Wednesday, 1st December 2021

ಹಣವೆಂದರೆ ಒಂದು ಜವಾಬ್ದಾರಿ ಎಂದ ವಾಣಿಜ್ಯ ದ್ರಷ್ಟಾರ

ಜಯಶ್ರೀ ಕಾಲ್ಕುಂದ್ರಿ, 
ವಿಶ್ವದ ಅತಿ ದೊಡ್ಡ ಇ-ಕಾಮರ್ಸ್ ಸಂಸ್ಥೆಯಾದ ಅಲಿಬಾಬಾ ಗ್ರೂಪ್ ಹೋಲ್ಡಿಿಂಗ್‌ನ ಸಂಸ್ಥಾಾಪಕ ಹಾಗೂ ಕಾರ್ಯನಿರ್ವಾಹಕರಾದ ಜ್ಯಾಾಕ್ ಮಾ ತಮ್ಮ ಪೂರ್ವ ನಿರ್ಧಾರಿತ ಯೋಜನೆಯಂತೆ, ಅಧ್ಯಕ್ಷ ಸ್ಥಾಾನದಿಂದ ಮೊನ್ನೆೆ ಕೆಳಗಿಳಿದಿದ್ದಾಾರೆ. ಅಲಿಬಾಬಾ ಕಂಪನಿ, ಕೇವಲ ವಾಣಿಜ್ಯೋೋದ್ಯಮವಲ್ಲದೆ, ಆನ್‌ಲೈನ್ ಪಾವತಿ, ಬ್ಯಾಾಂಕಿಂಗ್, ಮನರಂಜನೆ, ಕ್ಲೌೌಡ್ ಕಂಪ್ಯೂೂಟಿಂಗ್ ಮುಂತಾದ ವ್ಯವಹಾರಗಳನ್ನು ನಡೆಸುತ್ತದೆ. ನಡೆಯಲು ಆರಂಭಿಸುವಾಗ ಮಗು, ಹಲವು ಬಾರಿ ಎಡವಿ ಬಿದ್ದು ನಡಿಗೆಯನ್ನು ಕಲಿಯುವಂತೆ, ಉದ್ಯಮಗಳಲ್ಲಿಯೂ ಸಹ ವೈಫಲ್ಯ ಕಾಣಿಸಿಕೊಂಡರೂ ಧೃತಿಗೆಡದೆ ಪ್ರಯತ್ನಶೀಲರಾದರೆ ಮಾತ್ರ ಯಶಸ್ಸನ್ನು ಕ್ಯೆೆಗೆಟುಕಿಸಿಕೊಳ್ಳಲು ಸಾಧ್ಯ ಎಂಬುದಕ್ಕೆೆ ಜ್ಯಾಾಕ್‌ಮಾ ಉತ್ತಮ ನಿದರ್ಶನ. ನಿವೃತ್ತಿಿ ಪಡೆದರೂ, ಅಲಿಬಾಬಾ ಕಂಪನಿಯ ನಿರ್ದೇಶಕರ ಮಂಡಳಿಗೆ ನಾಮನಿರ್ದೇಶನ ಮಾಡುವ ಹಕ್ಕಿಿನ ಗುಂಪಿನ ಸದಸ್ಯರಾಗಿ ಅವರು ಮುಂದುವರಿಯುವರು ಎನ್ನಲಾಗಿದೆ.

ಅಮೆರಿಕ ಮತ್ತು ಚೀನಾಗಳ ಮಧ್ಯೆೆ ನಡೆಯುತ್ತಿಿರುವ ವಾಣಿಜ್ಯ ಸಮರದ ಹಿನ್ನೆೆಲೆಯಲ್ಲಿ, ಜ್ಯಾಾಕ್ ಮಾ ನಿವೃತ್ತಿಿ ಘೋಷಿಸಿರುವದು ಸಂಚಲನವೊಂದನ್ನು ಹುಟ್ಟು ಹಾಕಿರುವದು ಮಾತ್ರವಲ್ಲ, ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿಿದೆ. ಜ್ಯಾಾಕ್ ಮಾ ಅವರ ಉತ್ತರಾಧಿಕಾರಿಯಾಗಿ ಡೇನಿಯಲ್ ಜಂಗ್, ಅಲಿಬಾಬಾ ಕಂಪನಿಯ ಅಧ್ಯಕ್ಷ ಸ್ಥಾಾನವನ್ನು ವಹಿಸಿಕೊಳ್ಳಲಿದ್ದಾಾರೆ.

