Tuesday, 17th May 2022

ಹಣವೊಂದೇ ಶ್ರೀಮಂತಿಕೆಯನ್ನು ಅಳೆಯುವ ಮಾಪನವಲ್ಲ!

ಅಭಿಪ್ರಾಯ

ಗೀತಾ ಅವಧಾನಿ, ನಿವೃತ್ತ ಅಧ್ಯಾಪಕರು

ಪಾರ್ಕ್‌ನಲ್ಲಿ ವಾಕಿಂಗ್ ಮಾಡುತ್ತಿಿದ್ದೆ. ಒಬ್ಬ ಹುಡುಗ ನನ್ನ ಬಳಿ ಬಂದು ‘ಮೇಡಂ ನೀವು ಶ್ರೀಮಂತರಾ?’ ಅಂದ. ಒಂದು ಕ್ಷಣ ಆತನನ್ನೇ ನೋಡಿದೆ. ಸುಮಾರು ಹತ್ತು ವರ್ಷ ವಯಸ್ಸಿಿರಬಹುದು. ಹೌದಪ್ಪ ನಾನು ಶ್ರೀಮಂತಳು ಅಂದೆ. ‘ಮೇಡಂ ನಿಮ್ಮ ಹತ್ತಿಿರ ಎಷ್ಟು ಕೋಟಿ ಹಣ ಇದೆ’ ಅಂದ. ನಾನು ಕಕ್ಕಾಾಬಿಕ್ಕಿಿಯಾದೆ. ‘ಇಲ್ಲಪ್ಪ, ನನ್ನ ಬಳಿ ಒಂದೇ ಒಂದು ಕೋಟಿಯಷ್ಟು ಕೂಡ ಹಣವಿಲ್ಲ’ ಅಂದೆ. ಹೌದಾ, ‘ಹಾಗಾದರೆ ನೀವು ಶ್ರೀಮಂತರು ಹೇಗಾಗುತ್ತೀರಾ’ ಅಂದ.

ನನ್ನ ಹತ್ತಿಿರ ಕೋಟಿ ಕೋಟಿ ಹಣ ಇಲ್ಲದಿರಬಹುದು. ಆದರೆ, ಹಣ ಬಿಟ್ಟು ಹಲವಾರು ವಿಷಯಗಳಲ್ಲಿ ನಾನು ಶ್ರೀಮಂತಳೇ. ನಮ್ಮ ಮನೆಯಲ್ಲಿ ಶಾಂತಿಯಿದೆ. ನೆಮ್ಮದಿಯಿದೆ. ಮನೆಯ ಸದಸ್ಯರೆಲ್ಲರ ಮಧ್ಯೆೆ ತುಂಬು ಹೃದಯದ ಸಹಕಾರವಿದೆ. ಸಾಕಷ್ಟು ಸ್ನೇಹಿತರ ಬಳಗವಿದೆ. ಆರೋಗ್ಯಕರ ಕನಿಷ್ಠ ಜೀವನಕ್ಕೆೆ ಬೇಕಾದ ಎಲ್ಲಾ ಸೌಲಭ್ಯವಿದೆ. ಹಾಗಾಗಿ ನಾನು ಶ್ರೀಮಂತಳೇ ಅಂದೆ. ನಾನು ಹೇಳಿದ್ದು ಅವನಿಗೆ ಅರ್ಥವಾಯಿತೋ ಇಲ್ಲವೋ ನಿಧಾನವಾಗಿ ಅಲ್ಲಿಂದ ಕಾಲುಕಿತ್ತ.

