Tuesday, 27th July 2021

ಒಲಿಂಪಿಕ್ಸ್’ನಲ್ಲಿ ಭಾರತೀಯ ಉತ್ಸಾಹ ಹೆಚ್ಚಿಸಿದ ಮೋದಿ

ಪ್ರಚಲಿತ

ಎಲ್.ಪಿ.ಕುಲಕರ್ಣಿ, ಬಾದಾಮಿ

ಒಲಿಂಪಿಕ್ಸ್ ಪಂದ್ಯಗಳು. ಈ ಹೆಸರನ್ನು ಕೇಳಿದೊಡನೆ ಮನದಲ್ಲಿ ಏನೋ ಒಂದು ರೀತಿಯಲ್ಲಿ ರೋಮಾಂಚನವಾಗುತ್ತದೆ. ಜಗತ್ತಿನ ಅತಿ ಬಲಿಷ್ಠ, ತೀಕ್ಷ್ಣ, ಚುರುಕಿನ, ವೇಗದ, ವಿಶೇಷ ಕೌಶಲ್ಯಗಳಿಂದ ಕೂಡಿದ ಕ್ರೀಡಾಪಟುಗಳು ಆ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಒಲಿಂಪಿಕ್ಸ್ ಪಂದ್ಯಗಳಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕ್ರೀಡಾ ಪಟುವೂ ಸಹ ದೇಶ ಕಾಯೋ ಒಬ್ಬ ಸೈನಿಕನಿದ್ದಂತೆ.

ತನ್ನೆ ಶಕ್ತಿ, ಕೌಶಲ್ಯಗಳನ್ನು ಓರೆಗೆ ಹಚ್ಚಿ ಒಂದಾದರೂ ಪದಕ ಗೆದ್ದು ತನ್ನ ಮಾತೃ ಭೂಮಿಗೆ ಸಮರ್ಪಿಸಬೇಕೆಂದು ದೃಢ ನಿರ್ಧಾರದ, ಆತ್ಮವಿಶ್ವಾಸದಿಂದಲೇ ಮುನ್ನುಗ್ಗುವ ಸಂಕಲ್ಪ ಮಾಡಿರುತ್ತಾನೆ. ಪ್ರತಿ ನಾಲ್ಕು ವರ್ಷಗಳಿ ಗೊಮ್ಮೆ ನಡೆಯುವ ಈ ಒಲಿಂಪಿಕ್ಸ್ ಪಂದ್ಯಗಳನ್ನು ನೋಡುವುದೇ ಒಂದು ಕಣ್ಣಿಗೆ ಹಬ್ಬ. ಇದೇ ಜುಲೈ ೨೩ ರಿಂದ ಆಗ ೮ರವರೆಗೆ ಜಪಾನ್ ದೇಶದ ಟೋಕಿಯೊದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಗಳು ನಡೆ ಯಲಿವೆ. ೧೯೬೪, ಅಂದರೆ ಈಗ ಬರೊಬ್ಬರಿ ೫೭ ವರ್ಷಗಳ ಹಿಂದೆ ಇದೇ ಟೋಕಿಯೊದಲ್ಲಿ ಒಲಿಂಪಿಕ್ಸ್ ಪಂದ್ಯಗಳು ಜರುಗಿದ್ದವು. ಈಗ ಮತ್ತೆ ಅ ನಡೆಯುತ್ತಿವೆ ಎನ್ನುವುದೊಂದು ವಿಶೇಷ.