ಅರೇಬಿಯಾದ ಜಾನಪದ ಕಥಾನಾಯಕನ ಹೆಸರನ್ನೇ ತನ್ನ ಸಂಸ್ಥೆೆಗೆ ಇರಿಸಿದ ಚೀನಾ ದೇಶದ ಆನ್‌ಲೈನ್ ವಹಿವಾಟು ತಾಣದ ಮಾಂತ್ರಿಿಕ, ಜ್ಯಾಾಕ್ ಮಾ ಸಿರಿ-ಸಂಪತ್ತಿಿನ ದೊರೆ. ಅದರಲ್ಲೂ ಸೋಲು, ನಿರಾಕರಣೆ, ವ್ಯೆೆಫಲ್ಯ, ತಿರಸ್ಕಾಾರಗಳನ್ನೇ ಸೋಪಾನಗಳಾಗಿಸಿಕೊಂಡು, ಸತತ ಪರಿಶ್ರಮದಿಂದ ಯಶಸ್ಸನ್ನು ವಶಮಾಡಿಕೊಂಡ ಅವರ ವೃತ್ತಾಾಂತ, ‘ಅರೇಬಿಯನ್ ನೈಟ್‌ಸ್‌’ ಕತೆಗಳಷ್ಟೇ ರೋಚಕವಾದದ್ದು. ಇಡೀ ಜಗತ್ತಿಿನ ಯುವಜನಾಂಗ ಕಣ್ಣರಳಿಸಿ ನೋಡುವಂತಹ, ಕೇವಲ ಒಂದೂವರೆ ದಶಕದಲ್ಲಿ, ಅಮೆರಿಕದಲ್ಲಿ ಅತಿ ದೊಡ್ಡ ಪ್ರಾಾಥಮಿಕ ಷೇರು ಬಿಡುಗಡೆ ಮಾಡಿದ ಆನ್‌ಲೈನ್ ಕಂಪನಿ ‘ಅಲಿಬಾಬಾ ಡಾಟ್ ಕಾಮ್’ನ ಒಡೆಯ ಮಾತ್ರವಲ್ಲ, ಹಣ ಗಳಿಸುವ ಯಂತ್ರವೆನಿಸಿದ ಜ್ಯಾಾಕ್ ಮಾ ನಡೆದು ಬಂದ ಹಾದಿ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ.

ಚೀನಾ ದೇಶದ ಜಿಜಿಯಾಂಗ್ ಪ್ರಾಾಂತ್ಯದ ಹಂಗ್‌ಜುಯೊವುನಲ್ಲಿ 1964ರಲ್ಲಿ ಜನಿಸಿದ ಜ್ಯಾಾಕ್ ಮಾ ಅವರ ನಿಜ ನಾಮಧೇಯ ಮಾ ಯುನ್. ಆತನ ತಾತ ವಿರೋಧ ಪಕ್ಷವಾದ ನ್ಯಾಾಷನಲ್ ಪಕ್ಷದ ಸದಸ್ಯರಾಗಿದ್ದರಿಂದ ಸರಕಾರದಿಂದ ಕಿರುಕುಳ ಅನುಭವಿಸುವಂತಾಗಿತ್ತು. ಮಾ ಯುನ್‌ನ ಸ್ಕೂಲ್ ಯಾತ್ರೆೆಯೂ ಸೋಲಿನಿಂದಲೇ ಆರಂಭವಾಯಿತು. ಪ್ರಾಾಥಮಿಕ ಶಾಲಾ ಪರೀಕ್ಷೆಗಳಲ್ಲಿ ಎರಡು ಬಾರಿ ಅನುತ್ತೀರ್ಣನಾದರೆ, ಮಾಧ್ಯಮಿಕ ಶಾಲೆಯಲ್ಲಿ ಮೂರು ಬಾರಿ ಪಾಸಾಗದೆ ಉಳಿದು, ಸೋಲಿನ ಕಹಿ ಅನುಭವಿಸುವಂತಾಗಿತ್ತು. ಮುಂದೆ, ಕಾಲೇಜಿನ ಪ್ರವೇಶ ಪರೀಕ್ಷೆಯಲ್ಲೂ ಎರಡು ಬಾರಿ ಸೋಲಿನ ಸಿಲುಕಿ, ಕಷ್ಟಪಟ್ಟು ಪದವಿ ಮುಗಿಸಿದಾಗ, ಹೆಬ್ಬಂಡೆಯೊಂದನ್ನು ಜರುಗಿಸಿದ ಅನುಭವವಾಗಿತ್ತು.