ಹಣ ಪ್ರತಿಯೊಬ್ಬರ ಜೀವನದಲ್ಲಿ ಹಾಸುಹೊಕ್ಕಾಾಗಿದೆ. ಹಣವಿಲ್ಲದಿದ್ದರೆ ಜೀವನವೇ ಇಲ್ಲ ಎನ್ನುವಷ್ಟರ ಮಟ್ಟಿಗೆ! ಅದಕ್ಕೇ ಇರಬೇಕು ಕೆಲವರು ಹೇಳುವುದು ‘ದುಡ್ಡೇ ದೊಡ್ಡಪ್ಪ’ ಎಂದು. ಹಣ ಕಂಡರೆ ಹೆಣವೂ ಬಾಯ್ಬಿಿಡುತ್ತದೆ ಎಂಬುದು ಗಾದೆ. ದಿನನಿತ್ಯದ ಊಟ, ಬಟ್ಟೆೆ ವಸತಿಗೆ ಹಣ ಬೇಕೇ ಬೇಕು. ಅರೋಗ್ಯ ಹದಗೆಟ್ಟರೆ ಹಣಬೇಕು. ಮಕ್ಕಳ ವಿಧ್ಯಾಾಭ್ಯಾಾಸಕ್ಕೆೆ ಹಣ ಬೇಕು. ಚಿಕ್ಕ ಪುಟ್ಟ ಮನರಂಜನೆಗೆ ಹಣ ಬೇಕು. ಆರೋಗ್ಯ ಕ್ಷೇತ್ರ ಎಷ್ಟು ಮುಂದುವರೆದಿದೆಯೆಂದರೆ ಹಣ ಖರ್ಚು ಮಾಡಿದರೆ ಆದಷ್ಟು ದಿವಸ ಸಾವನ್ನು ಕೂಡ ಮುಂದೂಡಬಹುದು. ಹಣವಿಲ್ಲದೇ ಚಿಕಿತ್ಸೆೆ ಕೊಡಿಸಲಾಗದೆ ಅದೆಷ್ಟೋೋ ಮರಣ ಸಂಭವಿಸಿದೆ. ಆದ ಕಾರಣ ಹಣಕ್ಕೆೆ ಇನ್ನಿಿಲ್ಲದ ಪ್ರಾಾಮುಖ್ಯತೆ ಅಥವಾ ಬೇಡಿಕೆ. ಸಂತಸದ ಜೀವನಕ್ಕಂತೂ ಹಣ ಬೇಕೇ ಬೇಕು. ಪ್ರಸ್ತುತ ಸನ್ನಿಿವೇಶದಲ್ಲಿ ‘ಧನಮೂಲಮ್ ಇದಂ ಜಗತ್’ ಎನ್ನುವ ಹಾಗಾಗಿದೆ.

ಹಣದ ಮೇಲಿನ ವ್ಯಾಾಮೋಹದಿಂದ ಹಣದ ಬೆನ್ನಟ್ಟುತ್ತಾಾ ಕುಟುಂಬ ಪರಿವಾರದಿಂದ ಬಹುದೂರ ಸಾಗುತ್ತಲಿದ್ದೇವೆ. ಚಿಕ್ಕ ಮಕ್ಕಳಿಗೆ ಒಳ್ಳೆಯ ಗುಣ ಸನ್ನಡತೆಯ ಪಾಠವನ್ನು ಧಾರೆ ಎರೆಯುತ್ತಿದ್ದೇವೆಯೇ ವಿನಃ ಹಣದ ಪ್ರಾಾಮುಖ್ಯತೆಯ ಮಿತಿಯನ್ನು ತಿಳಿಯಪಡಿಸುವುದರಲ್ಲಿ ವಿಫಲರಾಗುತ್ತಲಿದ್ದೇವೆ. ಮನೆಗೆ ಅತಿಥಿಗಳ ಆಗಮನವಾದಾಗ ಆಮಂತ್ರಿತರ ಅಂತಸ್ತಿಗೆ ತಕ್ಕಂತೆ ಆದರಾತಿಥ್ಯ ನಡೆಯುತ್ತದೆ. ಮನೆಗೆ ಶ್ರೀಮಂತರು ಬಂದಾಗ ಸಿಗುವ ಗೌರವ, ಆದರ ಬಡವರು ಮನೆಗೆ ಬಂದಾಗ ಸಿಗುವುದಿಲ್ಲ. ಮನೆಯ ಹಿರಿಯರ ಮಾತಿನಲ್ಲಿ, ಕೃತಿಯಲ್ಲಿ ಯಾವುದಕ್ಕೂ ಎಣೆಯಿಲ್ಲದ ಪ್ರಾಾಮುಖ್ಯತೆಯನ್ನು ಹಣಕ್ಕೆ ನೀಡುವುದನ್ನು ಮಕ್ಕಳು ನೋಡಿ ಅದೇ ವಾತಾವರಣದಲ್ಲಿ ಬೆಳೆಯುತ್ತಾರೆ.