ಈ ಬಾರಿ ಜಪಾನ್ ಚಕ್ರವರ್ತಿ ನರುಹಿಟೊ ಜುಲೈ ೨೩ರಂದು ನಡೆಯುವ ಪಂದ್ಯಗಳ ಉದ್ಘಾಟನಾ ಸಮಾ ರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ೬೧ ವರ್ಷದ ನರುಹಿಟೊ, ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್‌ಗೂ ಗೌರವ ಪೋಷಕರಾಗಿದ್ದಾರೆ. ಈ ಒಲಿಂಪಿಕ್ ಕ್ರೀಡೆಗಳಿಗೆಂದೇ ರಚಿಸಿದ ಸಂವಿಧಾನದ ಪ್ರಕಾರ, ಆತಿಥೇಯ ದೇಶದ ಮುಖ್ಯಸ್ಥರಿಗೆ ಪಂದ್ಯಗಳ ಆರಂಭವನ್ನು ಘೋಷಿಸುವ ಅಽಕಾರವಿರುತ್ತದೆ. ಈ ಸಾರಿ ಇಂತಹ ಸುದೈವಕ್ಕೆ ನರುಹಿಟೊ ಪಾತ್ರರಾಗಿದ್ದಾರೆ.

ಸದ್ಯ ನಡೆಯಲಿರುವ ಈ ಟೋಕಿಯೊ ಒಲಿಂಪಿಕ್ಸ್ ಪಂದ್ಯಗಳಿಗಾಗಿಯೇ ೩೩೯ ಪದಕಗಳನ್ನು ಸಿದ್ಧಪಡಿಸಲಾಗಿದೆ. ಇನಿದೆ ಅಂತಹ ವಿಶೇಷ ಅಂತಿರಾ? ಇದುವರೆಗೆ ಅಲ್ಲಿರುವ ಗಣ್ಯವ್ಯಕ್ತಿಗಳು ಪಂದ್ಯಗಳಲ್ಲಿ ಗೆದ್ದ ಕ್ರೀಡಾಪಟುಗಳ ಕೊರಳಿಗೆ ಪದಕ ಮಾಲೆಯನ್ನು ಹಾಕಿ, ಕೈಗೆ ಹೂಗುಚ್ಛವನ್ನು ಕೊಟ್ಟು ಸನ್ಮಾನಿಸುತ್ತಿದ್ದದ್ದು ಸಂಪ್ರದಾಯವಾಗಿತ್ತು. ಆದರೆ, ಈ ಸಾರಿ, ಕರೋನಾ ಮಹಾಮಾರಿ ಜಗತ್ತನ್ನು ವ್ಯಾಪಿಸಿರುವುದರಿಂದ, ಗೆದ್ದ ಕ್ರೀಡಾಪಟುಗಳು ಗಣ್ಯರಿಂದ ಪದಕ ಧರಿಸುವುದರ ಬದಲಾಗಿ, ತಾವೇ ಕೊರಳಿಗೆ ಪದಕದ ಮಾಲೆಯನ್ನು ಹಾಕಿಕೊಂಡು ವಿಜೃಂಭಿಸುತ್ತಾರೆ!

ಎಂಬುದಾಗಿ ಅಂತಾ ರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಓಸಿ) ಅಧ್ಯಕ್ಷ ಥಾಮಸ್ ಬಾಚ್ ಹೇಳುತ್ತಾರೆ. ಪದಕಗಳನ್ನು ಟ್ರೇ(ತಟ್ಟೆ) ನಲ್ಲಿ ಇಡುವ ವ್ಯಕ್ತಿಗಳೂ ಸಹ ತಮ್ಮ ಕೈಗಳಿಗೆ ಗ್ಲೌಸ್ ಹಾಕಿರುತ್ತಾರೆ. ಈ ಸಾರಿ, ಪದಕ ಪ್ರದಾನ ಸಮಾರಂಭದಲ್ಲಿ ಕ್ರೀಡಾ ಪಟುಗಳು ಪರಸ್ಪರ ಹ್ಯಾಂಡ್ ಶೇಕ್ ಮಾಡುವಂತಿಲ್ಲ. ಈ ಹಿಂದೆ, ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದ ವ್ಯಕ್ತಿಯನ್ನು ರೆ-ರಿಯಾದವನು, ಸೋತವನ ಜತೆ ಕೈಮಿಲಾಯಿಸಿ, ಅಪ್ಪುಗೆ ಮಾಡುವಂತೆ ಸೂಚಿಸುತ್ತಿದ್ದ. ಆದರೆ, ಈ ಸಾರಿ ಪರಸ್ಪರ ಅಪ್ಪುಗೆಯನ್ನೂ ನಿರ್ಬಂಽಸಲಾಗಿದೆ. ಅಲ್ಲದೇ, ಸಮಾರಂಭದಲ್ಲಿ ಕ್ರೀಡಾಪಟುಗಳು, ಅಧಿಕಾರಿಗಳು, ರೆ-ರಿಗಳು ಕಡ್ಡಾಯವಾಗಿ ಮಾ ಧರಿಸುವಂತೆ
ಆದೇಶಿಸಲಾಗಿದೆ.