ಮುಂದೆಯೂ ನಿರಾಳತೆಯನ್ನನುಭವಿಸಲು ಸಾಧ್ಯವಿಲ್ಲದಂತೆ, ಉದ್ಯೋೋಗಕ್ಕಾಾಗಿ ಸಂದರ್ಶನಕ್ಕೆೆಂದು ಹಾಜರಾದೆಡೆಯೆಲ್ಲಾಾ ದುರದೃಷ್ಟ ಕಾದು ಕುಳಿತಿರುತ್ತಿಿತ್ತು. ಉದ್ಯೋೋಗಕ್ಕಾಾಗಿ ಸುಮಾರು 30 ಇಲಾಖೆಗಳಲ್ಲಿ ಅರ್ಜಿ ಸಲ್ಲಿಸಿದರೆ, ಒಂದರಲ್ಲಿಯೂ ‘ನೌಕರಿ ಭಾಗ್ಯ’ ದೊರಕಲಿಲ್ಲ. ಒಂದು ಸಾರಿಯಂತೂ, ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಿದಾಗ ಜ್ಯಾಾಕ್ ಮಾ ಒಬ್ಬರನ್ನುಳಿದು, ಬೇರೆ ಎಲ್ಲ ಅಭ್ಯರ್ಥಿಗಳಿಗೂ ಉದ್ಯೋೋಗ ದೊರಕಿತು. ಕೆಎಫ್‌ಸಿ ವ್ಯವಸ್ಥಾಾಪಕರ ಹುದ್ದೆೆಗೆ, ಅರ್ಜಿ ಸಲ್ಲಿಸಿದಾಗ ಅದು ಪುನರಾವರ್ತಯೆಯಾಯಿತು.

24 ಆಕಾಂಕ್ಷಿಿಗಳಲ್ಲಿ, ಇವರೊಬ್ಬರನ್ನುಳಿದು ಮಿಕ್ಕವರಿಗೆಲ್ಲಾಾ ಉದ್ಯೋೋಗ ದೊರಕಿತು. ಹಾರ್ವರ್ಡ್ ವಿಶ್ವವಿದ್ಯಾಾಲಯಕ್ಕೆೆ ಹತ್ತು ಬಾರಿ ಅರ್ಜಿ ಗುಜರಾಯಿಸಿದರೂ ಪ್ರವೇಶ ಸಿಗಲಿಲ್ಲ. ‘ಸೋಲಿನ ಸರದಾರ ಆಗಿಬಿಟ್ಟ’ ಜ್ಯಾಾಕ್ ಮಾರ ನಿರ್ಧಾರ ಅಂದೇ ಗಟ್ಟಿಿಯಾಯಿತು; ಪ್ರತಿಷ್ಠಿಿತ ಹಾರ್ವರ್ಡ್ ವಿಶ್ವವಿದ್ಯಾಾಲಯದ ವಿದ್ಯಾಾರ್ಥಿಗಳಿಗೆ ಪಾಠ ಹೇಳುವ ಎತ್ತರಕ್ಕೆೆ ನಾನು ಬೆಳೆಯಬೇಕು ಎಂದು ಸಂಕಲ್ಪ ಮಾಡಿದರು. ಸ್ಥಳೀಯ ವಿಶ್ವವಿದ್ಯಾಾಲಯದಲ್ಲಿ ಉಪನ್ಯಾಾಸಕರಾಗಿ ಕೆಲ ಕಾಲ ಕಾರ್ಯ ನಿರ್ವಹಿಸಿ, ಚ್ಯೂಂಗ್ ಕಾಂಗ್ ವಿಶ್ವವಿದ್ಯಾಾಲಯದಿಂದ ಎಂಬಿಎ ಪದವಿ ಪಡೆದರು. ಅವರ ಕ್ಷಿಿತಿಜ ಆಗ ವಿಸ್ತಾಾರಗೊಂಡು, ದೊಡ್ಡದಾಗಿ ಯೋಚಿಸಬೇಕೆಂಬ ಯೋಚನೆಗಳು ರೂಪುಗೊಳ್ಳಲಾರಂಬಿಸಿದವು.