ಚಿಕ್ಕ ಮಗು ಸಂಗೀತದಲ್ಲೋ, ಆಟೋಟದಲ್ಲೋ, ಚಿತ್ರಕಲೆಯಲ್ಲೋ ಆಸಕ್ತಿ ತೋರಿಸಿದಾಗ ಹೆತ್ತವರೇ ಅದಕ್ಕೆೆ ಅಡ್ಡಗೋಡೆಯಾಗಿ ನಿಲ್ಲುತ್ತಾಾರೆ. ಓದುವ ವಿಷಯದ ಬಗ್ಗೆೆ ಮಾತ್ರ ಗಮನ ನೀಡೆಂದು ನಿಬಂಧನೆ ಹೇರುತ್ತಾಾರೆ. ಅವೆಲ್ಲದರಿಂದ ಹಣ ಸಂಪಾದನೆ ಅಸಾಧ್ಯವೆಂದು ಮಗುವಿನ ತಲೆಗೆ ತುಂಬುತ್ತಾಾರೆ. ಈ ಎಲ್ಲಾ ಸನ್ನಿವೇಶಗಳಿಂದ ಹಣವಿದ್ದರೆ ಮಾತ್ರ ಮನೆಯಲ್ಲಿ, ಸಮಾಜದಲ್ಲಿ ಗೌರವವಿದೆ. ಹಣವಿಲ್ಲದಿದ್ದರೆ ತನಗೆ ಯಾವುದೇ ಬೆಲೆಯಿಲ್ಲ ಎಂಬ ಮನಸ್ಥಿತಿಯನ್ನು ತಮ್ಮಲ್ಲೇ ಸುಪ್ತವಾಗಿ ಬೆಳೆಸಿಕೊಳ್ಳುವ ಮಗು ಹಣ ಸಂಪಾದನೆಯೇ ತನ್ನ ಮುಖ್ಯ ಗುರಿ ಎಂಬ ಧ್ಯೆೆಯವನ್ನಿಟ್ಟುಕೊಂಡು ಅದನ್ನೇ ತನ್ನ ಗುರಿಯಾಗಿರಿಸಿಕೊಳ್ಳುವ ಸಾಧ್ಯತೆಯಿದೆ.

ಕುಟುಂಬದ ಸದಸ್ಯರ, ಸಂಬಂಧಿಕರ, ಸ್ನೇಹಿತರ ಭಾವನಾತ್ಮಕ ಒಡನಾಟಕ್ಕಿಿಂತ ಹಣ ಸಂಪಾದನೆಗೆ ಹೆಚ್ಚು ಆದ್ಯತೆ ನೀಡುತ್ತಿಿದ್ದೇವೆ. ಪರಸ್ಪರರ ನಡುವೆ ಸಂವಹನದ ಕೊರತೆ ಎದ್ದು ಕಾಣುತ್ತಿದೆ. ಕೇವಲ ಹಾಯ್, ಹಲೋಗಷ್ಟೇ ಮಾತುಕತೆ ಸೀಮೀತವಾಗುತ್ತಲಿದೆ. ಹಣಕ್ಕಿಿಂತ ಸ್ನೇಹ ಪ್ರೀತಿ ವಾತ್ಸಲ್ಯ ಸಂಬಂಧ ದೊಡ್ಡದು ಎನ್ನುವುದನ್ನು ನಮ್ಮ ಮನಸ್ಸಿಿನಿಂದ ಅಕ್ಷರಶಃ ಅಳಿಸಿ ಹಾಕಿದ್ದೇವೆ. ಮಕ್ಕಳಿಗೆ, ಒಡಹುಟ್ಟಿದವರಿಗೆ ತಂದೆ ತಾಯಿಯರಿಗೆ ಅವರವರ ಅವಶ್ಯಕತೆಗೆ ತಕ್ಕಂತೆ ಹಣ ಒದಗಿಸಿದರೆ ನಮ್ಮ ಜವಾಬ್ದಾಾರಿ ಮುಗಿಯಿತೆಂಬಂತೆ ವರ್ತಿಸುತ್ತಿದ್ದೇವೆ.