೧೯೦೮ರ ಲಂಡನ್ ಒಲಿಂಪಿಕ್ಸ್ ೧೮೭ ದಿನ ನಡೆದಿತ್ತು. ಏಪ್ರಿಲ್ ೨೭ ರಂದು ಆರಂಭವಾದ ಒಲಿಂಪಿಕ್ಸ್ ಅಕ್ಟೋಬರ್ ೩೧ರವರೆಗೂ ನಡೆದಿತ್ತು! ೧೯೦೦ರ ಪ್ಯಾರಿಸ್ ಒಲಿಂಪಿಕ್ಸ್ ಕೂಡ ತಿಂಗಳು ನಡೆದಿತ್ತು. ಈ ಬಾರಿ ಟೋಕಿಯೊ ಒಲಿಂಪಿಕ್ಸ್ ೧೭ ದಿನಗಳ ಮುಕ್ತಾಯಗೊಳ್ಳಲಿದೆ. ಕಾರಣ ಕರೋನಾ. ಒಟ್ಟಿನಲ್ಲಿ ಕರೋನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ಎಚ್ಚರವಹಿಸಲಾಗುತ್ತಿದೆ. ಪ್ರಸ್ತುತ, ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ ಪಂದ್ಯಾವಳಿಗಳು ಇಷ್ಟೆ ವಿಶೇಷತೆಗಳಿಂದ ಕೂಡಿವೆ.

೨೦೧೬ರಲ್ಲಿ ರಿಯೋದಲ್ಲಿ ನಡೆದ ಪಂದ್ಯಗಳಲ್ಲಿ ಭಾರತದಿಂದ ೧೧೭ ಕ್ರೀಡಾಪಟುಗಳು ಭಾಗವಹಿಸಿದ್ದರು. ಸಾಮಲಿಕ್, ಕುಸ್ತಿಪಂದ್ಯದಲ್ಲಿ ಕಂಚಿನ ಪದಕ ಗೆದ್ದು ತಂದಿದ್ದಲ್ಲದೆ, ಬ್ಯಾಡ್ಮಿಂಟನ್‌ನಲ್ಲಿ, ಪಿ.ವಿ.ಸಿಂಧು, ಬೆಳ್ಳಿ ಪದಕ ಗೆದ್ದು, ಭಾರತದ ಹಿರಿಮೆಯನ್ನು ಹಿಮಾಲಯದ ಎತ್ತರಕ್ಕೆ ಒಯ್ದಿದ್ದರು. ಸದ್ಯ, ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ ಪಂದ್ಯಗಳಲ್ಲಿ ಭಾರತದಿಂದ ಒಟ್ಟು ೧೧೯ ಕ್ರೀಡಾಪಟುಗಳು (೬೭ ಪುರುಷರು, ೫೨ ಮಹಿಳೆಯರು) ಭಾಗವಹಿಸುತ್ತಿದ್ದಾರೆ.