ಏಕೋ ತಿಳಿಯದು, ಚಿಕ್ಕ ವಯಸ್ಸಿಿನಿಂದಲೇ ಜ್ಯಾಾಕ್ ಮಾಗೆ ಇಂಗ್ಲಿಿಷ್ ಕಲಿಯಬೇಕೆಂಬ ಹಂಬಲ. ಅದನ್ನು ಈಡೇರಿಸಿಕೊಳ್ಳುವ ಪ್ರಯತ್ನದಲ್ಲಿ ನಿತ್ಯವೂ ಬೆಳಗಾಗುತ್ತಿಿದ್ದಂತೆಯೇ ಬೈಕ್ ಏರಿ, ವಿದೇಶಿ ಪ್ರವಾಸಿಗರು ಉಳಿದುಕೊಳ್ಳುತ್ತಿಿದ್ದ ಹೋಟೆಲ್‌ಗಳಿಗೆ ತೆರಳಿ, ಹಣ ಪಡೆಯದೆ ಅವರಿಗೆ ನಗರ ಪ್ರಕ್ಷಿಣೆ ಮಾಡಿಸುತ್ತಿಿದ್ದರು. ಸುಮಾರು 9 ವರ್ಷಗಳವರೆಗೆ ಅವರೊಡನೆ ಇಂಗ್ಲಿಿಷ್‌ನಲ್ಲಿಯೇ ವ್ಯವಹರಿಸಿ, ಭಾಷೆಯ ಮೇಲೆ ಪ್ರಭುತ್ವ ಸಾಧಿಸಿದ್ದಾಾಯಿತು. ಅವರ ವಿದೇಶಿ ಸ್ನೇಹಿತೆಯೊಬ್ಬಳು, ಉಚ್ಚರಿಸಲು ಸುಲಭವೆಂದು ಆತನನ್ನು ಸಂಭೋದಿಸುತ್ತಿಿದ್ದ ಜ್ಯಾಾಕ್ ಎಂಬ ಉಪನಾಮವೇ ಮಾ ಯೂನ್ ಅವರ ನಿಜನಾಮವಾಯಿತು.