ದಿನದ ಹೆಚ್ಚಿಿನ ಸಮಯ ಹಣ ಸಂಪಾದನೆಗೆ ಮೀಸಲಿಡುತ್ತಿದ್ದೇವೆ. ಮೃಷ್ಟಾನ್ನ ಭೋಜನ ಸವಿಯುವಷ್ಟು ಹಣದ ತಾಕತ್ತು ಇದ್ದರೂ ಚಿಕ್ಕ ಬ್ರೇಕ್ ಫಾಸ್‌ಟ್‌ ತಿನ್ನಲು ಸಮಯವಿಲ್ಲ. ವಿಶ್ರಾಾಂತಿ ಬಯಸಿದ ದೇಹ, ಕಂಗಳಿಗೆ ಮೆತ್ತನೆಯ ಹಾಸಿಗೆ ಇದ್ದರೂ ಕಣ್ತುಂಬ ನಿದ್ದೆ ಬರುತ್ತಿಿಲ್ಲ. ಏಕೆಂದರೆ ನಾಳೆಯ ದುಡಿಮೆಯ ಬಗೆಗಿನ ಚಿಂತೆ ಮನಸ್ಸನ್ನು ಆವರಿಸಿಕೊಂಡಿರುತ್ತದೆ. ಮನೆಯಲ್ಲಿರುವ ಪುಟ್ಟ ಮಕ್ಕಳ, ವಯಸ್ಸಾಾದ ಪೋಷಕರ ಜತೆಗಿನ ಒಡನಾಟವಿರಲಿ, ಭೇಟಿ ಸಹ ಅಪರೂಪವಾಗುತ್ತಿಿದೆ.

ಹಣವೊಂದೇ ಜೀವನದಲ್ಲಿ ಪ್ರಮುಖವಲ್ಲ. ಹಣಕ್ಕಿಿಂತಲೂ ಪ್ರಮುಖವಾದ ಕೆಲವು ಸಂಗತಿಗಳೂ ನಮ್ಮಬಾಳಿನಲ್ಲಿ ಹಾಸು ಹೊಕ್ಕಾಾಗಿವೆಯೆನ್ನುವುದನ್ನೇ ಮರೆತು ಜೀವನ ಸಾಗಿಸುತ್ತಿಿದ್ದೇವೆ. ಹಣ ಎಷ್ಟು ಖರ್ಚು ಮಾಡಿದರೂ ಪಡೆಯಲಾರದಂತಹ ಜೀವನದ ಹಲವಾರು ಮಹತ್ವದ ಸಂಗತಿಗಳನ್ನು ಮನಸ್ಸಿಿನಿಂದ ದೂರ ಮಾಡಿದ್ದೇವೆ. ಒಬ್ಬರಿಂದೊಬ್ಬರಿಗೆ ಕಾಳಜಿ ಸಿಗುತ್ತಿಿಲ್ಲ. ಒಬ್ಬರ ಮೇಲಿನ ಮತ್ತೊೊಬ್ಬರ ಪ್ರೀತಿ ಮರೀಚಿಕೆಯಾಗುತ್ತಲಿದೆ. ಏಕೆಂದರೆ ಎಲ್ಲರೂ ಹಣ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ವಯಸ್ಕ ಮಕ್ಕಳು ಹಣ ಸಂಪಾದನೆಗಾಗಿ ದೇಶ ಬಿಟ್ಟು ಪರದೇಶಕ್ಕೆೆ ಹೋಗುತ್ತಿಿದ್ದಾರೆ. ಅವರನ್ನೇ ನಂಬಿಕೊಂಡಿರುವ ಮನೆಯ ಹಿರಿಯರು ಬೇರೆಯವರ ಕಣ್ಗಾಾವಲಿನಲ್ಲಿ ಇಲ್ಲವೇ ವೃದ್ಧಾಾಶ್ರಮದಲ್ಲಿದ್ದಾರೆ.

