Friday, 9th December 2022

ಗಾಂಧಿನಗರದಲ್ಲಿ ಪ್ರಧಾನಿ ಮೋದಿ ರೋಡ್ ಶೋ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಪ್ರವಾಸದ ಎರಡನೇ ದಿನ ಗಾಂಧಿನಗರದಲ್ಲಿ ರೋಡ್ ಶೋ ನಡೆಸಿದರು.

ಬಳಿಕ ಪ್ರಧಾನಿ ಮೋದಿ ಅವರು ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯಕ್ಕೆ ಆಗಮಿಸಲಿದ್ದಾರೆ. ಪಿಎಂ ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗ ಈ ವಿಶ್ವವಿದ್ಯಾಲಯ ಅವರ ಕನಸಿನ ಯೋಜನೆಗಳಲ್ಲಿ ಒಂದಾಗಿತ್ತು. ಪ್ರಧಾನಿ ಮೋದಿ ನಿನ್ನೆ ಕೂಡ ಅಹಮದಾಬಾದ್‌ನಲ್ಲಿ ರೋಡ್ ಶೋ ಮಾಡಿದ್ದಾರೆ.

ಪ್ರಧಾನಿ ಮೋದಿಯವರ ರೋಡ್‌ಶೋನಲ್ಲಿ ಭಾರೀ ಜನಸ್ತೋಮ ಕಂಡುಬಂದಿದ್ದು, ಇವರು ಮಧ್ಯಾಹ್ನ ರಾಜಭವನಕ್ಕೆ ಹಿಂದಿರು ಗಲಿದ್ದಾರೆ. ನಂತರ ಅಹಮದಾಬಾದ್‌ನ ನವರಂಗ್‌ಪುರ ಪ್ರದೇಶದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಸಂಜೆ ಖೇಲ್ ಮಹಾಕುಂಭ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ನಂತರ ರಾತ್ರಿ 8.30ಕ್ಕೆ ವಿಶೇಷ ವಿಮಾನದ ಮೂಲಕ ಪ್ರಧಾನಿ ಮೋದಿ ದೆಹಲಿಗೆ ತೆರಳಲಿದ್ದಾರೆ.