೧೨೧ ವರ್ಷಗಳ ಆಧುನಿಕ ಒಲಿಂಪಿಕ್ಸ್ ಇತಿಹಾಸದಲ್ಲಿ, ಭಾರತ, ಒಟ್ಟು ೨೮ ಪದಕಗಳನ್ನು ಗೆದ್ದಿದೆ. ವಿಚಿತ್ರವೆಂದರೆ, ಅಮೆರಿಕದ ಪ್ರಖ್ಯಾತ ಈಜುಗಾರ ಮೈಕೆಲ್ -ಲ್ಸ್ ಒಬ್ಬನೇ ಆಡಿದ ಒಲಿಂಪಿಕ್ಸ್ ಗಳಲ್ಲಿ ೨೮ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ! ಈ ಮಧ್ಯೆ, ಟೋಕಿಯೊಗೆ ಹೊರಟುನಿಂತ ಭಾರತದ ಕ್ರೀಡಾಪಟುಗಳ ಹಾಗೂ ಅವರ ಪಾಲಕರ ಜತೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ವರ್ಚುಯಲ್ ಸಂವಾದ ಎಂದೂ ಮರೆಯದಂತಿತ್ತು. ಈ ಸಂವಾದದಲ್ಲಿ ಕ್ರೀಡಾಪಟುಗಳ ಜೀವನ, ಕಷ್ಟ-ಕಾರ್ಪಣ್ಯಗಳ ಹಾಗೂ ಅವರ ಸಾಧನೆಯ ಹಾದಿಯನ್ನು ಮೆಚ್ಚಿ ಪ್ರಧಾನಿ ಮಾತನಾಡಿದರು. ತಾವು ಪ್ರಧಾನಿ ಎಂಬ ಹಮ್ಮುಬಿಮ್ಮನ್ನು ಪಕ್ಕಕ್ಕಿಟ್ಟು ಅವರ ಜತೆ ಆತ್ಮೀಯವಾಗಿ ಲೋಕಾಭಿರಾಮವಾಗಿ ಹಾಸ್ಯಪೂರ್ಣವಾಗಿ ಹರಟಿದರು.

ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರ ಪಾಲಕರ ಜತೆ ಮಾತನಾಡುವಾಗ, ‘ಯಾವ ಹಿಟ್ಟಿನಿಂದ ತಯಾರಿಸಿದ ರೋಟಿ ನೀಡಿ ಮಗಳನ್ನು ಕುಸ್ತಿಪಟು ವನ್ನಾಗಿ ಮಾಡಿದಿರಿ?’ ಎಂದು ಹಾಸ್ಯದ ಹೊನಲನ್ನು ಹರಿಸಿ ದರು. ಬ್ಯಾಡ್ಮಿಂಟನ್ ತಾರೆ ಆಂಧ್ರದ ಪಿ.ವಿ.ಸಿಂಧು ಅವರಿಗೆ ಐಸ್ ಕ್ರೀಂ ಇಷ್ಟವೆಂದು ಮೊದಲೇ ಅರಿತಿದ್ದ ಮೋದಿ, ‘ಮುಂದೆ ಜತೆಯಾಗಿ ಐಸ್ ಕ್ರೀಂ ತಿನ್ನೋಣ’ ಎಂದರು. ತಮಿಳುನಾಡು ಮೂಲದ ಶೂಟರ್, ಎಲವೆನಿಲ್ ವಲರಿಯನ್ ಪೋಷಕರಿಗೆ’ ವಣಕ್ಕಂ’ ನಮಸ್ಕಾರ ಎಂದು ಅವರ ಮಾತೃಭಾಷೆ ತಮಿಳನ ಹೇಳಿದರು.