ಜ್ಯಾಾಕ್ ಮಾ 1995ರಲ್ಲಿ ಮೊಟ್ಟಮೊದಲ ಬಾರಿಗೆ ಅಮೆರಿಕದ ನೆಲದ ಮೇಲೆ ಕಾಲಿರಿಸಿದಾಗ ಇಂಟರ್‌ನೆಟ್ ಎಂಬ ವಿಸ್ಮಯ ಲೋಕದ ಪರಿಚಯವಾಯಿತು. ಅಂತರ್ಜಾಲದ ವ್ಯಾಾಪಕ ಮಾಹಿತಿ ವ್ಯವಸ್ಥೆೆಯ ಚೀನಾದ ಪ್ರತಿನಿಧಿತ್ವ ಶೂನ್ಯವಾಗಿರುವದನ್ನು ಕಂಡು, ಚೀನಾ ನಿರ್ಮಿತ ಉತ್ಪನ್ನಗಳನ್ನು ಜಗತ್ತಿಿಗೆ ಪರಿಚಯಿಸುವ ಯೋಚನೆ ಅವರಿಗೆ ಬಂತು. ತಮ್ಮ ಅಮೆರಿಕದ ಸ್ನೇಹಿತರ ಜೊತೆಗೂಡಿ, ಚೀನೀ ಕಂಪನಿಗಳಿಗೆ, ವೆಬ್‌ಸೈಟ್‌ಗಳನ್ನು ಮಾಡಿಕೊಡಲು ಅವರು ಆರಂಭಿಸಿದರು. 1995ರಲ್ಲಿ ‘ಚೀನಾ ಯೆಲ್ಲೋೋ ಪೇಜಸ್’ ಸ್ಥಾಾಪಿಸಿ, ಚೀನಾ ನಿರ್ಮಿತ ಉತ್ಪನ್ನಗಳನ್ನು ಜಗತ್ತಿಿಗೆ ಪರಿಚಯಿಸಿದ ದಿನವೇ ಜಗತ್ತಿಿನಾದ್ಯಂತ ಸಹಭಾಗಿತ್ವಕ್ಕಾಾಗಿ ಕೋರಿಕೆಗಳು ಬರಲಾರಂಭಿಸಿದವು. ಅದೀಗ ಸಂಪರ್ಕಜಾಲದ ಮಹತ್ವ ಎಂದು ಅರಿತುಕೊಂಡರು.

ಆನಂತರ, ಚೀನಾದ ವಿದೇಶಾಂಗ ವ್ಯಾಾಪಾರ ಇಲಾಖೆಯಲ್ಲಿ ವಾಣಿಜ್ಯ ಕೇಂದ್ರದ ಮುಖ್ಯಸ್ಥರಾಗಿ ಕೆಲ ಕಾಲ ಜ್ಯಾಾಕ್ ಕಾರ್ಯ ನಿರ್ವಹಿಸಿದರು. ‘ಗೋಲ್‌ಡ್‌ ಮನ್ ಸಾಶ್, ಯಾಹೂ’ ಮುಂತಾದ ಹಲವಾರು ಐಟಿ ದಿಗ್ಗಜರೊಡನೆ ಸಂಪರ್ಕವೇರ್ಪಟ್ಟು 1999ರಲ್ಲಿ, ಸ್ವಂತ ಒಡೆತನದ ಅಲಿಬಾಬಾ ಕಂಪನಿಯ ಉದಯವಾಯಿತು. ಅಲಿಬಾಬಾ ಸಂಸ್ಥೆೆಯಿಂದ ಮೊಟ್ಟಮೊದಲಿಗೆ ರೂಪಿತಗೊಂಡ ಕಮಿಶನ್ ರಹಿತ ಆನ್‌ಲೈನ್ ವಹಿವಾಟು ಕಂಪನಿ, ‘ತಾವ್‌ಬಾವ್ ಡಾಟ್ ಕಾಮ್’ ಆರಂಭದಲ್ಲಿ ಮುಗ್ಗರಿಸಿತು. ಆದರೆ ಜ್ಯಾಾಕ್ ಮಾ ಅವರಿಗೆ ಸೋಲೇನು ಹೊಸದೇ? ಹಣದ ಮುಗ್ಗಟ್ಟಿಿನಿಂದ ತತ್ತರಿಸಿದರೂ ಸೋಲೊಪ್ಪಿಿಕೊಳ್ಳದೆ, ಮಿಕ್ಕ ಕಂಪನಿಗಳಿಗಿಂತ ಕಡಿಮೆ ಶುಲ್ಕ ವಿಧಿಸಿ, ವಹಿವಾಟನ್ನು ಮರು ಪ್ರಾಾರಂಭಿಸಿ, ಐದು ವರ್ಷಗಳಲ್ಲಿ ದಾಖಲೆ ವಹಿವಾಟು ನಡೆಸಿದರು. ಈ ಚತುರ ನಡೆಯಿಂದ ಇಂದಿಗೂ ಮಾರಾಟಗಾರರ ಹಾಗೂ ಗ್ರಾಾಹಕರ ಮಧ್ಯೆೆ ಶುಲ್ಕಸಹಿತ ಆನ್‌ಲೈನ್ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುತ್ತಾಾ ‘ಅಲಿಬಾಬಾ’ತನ್ನ ಜಾಲವನ್ನು ಅಮೆರಿಕ ಹಾಗೂ ಯುರೋಪ್ ದೇಶಗಳಲ್ಲಿಯೂ ವಿಸ್ತರಿಸುತ್ತಿಿದೆ.

