Thursday, 19th May 2022

ದಾವಣಗೆರೆಯ ಹೊತ್ತಿ ಉರಿದ ಮೊಬೈಲ್ ಟವರ್

ದಾವಣಗೆರೆ : ಬೆಂಗಳೂರು ಬೆಂಕಿ ಅವಘಡ ಮಾಸುವ ಮುನ್ನ ಶನಿವಾರ ದಾವಣಗೆರೆಯ ಮುಖ್ಯ ಪ್ರದೇಶದ ಮೊಬೈಲ್ ಟವರ್ ಹೊತ್ತಿ ಉರಿದಿದೆ.

ಅವಘಡದಲ್ಲಿ ಜನರೇಟರ್ ಬ್ಯಾಟರಿ ಮತ್ತು ಅಪಾರ ಪ್ರಮಾಣದ ಕೇಬಲ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಕೂಡಲೇ ಸ್ಥಳಕ್ಕೆ ಆಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಬರದಿದ್ದರೆ ಬೆಂಕಿ ಪಕ್ಕದ ಅಂಗಡಿಗಳಿಗೆ ಹಬ್ಬಿ ದೊಡ್ಡ ದುರಂತವೇ ನಡೆಯುತ್ತಿತ್ತು.