ಆಪತ್ಕಾಲಕ್ಕೆೆ ಬೇಕೆಂದು ಮನೆಯಲ್ಲಿ ಸಂಗ್ರಸಿರುವ ಹಣ ಅಳತೆಮೀರಿ ಅಧಿಕವಾದಾಗ ಆಪತ್ತಿಿಗೆ ಸಿಲುಕಿದ ಸನ್ನಿಿವೇಶಗಳು ಸಾಕಷ್ಟಿಿವೆ. ಹಣಕ್ಕಾಾಗಿ ಚಿಕ್ಕ ಮಕ್ಕಳ, ವಯಸ್ಕರ ಅಪಹರಣ ಪ್ರಕರಣಗಳು. ಒಂಟಿ ವೃದ್ಧರ ಕೊಲೆ ಇಂತಹ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಹಣ ಮನುಷ್ಯನಿಗೆ ಉತ್ತಮ ಕಾರ್ಯಗಳಿಗೆ ಉಪಯೋಗವಾಗುವುದರ ಜತೆಗೆ ಮನುಷ್ಯರನ್ನು ಅಪರಾಧವೆಸಗುವತ್ತ ಕೊಂಡೊಯ್ಯುತ್ತಲಿದೆ.

ಎಷ್ಟು ಸಂಪಾದಿಸಿದರೂ ಸಾಕಾಗದೆಂಬ ಮನೋಭಾವದಿಂದ ಮನೆಯ ಸದಸ್ಯರ ನಡುವಿನ ಸಂಬಂಧ ಶಿಥಿಲಗೊಳ್ಳುತ್ತಲಿದೆ. ಇಬ್ಬರೂ ದುಡಿಯಲೇಬೇಕೆಂಬ ಪ್ರತಿಷ್ಠೆೆ ಕುಟುಂಬದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಲಿದೆ. ಅಪ್ಪ ಅಮ್ಮಂದಿರು ತಮ್ಮ ಮಕ್ಕಳಿಗೆ ಹಣ ಗಳಿಕೆಯ ನ್ಯಾಾಯಯುತ ಮಾರ್ಗವನ್ನು ಹೇಳಿ ಕೊಡುವುದರ ಜತೆಗೆ ಸಾಮಾಜಿಕ ಮೌಲ್ಯಗಳನ್ನು ಬಾಲ್ಯದಿಂದಲೇ ತಲೆಗೆ ತುಂಬುವ ಕೆಲಸ ಮಾಡಬೇಕು.