ಭಾರಿ ಉದ್ದಿಮೆದಾರರು ಹಾಗೂ ಚಿಕ್ಕಪುಟ್ಟ ಉದ್ಯಮಿಗಳೊಂದಿಗೆ ಸಂಪರ್ಕ ಬೆಸೆಯುವದರೊಂದಿಗೆ, ಅಮೆರಿಕನ್ ಮೂಲದ ನವ ಉದ್ಯಮಗಳಲ್ಲಿ ಸುಮಾರು ಶತಕೋಟಿ ಡಾಲರ್‌ಗಳಷ್ಟು ಹಣವನ್ನು ಹೂಡಿಕೆ ಮಾಡಿದೆ.

ಉದ್ದಿಮೆಯಿಂದ ಉದ್ದಿಮೆಗೆ ಜಿಗಿಯುತ್ತಾಾ, ತಾಯ್ನಾಾಡಿನಲ್ಲಿ ಭದ್ರವಾಗಿ ಬೇರೂರಿದ ಜ್ಯಾಾಕ್ ಮಾ ಅವರಿಗೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಅಲಿಬಾಬಾ ಡಾಟ್ ಕಾಮ್, ಸುಮಾರು ಒಂಬತ್ತು ಅಧೀನ ಸಂಸ್ಥೆೆಗಳನ್ನು ಸ್ಥಾಾಪಿಸಿ ಪ್ರಸ್ತುತ ವಹಿವಾಟು ನಡೆಸುತ್ತಿಿದೆ. ತಂತ್ರಜ್ಞಾಾನ ಆಧರಿತ ಚಿಕ್ಕ ಚಿಕ್ಕ ಸಂಸ್ಥೆೆಗಳನ್ನು ತನ್ನ ತೆಕ್ಕೆೆಗೆ ತೆಗೆದುಕೊಂಡು ಭರದಿಂದ ಮುಂದೆ ಸಾಗುತ್ತಿಿದೆ. ಆನ್‌ಲೈನ್ ಮೂಲಕ ಜಗತ್ತಿಿನ ನಾನಾ ಪ್ರದೇಶಗಳಿಂದ ತಮಗಿಷ್ಟವಾಗುವ ಉತ್ಪನ್ನಗಳನ್ನು ಕೊಳ್ಳುವ ಹಾಗೂ ಮಾರುಕಟ್ಟೆೆ ಕಂಡುಕೊಳ್ಳುವ ಸಾಧ್ಯತೆಗಳ ಬಗ್ಗೆೆ ಜನರು ಇಂದು ಯೋಚಿಸುತ್ತಿಿರುವದನ್ನು ಜ್ಯಾಾಕ್ ಮಾ ದಶಕದ ಹಿಂದೆಯೇ ಅಂದಾಜು ಮಾಡಿರುವದೇ ಅವರ ಯಶಸ್ಸಿಿಗೆ ಕಾರಣವೆಂಬುದು ನಿರ್ವಿವಾದ. ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಜ್ಯಾಾಂಗ್ ಯಿಂಗ್‌ರನ್ನು ವಿವಾಹವಾಗಿದ್ದಾಾರೆ. ದಂಪತಿಗೆ ಒಬ್ಬ ಪುತ್ರಿಿ, ಒಬ್ಬ ಪುತ್ರ ಇದ್ದಾಾರೆ.

