Tuesday, 9th August 2022

ದೆಹಲಿಯತ್ತ ಪ್ರಯಾಣ ಬೆಳೆಸಿದ ಪ್ರಧಾನಿ ನರೇಂದ್ರ ಮೋದಿ

ಮೈಸೂರು‌: ರಾಜ್ಯಕ್ಕೆ ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಮಂಗಳ ವಾರ ಮೈಸೂರಿನಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳಿದರು.

ಸಾಂಸ್ಕೃತಿನ ನಗರಿ ಮೈಸೂರಿನಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸುವುದು ಪ್ರಧಾನಿ ಮೋದಿ ಭೇಟಿಯ ಮುಖ್ಯ ಉದ್ದೇಶವಾಗಿದ್ದು, ಅದರೊಂದಿಗೆ ಅಭಿವೃದ್ಧಿ ಪಥವನ್ನು ಜೋಡಿಸಿ ಬೆಂಗಳೂರು ಬ್ರಾಂಡ್​ಗೆ ಹೊಸ ಹೊಳಪು ನೀಡಲು ರಾಜ್ಯ ನಾಯಕತ್ವ ಮುಂದಾಗಿದೆ. ಬಹುಸಾವಿರ ಕೋಟಿ ರೂ.ಗಳ ಮೊತ್ತದ ಯೋಜನೆಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆ ಗಳೆಲ್ಲ ಬೆಂಗಳೂರು ಕೇಂದ್ರಿತ ವಾಗಿದೆ.

ಮೈಸೂರು ಅರಮನೆಯಿಂದ ನಿರ್ಗಮಿಸಿದ ಮೋದಿ, ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ‌ ತೆರಳುವಾಗಲೂ ಕೈ ಮುಗಿದರು. ಈ ಮೂಲಕ ಸಾಂಸ್ಕೃತಿಕ ನಗರಿ ಜನತೆಗೆ ಧನ್ಯವಾದ ತಿಳಿಸಿದರು.

ವಿಮಾನ ನಿಲ್ದಾಣಕ್ಕೆ ಮೋದಿ ತೆರಳುತ್ತಿದ್ದ ರಸ್ತೆಯುದ್ದಕ್ಕೂ ಜಮಾವಣೆಯಾಗಿದ್ದ ಮೋದಿ.. ಮೋದಿ.. ಎಂದು ಜೈಕಾರ ಕೂಗುತ್ತಿದ್ದರು. ನಂಜನಗೂಡು ರಸ್ತೆಯ JSS ಕಾಲೇಜು ಬಳಿ ಬಿಜೆಪಿ ಬಾವುಟ, ಮೋದಿ ಭಾವಚಿತ್ರ ಹಿಡಿದು ಸಹಸ್ರಾರು ಜನ ಕಾಯುತ್ತಿದ್ದರು.