ಬಾಕ್ಸರ್ ಆಶೀಶ್ ಕುಮಾರ್ ಜತೆ ಮಾತನಾಡುವಾಗ’ ನಿಮ್ಮ ತಂದೆ ಒಬ್ಬ ಶ್ರೇಷ್ಠ ಕಬಡ್ಡಿ ಆಟಗಾರರು. ನೀವ್ಯಾಕೆ ಬಾಕ್ಸರ್? ’ ಎಂದು ಪ್ರಶ್ನಿಸಿದರು. ಅದಕ್ಕೆ ಆಶಿಶ್, ‘ನನ್ನ ಸಹೋದರ ಕುಸ್ತಿಪಟು. ಆದರೆ, ನನ್ನ ಶರೀರ ಚಿಕ್ಕದು ಹೀಗಾಗಿ ಬಾಕ್ಸಿಂಗ್ ಆಯ್ಕೆ ಅನಿವಾರ್ಯವಾಯಿತು’ ಎಂದರು. ಜಾವಲಿನ್ ಥ್ರೋ ಕ್ರೀಡಾಪಟು ನೀರಜ್ ಚೋಪ್ರಾ ಅವರ ಸಾಧನೆಗೆ ಹ್ಯಾಟ್ಸಪ್ ಹೇಳಿದರು. ಮಹಿಳಾ ಬಾಕ್ಸರ್ ಮೇರಿಕೋಮ್ ಅವರಿಗೆ ‘ದೇಶದ ಕ್ರೀಡಾ ಕ್ಷೇತ್ರಕ್ಕೆ ನೀವು ಸ್ಫೂರ್ತಿ’ ಎಂದು ಕೊಂಡಾಡಿದರು. ಹೀಗೆ ಪ್ರತಿಯೊಬ್ಬ ಕ್ರೀಡಾಪಟುವನ್ನು ಬಹಳ ಆತ್ಮೀಯವಾಗಿ ಮಾತನಾಡಿಸುತ್ತಾ, ಅವರ ಸಾಧನೆ ಯನ್ನು ಹೊಗಳುತ್ತಾ ಹೋದ ಪ್ರಧಾನಿ, ಕೇವಲ ಪದಕ ಗೆಲ್ಲುವ ಒತ್ತಡದಿಂದ ಸ್ಪರ್ಧಿಸಬೇಡಿ, ದೇಶ ಸದಾ ನಿಮ್ಮ ಬೆಂಬಲಕ್ಕೆ ನಿಂತಿದೆ.

ಆದರೆ, ನೀವು ನಿಮ್ಮ ಅದಮ್ಯ ಶಕ್ತಿಯನ್ನು ಪ್ರದರ್ಶಿಸಿ ಉತ್ತಮ ಸಾಧನೆಯನ್ನು ಮಾಡಬೇಕು. ‘ನೀವೇ ನಂಬರ್ ಒನ್’ ‘ನೀವೆಲ್ಲರೂ ಹೊಸಯುಗದ ಭಾರತದ
ಸಾಧಕರು’ ಎಂದು ಹೃದಯತುಂಬಿ ಕೊಂಡಾಡಿದರು. ಹೀಗೆ ಗಂಟೆಗಿಂತಲೂ ಹೆಚ್ಚಿಗೆ ನಡೆದ ಪ್ರಧಾನಿ-ಕ್ರೀಡಾಪಟುಗಳ ಸಂವಾದ ಅವೀಸ್ಮರಣೀಯವಾಗಿತ್ತು.
ದೇಶದ ರಾಷ್ಟ್ರೀಯ ಕ್ರೀಡೆ ಹಾಕಿ. ಇದುವರೆಗೂ ನಡೆದಿರುವ ಒಲಿಂಪಿಕ್ಸ್ ಪಂದ್ಯಗಳಲ್ಲಿ, ಭಾರತದ ಹಾಕಿ ತಂಡವು ಆಮಸ್ಟರ್ ಡ್ಯಾಂ (೧೯೨೮), ಲಾಸ್
ಏಂಜಲೀಸ್ (೧೯೩೨), ಬರ್ಲೀನ್ (೧೯೩೬), ಲಂಡನ್ (೧೯೪೮), ಹೆಲ್ಸಿಂಕಿ (೧೯೫೨), ಮೆಲ್ಬರ್ನ್ (೧೯೫೬), ಟೋಕಿಯೊ (೧೯೬೪), ಮಾಸ್ಕೊ (೧೯೮೦) ಗಳಲ್ಲಿ ಸತತವಾಗಿ ಚಿನ್ನದ ಪದಕಗಳನ್ನು ಗೆದ್ದಿದೆ.