ಇಂದಿನ ದಿನಗಳಲ್ಲಿ ಅಲಿಬಾಬಾ ಕಂಪನಿಯ ವಹಿವಾಟು ಸುಮಾರು 460 ಶತಕೋಟಿ ಅಮೆರಿಕನ್ ಡಾಲರ್‌ನಷ್ಟಿಿದೆ. ಒಂದು ಲಕ್ಷಕ್ಕೂ ಮಿಕ್ಕು ಉದ್ಯೋೋಗಿಗಳಿದ್ದಾಾರೆ. ಮಹಿಳಾ ಸಬಲೀಕರಣಕ್ಕೆೆ ವಿಶೇಷವಾಗಿ ಒತ್ತು ನೀಡಲಾಗಿದ್ದು ಸಂಸ್ಥೆೆಗಳಲ್ಲಿ ಶೇಕಡಾ 47ರಷ್ಟು ಮಹಿಳಾ ಉದ್ಯೋೋಗಿಗಳಿದ್ದಾಾರೆ. ವಿಶೇಷ ಆಹ್ವಾಾನದ ಮೇರೆಗೆ, ತಮಗೆ ಪ್ರವೇಶ ನಿರಾಕರಿಸಿದ ಹಾರ್ವರ್ಡ್ ವಿಶ್ವವಿದ್ಯಾಾಲಯದಲ್ಲಿ ಗೌರವ ಉಪನ್ಯಾಾಸಕರಾಗಿ, ವಿದ್ಯಾಾರ್ಥಿಗಳಿಗೆ ಬೋಧಿಸುವ ಅವಕಾಶವೂ ಅವರಿಗೆ ದೊರಕಿದೆ.

ತಿಂಗಳಿಗೆ ಕೇವಲ 20 ಡಾಲರ್ ಸಂಪಾದಿಸುತ್ತಿಿದ್ದ ಚೀನಾದ ಸಾಮಾನ್ಯ ಇಂಗ್ಲಿಿಷ್ ಶಿಕ್ಷಕನೊಬ್ಬ ಕೇವಲ ಬುದ್ಧಿಿಮತ್ತೆೆ, ಪರಿಶ್ರಮ, ಕೆಲಸದಲ್ಲಿ ಪಾರದರ್ಶಕತೆ, ಚಾಕಚಕ್ಯತೆಗಳಿಂದ ಯಶಸ್ಸಿಿನ ಉತ್ತುಂಗಕ್ಕೇರಿ, ವಿಶ್ವವ್ಯಾಾಪಿಯಾಗಿ, ಇ-ಕಾಮರ್ಸ್ ದೈತ್ಯನಾಗಿ ಬೆಳೆದ ಪರಿ, ಇಂದಿನ ಬಿಸಿನೆಸ್ ವಿದ್ಯಾಾರ್ಥಿಗಳಿಗೆ ಅಧ್ಯಯನದ ವಿಷಯವಾಗಿರುವದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ‘ಯಂಗ್ ಗ್ಲೋೋಬಲ್ ಲೀಡರ್(2005), ವರ್ಲ್‌ಡ್‌ ಎಕನಾಮಿಕ್ ಫೋರಮ್, ಟಾಪ್ 100 ಮೋಸ್‌ಟ್‌ ಇನ್‌ಫ್ಲುುಯೆನ್ಶಿಿಯಲ್ ಪೀಪಲ್-ಟೈಮ್ ಮ್ಯಾಾಗಜಿನ್, ಬಿಸಿನೆಸ್ ಲೀಡರ್ ಆಫ್ ದ ಡಿಕೇಡ್, ಎಕನಾಮಿಕ್ ಪರ್ಸನ್ ಆಫ್ ದ ಇಯರ್-2009’ ಮುಂತಾಗಿ ಹಲವು ಪ್ರಶಸ್ತಿಿಗಳು ಅವರನ್ನು ಅರಸಿ ಬಂದಿವೆ.