ಸ್ನೇಹಿತೆಯೊಬ್ಬಳ ಅರೋಗ್ಯ ವಿಚಾರಿಸಲು ಅವರ ಮನೆಗೆ ಹೋಗಿದ್ದೆ. ಶಿಷ್ಟಾಾಚಾರದಂತೆ ಹಣ್ಣು, ಸಿಹಿತಿನಿಸುಗಳನ್ನು ಕೊಂಡೊಯ್ದಿಿದ್ದೆ. ಕೈಗೆ ಕೊಟ್ಟ ಹಣ್ಣುಗಳನ್ನು ಅಲ್ಲೇ ಟೇಬಲ್ ಮೇಲೆ ಇಟ್ಟಳು. ನಾವಿಬ್ಬರು ಮಾತನಾಡುತ್ತ ಕುಳಿತಿದ್ದೆವು. ಮನೆಯ ಕರೆಗಂಟೆಯ ಸದ್ದಾಯಿತು. ನಮ್ಮನೆ ಕೆಲಸದವಳಿರಬೇಕೆಂದು ಹೇಳುತ್ತಾಾ ದಡದಡನೆ ರೂಮಿಗೆ ಹೋಗಿ ಒಂದು ದುಪ್ಪಟ್ಟಾಾ ತಂದು ಟೇಬಲ್ ಮೇಲೆ ಇತ್ತ ಹಣ್ಣು, ಸಿಹಿ ತಿನಿಸುಗಳ ಮೇಲೆ ಮುಚ್ಚಿಿಟ್ಟು ಬಾಗಿಲು ತೆಗೆದಳು. ಅವಳ ಊಹೆ ನಿಜವಾಗಿತ್ತು. ಕೆಲಸದವಳು ಬಾಗಿಲಲ್ಲಿ ನಿಂತಿದ್ದಳು. ಕೈಯಲ್ಲಿದ್ದ ಪ್ಲಾಾಸ್ಟಿಿಕ್ ಕವರಿನಲ್ಲಿ ನಾಲ್ಕೈದು ಮಾವಿನ ಹಣ್ಣುಗಳಿದ್ದವು. ಅಕ್ಕ ನನಗೆ ಬೇರೆ ಕೆಲಸದ ಮನೆಯಲ್ಲಿ ಈ ಹಣ್ಣುಗಳನ್ನು ಕೊಟ್ಟರು. ತೆಗೆದುಕೊಳ್ಳಿಿ ಒಂದೆರಡು ಹಣ್ಣುಗಳನ್ನು ನಿಮ್ಮ ಮಗುವಿಗೆ ಕೊಡಿರಿ ಅಂದಳು. ನಾನು ಆ ಸನ್ನಿಿವೇಶವನ್ನು ಬಿಟ್ಟ ಕಣ್ಣುಗಳಿಂದ ನೋಡುತ್ತಾಾ ಕುಳಿತೆ. ಮನದಲ್ಲಿ ತಾಕಲಾಟ ಶುರುವಾಯಿತು. ಕೆಲಸದವಳಿಗೆ ಕೊಡಬೇಕಾಗಬಹುದೆಂದು ಹಣ್ಣುಗಳನ್ನು ಮುಚ್ಚಿಿಟ್ಟ, ಇನ್ನೊೊಂದು ತಲೆಮಾರು ಕುಳಿತು ತಿಂದರೂ ಕರಗದಷ್ಟು ಶ್ರೀಮಂತಿಕೆಯಿರುವ ನನ್ನ ಸ್ನೇಹಿತೆ ಸಾಹುಕಾರ್ತಿಯೋ ಅಥವಾ ತನಗೆ ಯಾರೋ ಕೊಟ್ಟಿಿರುವ ಹಣ್ಣುಗಳನ್ನು ನೀಡುತ್ತಿಿರುವ ಕೆಲಸದವಳೋ? ಒಬ್ಬಳು ಹಣದಲ್ಲಿ ಶ್ರೀಮಂತಳು. ಇನ್ನೊೊಬ್ಬಳು ಗುಣದಲ್ಲಿ ಶ್ರೀಮಂತಳು. ಅಷ್ಟೇ ವ್ಯತ್ಯಾಾಸ.

ಎಲ್ಲೋ ಓದಿದ ನೆನಪು. ಒಬ್ಬ ಸಾಹುಕಾರರ ಮನೆಯಲ್ಲಿ ಮಗನ ಮದುವೆ ನಿಶ್ಚಯವಾಗಿತ್ತು. ಮನೆಯಾಕೆ ಒಂದು ಬಟ್ಟೆೆ ಅಂಗಡಿಗೆ ಹೋದಳು. ಮಗನ ಮದುವೆಯಿದೆ. ಮನೆ ಕೆಲಸದವಳಿಗೆ ಕೊಡಲು ಒಂದು ಕಡಿಮೆ ದರದ ಸೀರೆ ತೋರಿಸಿ ಅಂದಳು. ಅದೇ ಸಮಯಕ್ಕೆೆ ಆ ಮನೆ ಕೆಲಸದವಳು ಅದೇ ಬಟ್ಟೆೆ ಅಂಗಡಿಗೆ ಬಂದಳು. ನಾನು ಕೆಲಸಕ್ಕೆೆ ಹೋಗುವ ಮನೆಯ ಯಜಮಾನರ ಮಗನ ಮದುವೆಯಿದೆ. ಮದುವೆಗೆ ಉಡುಗೊರೆ ಕೊಡಲು ಒಂದು ಚೆನ್ನಾಾಗಿರುವ ಸೀರೆ ತೋರಿಸಿ ಎಂದಳು. ಇದರಲ್ಲಿ ಬಡವರಾರು? ಶ್ರೀಮಂತರಾರು?