೧೯೬೦ರಲ್ಲಿ ರೋಮ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದರೆ, ಮೆಕ್ಸಿಕೊ ಸಿಟಿ (೧೯೬೮) ಹಾಗೂ ಮ್ಯೂನಿಚ್ (೧೯೭೨) ಗಳಲ್ಲಿ ನಡೆದ ಪಂದ್ಯಗಳಲ್ಲಿ
ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಹೀಗೆ ಹಾಕಿ ಪಂದ್ಯ ಒಂದರ ಒಟ್ಟು ೧೧ ಪದಕಗಳನ್ನು ಭಾರತದ ಕ್ರೀಡಾಪಟುಗಳು ಗೆದ್ದು ತಂದಿದ್ದಾರೆ.
ವಿಶೇಷವಾಗಿ ನಮ್ಮ ದೇಶೀಯ ಕುಸ್ತಿ ಕ್ರೀಡೆಯ ಬಗ್ಗೆ ಗಮನಹರಿಸುವುದಾದರೆ, ಇದುವರೆಗೂ ಒಲಿಂಪಿಕ್ಸ್ನಲ್ಲಿ, ಭಾರತಕ್ಕೆ ಪುರುಷ ಹಾಗೂ ಮಹಿಳಾ ವಿಭಾಗದ ಕುಸ್ತಿ ಪಂದ್ಯಾವಳಿಗಳಲ್ಲಿ ಒಟ್ಟು ೧೦ ಪದಕಗಳು ಸಂದಿವೆ. ಭಾರತ, ಆಗ ಒಲಿಂಪಿಕ್ಸ್ನಲ್ಲಿ ಗುಂಪು ಆಟ ಹಾಕಿಯಲ್ಲಿ ಚಿನ್ನದ ಪದಕಗಳನ್ನು ಗೆದ್ದು ಬೀಗುತ್ತಿತ್ತೆನೋ ನಿಜ. ಇದು ಕೇವಲ ಗುಂಪು ಕ್ರೀಡೆಗಳಿಗೆ ಸೀಮಿತವಾಗಿತ್ತು. ಆದರೆ, ವೈಯಕ್ತಿಕ ಕ್ರೀಡೆಗಳಿಗೆ ಪದಕಗಳೇ ದಕ್ಕಿದ್ದಿಲ್ಲ.

ಇಂತಹ ಸಂದರ್ಭದಲ್ಲಿ ಕುಸ್ತಿಯಲ್ಲಿ ಪದಕ ತಂದ ಶ್ರೇಯಸ್ಸು ಕುಸ್ತಿಪಟು ಮಹಾರಾಷ್ಟ್ರದ ಕಾಶಾಬಾ ದಾದಾಸಾಹೇಬ್ ಜಾಧವ್‌ಗೆ ಸಲ್ಲುತ್ತದೆ. ಅದು ೧೯೫೨ರಲ್ಲಿ ಹೆಲ್ಸಿಂಕಿಯಲ್ಲಿ ನಡೆದ ಒಲಿಂಪಿಕ್ಸ್. ಮಹಾರಾಷ್ಟ್ರದ ಸಾತಾರ ಜಿಯ ಕರಾಡ್ ತಾಲೂಕಿನ ಗೋಲೇಶ್ವರ್ ಗ್ರಾಮದವರಾದ ಜಾಧವ್, ‘ಪಾಕೆಟ್ ಡೈನಾಮೊ’ ಎಂದೇ ಹೆಸರುವಾಸಿಯಾಗಿದ್ದರು. ಭಾರತಕ್ಕೆ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದು ತಂದು ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದರು. ಜಾಧವ್, ಪದಕ ಗೆದ್ದು ತಮ್ಮ
ಗ್ರಾಮಕ್ಕೆ ಮರಳುವ ಸಂದರ್ಭದಲ್ಲಿ, ಕರಾಡದ ರೈಲ್ವೇ ನಿಲ್ದಾಣದಿಂದ ಗೋಲೇಶ್ವರದವರೆಗೆ ದೊಡ್ಡ ಮೆರವಣಿಗೆಯೇ ನಡೆದಿತ್ತು.

