ್ಯ ಕೆಡಿಸಿರಬಹುದು; ವಿದ್ಯಾಾರ್ಥಿಗಳ ಭವಿಷ್ಯಕ್ಕೂ ಮಾರಕವಾಗಿ ಕಾಣಬಹುದು. ಆದರೆ, ಅಪರಾಧ ಶೋಧನೆಯಲ್ಲಿ ಮಾತ್ರ ಇವುಗಳ ಪಾತ್ರ ಶ್ಲಾಾಘನೀಯ. ಇಂದು ಯಾರು ಎಲ್ಲೇ ಅಪರಾಧ ಎಸಗಲಿ, ಮೊಬೈಲ್ ‘ಸೌಜನ್ಯ’ದಿಂದಾಗಿ ಮನೆಗೆ ತೆರಳಿ ಸೋಫಾದಲ್ಲಿ ಕೂರುತ್ತಿಿರುವಂತೆ ಅವರ ಘನಕಾರ್ಯ ಮನೆಯ ಕಿರು ತೆರೆಯ ಮೇಲೆ ಕಾಣುತ್ತಿಿರುತ್ತದೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಜಗಜ್ಜಾಾಹೀರಾಗಿರುತ್ತದೆ. ಇದು ಅಪರಾಧ ಎಸಗುವವರನ್ನು ಭಾರೀ ಎಚ್ಚರಿಕೆಯಲ್ಲಿ ಇರುವಂತೆ ಮಾಡಿದ್ದು, ಅಪರಾಧ ನಿಯಂತ್ರಣದಲ್ಲಿ ಸಹಾಯಕಾರಿಯಾಗಿದೆ ಎಂದು ಹೇಳಲಾಗುತ್ತಿಿದೆ.

ಹಾಗೆಯೇ ಮೊಬೈಲ್‌ನಿಂದಾಗಿ ಕೆಲವರ ಖಾಸಗಿ ಜೀವನ ಮತ್ತು ಖಾಸಗಿ ಕ್ಷಣಗಳು, ಬೀದಿಗೆ ಬಂದು ಮುಜುಗರ ಪಡುವಂತಾಗಿದೆ. ಇಂದು ಎಲ್ಲರೂ ಮೊಬೈಲ್ ನಲ್ಲಿ ತಲ್ಲೀನರಾಗಿರುವುದರಿಂದ ಹಾಳು ಹರಟೆ ಮತ್ತು ಇನ್ನಿಿತರ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ ಎನ್ನುವ ಅಭಿಪ್ರಾಾಯದಲ್ಲಿ ಸತ್ಯವಿಲ್ಲದಿಲ್ಲ. ಅಷ್ಟರಮಟ್ಟಿಿಗೆ ಜಗತ್ತು ಶಾಂತವಾಗಿರುತ್ತದೆ ಎನ್ನಬಹುದು. ಪ್ರೀತಿ, ಪ್ರಣಯಗಳಲ್ಲಿ ಮೊಬೈಲ್ ಆವಿಷ್ಕಾಾರ ಮಾಡಿದ ಅವಾಂತರಗಳು ಲೆಕ್ಕವಿಲ್ಲದಷ್ಟು ಇವೆ. ಆದರೂ, ಮೊಬೈಲ್ ಇಂದು ಬದುಕಿನ ಅವಿಭಾಜ್ಯ ಅಂಗವಾಗಿ ಬಹುಕಾಲ ಮುಂದುವರಿಯಲಿದೆ ಎಂಬ ಎಲ್ಲ ಸೂಚನೆಗಳೂ ಕಾಣುತ್ತಿಿವೆ.