ಹಣಬಿಟ್ಟು ಇನ್ನೂ ಹಲವು ಮೂಲಗಳಿಂದ ನಾವು ಸಂತಸವನ್ನು ಪಡೆಯಬಹುದು. ಹಣದಿಂದ ಕೊಂಡುಕೊಳ್ಳಲಾಗದ ಸಂಗತಿಗಳು ಸಾಕಷ್ಟಿಿವೆ. ಸಮಯ, ಸಂತೋಷ, ನೆಮ್ಮದಿ, ಪ್ರೀತಿ, ಒಳ್ಳೆೆಯ ನಡತೆ, ಸ್ವಭಾವ ಅರೋಗ್ಯ, ಗೌರವ, ಉತ್ತಮ ನೀತಿ, ನಂಬಿಕೆ, ತಾಳ್ಮೆೆ, ಸಾಮಾನ್ಯ ಜ್ಞಾನ, ಘನತೆ ಇತ್ಯಾಾದಿ. ಮನುಷ್ಯತ್ವ ಇಲ್ಲವೆಂದರೆ ಹಣ ಆಸ್ತಿಿ ಅಂತಸ್ತು ಎಲ್ಲ ತೃಣಕ್ಕೆೆ ಸಮಾನ. ಯಾರು ಹಣದಿಂದ ಎಷ್ಟೇ ಶ್ರೀಮಂತರಾಗಿದ್ದರೂ ಕಳೆದು ಹೋದ ಕ್ಷಣಗಳನ್ನು, ಕಳೆದುಕೊಂಡ ಸ್ನೇಹಿತರನ್ನು, ದೂರ ಮಾಡಿಕೊಂಡ ಸಂಬಂಧಗಳನ್ನು ಪುನಃ ಪಡೆಯುವಷ್ಟು ಶ್ರೀಮಂತರಲ್ಲ!

ಹಣಕ್ಕಿಿಂತ ಸ್ನೇಹ ಪ್ರೀತಿ ವಾತ್ಸಲ್ಯ ಸಂಬಂಧಗಳೇ ದೊಡ್ಡದೆಂದು ಅರಿತು ಒಬ್ಬರಿಗೊಬ್ಬರು ಸಹಾಯಕರಾಗಿ ಪ್ರೀತಿ ವಿಶ್ವಾಾಸಗಳನ್ನು ಮೈಗೂಡಿಸಿಕೊಂಡು ಹಣ ಹಾಗೂ ಇತರ ಮಾನವೀಯ ಮೌಲ್ಯಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡದ್ದೇ ಆದರೆ, ಆನಂದಮಯ ಹಾಗೂ ಸಂತೃಪ್ತ ಜೀವನ ನಮ್ಮದಾಗುವುದರಲ್ಲಿ ಎರಡು ಮಾತಿಲ್ಲ. ಹಣದ ಪ್ರಾಾಮುಖ್ಯತೆಯ ಇತಿಮಿತಿಯ ಪರಿಧಿಯನ್ನರಿತು ಮಕ್ಕಳು ಬೆಳೆಯುವಂತಾದರೆ ಕುರುಡು ಕಾಂಚಾಣದ ವ್ಯಾಾಮೋಹದಿಂದ ಹಣದ ಬೆನ್ನಟ್ಟಿಿ ಭವಿಷ್ಯದ ಆನಂದ ಕಳೆದುಕೊಳ್ಳುವ ಪ್ರಮೇಯದಿಂದ ಹೊರಬರುವಂತಾಗಬಹುದೇನೋ?

ಹಣವೊಂದೇ ಜೀವನದಲ್ಲಿ ಪ್ರಮುಖವಲ್ಲ, ಹಣಕ್ಕಿಿಂತಲೂ ಪ್ರಮುಖವಾದ ಕೆಲವು ಸಂಗತಿಗಳೂ ನಮ್ಮ ಬಾಳಿನಲ್ಲಿ ಹಾಸುಹೊಕ್ಕಾಾಗಿವೆಯೆನ್ನುವುದನ್ನೇ ಮರೆತಿದ್ದೇವೆ. ಹಣದಿಂದ ಪಡೆಯಲಾರದಂತಹ ಮಹತ್ವದ ಸಂಗತಿಗಳನ್ನು ದೂರ ಮಾಡಿದ್ದೇವೆ.