೧೫೧ ಚಕ್ಕಡಿಗಳಲ್ಲಿ ಅಭಿಮಾನಿಗಳು ಸೇರಿದ್ದರು. ಡೋಲು, ಕುಣಿತಗಳಿಂದ ಬಲು ವಿಜೃಂಭಣೆಯಿಂದ ಜಾಧವ್ ಅವರನ್ನು ಸ್ವಾಗತಿಸ ಲಾಗಿತ್ತು. ಇದಾದ ಬಳಿಕ
ಕುಸ್ತಿಯಲ್ಲಿ ಇನ್ನೊಂದು ಪದಕಕ್ಕಾಗಿ ೨೦೦೮ರ ವರೆಗೂ ಕಾಯಬೇಕಾಯಿತು. ಆ ಸಾರಿ ಬೀಜಿಂಗ್ ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಸುಶೀಲ್ ಕುಮಾರ್ ಮತ್ತೆ ಕಂಚಿನ ಪದಕಕ್ಕೆ ಭಾಜನರಾದರು. ನಂತರ ೨೦೧೨ರ ಲಂಡನ್ ಒಲಿಂಪಿಕ್ಸ್ನಲ್ಲಿ ಸುಶೀಲ್ ೬೬ ಕೆ.ಜಿ ಫ್ರೀಸ್ಟೈನಲ್ಲಿ ಬೆಳ್ಳಿ ಪದಕ ತಂದು ಕೊಟ್ಟರು.

ರಿಯೊ ಡಿ ಜನೈರೊದಲ್ಲಿ ೨೦೧೬ ರಲ್ಲಿ ನಡೆದ ಪಂದ್ಯದಲ್ಲಿ, ಸಾಕ್ಷಿ ಮಲಿಕ್, ಮಹಿಳೆಯರ ಫ್ರೀಸ್ಟೈಲ್ ೫೮ ಕೆ.ಜಿ ವಿಭಾಗದಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿ ಕೊಂಡರು. ಸದ್ಯ, ಟೋಕಿಯೋ ಒಲಿಂಪಿಕ್ಸ್ಗೆ ಪುರಷರ ಕುಸ್ತಿ ವಿಭಾಗದಲ್ಲಿ, ಬಜರಂಗ್ ಪುನಿಯಾ, ರವಿಕುಮಾರ್ ದಹಿಯಾ, ದೀಪಕ್ ಪುನಿಯಾ ಪಾಲ್ಗೊಳ್ಳುತ್ತಿದ್ದರೆ, ಮಹಿಳಾ ವಿಭಾಗದಲ್ಲಿ, ವಿನೇಶ ಪೋಗಟ್, ಅನ್ಷು ಮಲಿಕ್, ಸೋನಂ ಮಲಿಕ್, ಸೀಮಾ ಬಿಸ್ಲಾ ಕಾಣಿಸಲಿದ್ದಾರೆ.

ಮನರಂಜನೆ ಮತ್ತು ಕ್ರೀಡಾ ದತ್ತಾಂಶ ಕಂಪನಿಯಾದ ಗ್ರೇಸ್ ನೋಟ್ ಇತ್ತೀಚೆಗೆ ಲೆಕ್ಕ ಹಾಕಿರುವ ಪ್ರಕಾರ, ಭರತ ಈ ಸಾರಿ ೧೭ ಪದಕಗಳನ್ನು ಗೆದ್ದು ಬರುವ ನಿರೀಕ್ಷೆಯಿದೆ. ಹಾಗಾದರೆ, ಈ ಸಾರಿಯ ಟೋಕಿಯೊ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡು ಪದಕಗಳನ್ನು ನಿರೀಕ್ಷಿಸಬಹುದಾದ ಭಾರತದ ಪ್ರಮುಖ ಕ್ರೀಡಾಪಟುಗಳನ್ನು ನೋಡುವುದಾದರೆ, ಶೂಟಿಂಗ್‌ನಲ್ಲಿ ಎಲವೆನಿಲ್ ವಲೆರಿವನ್, ಸೌರಭ್ ಚೌಧರಿ, ಮನು ಭಾಕರ್ ಮತ್ತು ಅಭಿಷೇಕ್ ವರ್ಮ. ಬಿಲ್ಗಾರಿಕೆಯಲ್ಲಿ; ಅತನು ದಾಸ್, ದೀಪಿಕಾ ಕುಮಾರಿ. ವೇಟ್ ಲಿಫ್ಟಿಂಗ್‌ನಲ್ಲಿ; ಮೀರಾಬಾಯಿ ಚಾನು.

ಟ್ರ್ಯಾಕ್ ಆಂಡ್ ಫೀಲ್ಡ; ನೀರಜ್ ಚೋಪ್ರಾ. ಬಾಕ್ಸಿಂಗ್; ಅಮಿತ್ ಪಂಘಾಲ, ಮೇರಿ ಕೋಮ. ಕುಸ್ತಿ; ವಿನೇಶ್ ಪೋಗಟ್ ಮತ್ತು ಬಜ ರಂಗ್ ಪೂನಿಯಾ. ಬ್ಯಾಡ್ಮಿಂಟನ್; ಪಿ.ವಿ.ಸಿಂಧು. ಜೂಡೊ; ಸುಶೀಲಾ ದೇವಿ. ಟೆನಿಸ್; ಸಾನಿಯಾ ಮಿರ್ಜಾ, ಅಂಕಿತಾ ರೈನಾ. ಇನ್ನೊಂದು ವಿಶೇಷವೆಂದರೆ, ಈ ಸಾರಿಯ ಟೋಕಿಯೊ ಒಲಿಂಪಿಕ್ಸ್ನ ಜಿಮ್ನಾಸ್ಟಿಕ್ಸ್ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಭಾರತದಿಂದ ಒಬ್ಬಳೇ ಒಬ್ಬ ಸ್ಪರ್ಧಿ ಭಾಗವಹಿಸುತ್ತಿದ್ದಾಳೆ.

ಅವಳೇ ಪಶ್ಚಿಮ ಬಂಗಾಳದ ಪ್ರಣತಿ ನಾಯ್ಕ. ಜತೆಗೆ, ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ದಿವ್ಯಾಂಶು ಸಿಂಗ್ ಪನ್ವಾರ್ , ಕೇವಲ ೧೮ ವರ್ಷದ
ಕ್ರೀಡಾ ಪಟು! ಕೊನೆಯದಾಗಿ, ಟೋಕಿಯೊ ಒಲಿಂಪಿಕ್ಸ್ ೨೦೨೦ ಪಂದ್ಯಾವಳಿಯಲ್ಲಿ ನಮ್ಮ ಕ್ರೀಡಾಪಟುಗಳು ಅತಿಹೆಚ್ಚು ಪದಕಗಳನ್ನು ಗೆದ್ದು ತರಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಿಬಿಡೋಣ.

Leave a Reply

Your email address will not be published. Required fields are marked *