ತಮ್ಮ ದೇಶದ ಆರ್ಥಿಕ ದುಸ್ಥಿಿತಿಗೆ ಅಮೆರಿಕ ದೇಶದ ದುಬಾರಿ ಯುಧ್ಧನೀತಿಗಳು ಕಾರಣವೇ ಹೊರತು, ಚೀನಾವನ್ನು ದೂಷಿಸುವದು ಸಮಂಜಸವಲ್ಲವೆಂದು ಜ್ಯಾಾಕ್ ಮಾ ಅಭಿಪ್ರಾಾಯ ಪಡುತ್ತಾಾರೆ. ಜನರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆೆ ಕಾಳಜಿ ಮೂಡಿದರೆ ಮತ್ತು ಹವಾಮಾನ ಬದಲಾವಣೆ ಒಂದು ಗಂಭೀರ ಸಮಸ್ಯೆೆಯೆಂದು ಅರಿವಾದರೆ ಮಾತ್ರ ಸ್ವಚ್ಛ ಪರಿಸರ ನಮ್ಮದಾಗಲು ಸಾಧ್ಯವೆಂದು ಅವರು ಹೇಳುತ್ತಾಾರೆ. ಎಷ್ಟೇ ಹಣ ಸಂಪಾದಿಸಿದರೂ, ಐಷಾರಾಮಿ ಬದುಕು ನಮ್ಮದಾಗಿದ್ದರೂ, ಗಳಿಸಿದ ಹಣವೆಲ್ಲಾಾ ವೈದ್ಯಕೀಯ ಚಿಕಿತ್ಸೆೆಗಾಗಿ ವ್ಯಯವಾಗುವಂತಿದ್ದರೆ ಪ್ರಯೋಜನವೇನು ಎಂದು ಅವರು ತರ್ಕಿಸುವುದು ಎಲ್ಲರಿಗೂ ಒಪ್ಪಿಿಗೆಯಾಗುವ ವಿಷಯವೇ.

ಅಪಾರ ಸಂಪತ್ತು ಗಳಿಸಿದ ದಿಗ್ಗಜರಾಗಿ ಹಸುರು ಇಂಧನದ ಸಂಶೋಧನೆಗಾಗಿ ಮತ್ತೊೊಬ್ಬ ಯಶಸ್ವಿಿ ಉದ್ಯಮಿ, ಮೇರು ಶ್ರೀಮಂತ ಬಿಲ್ ಗೇಟ್‌ಸ್‌ ಜೊತೆ ಸೇರಿ ಭಾರೀ ಬಂಡವಾಳ ಹೂಡಿದ್ದಾಾರೆ. ಇಂಧನ ಉಳಿತಾಯಕ್ಕಾಾಗಿ ಸರಕಾರ, ಖಾಸಗಿ ಕಂಪನಿಗಳು, ಸಮಾಜ ಶಾಸ್ತ್ರಜ್ಞರೆಲ್ಲಾಾ ಒಟ್ಟಾಾಗಿ ಕೆಲಸ ಮಾಡಬೇಕು ಎಂದು ಜ್ಯಾಾಕ್ ಮಾ ಪ್ರತಿಪಾದಿಸುತ್ತಾಾರೆ.

ತಮ್ಮ ಜನ್ಮದಿನವಾದ ಸೆಪ್ಟೆೆಂಬರ್ 10ರಂದೇ ಎರಡು ದಶಕಗಳ ಆಡಳಿತದಿಂದ, ನಿವೃತ್ತಿಿ ಪಡೆದ ಜ್ಯಾಾಕ್ ಮಾ ಅವರಿಗೆ ಚೀನಾ ದೇಶದ ಹ್ಯಾಾಂಗ್‌ಝೌ ಒಲಿಂಪಿಕ್ ಕ್ರೀಡಾಂಗಣದಲ್ಲಿ ಭವ್ಯ ಬೀಳ್ಕೊೊಡುಗೆ ಸಮಾರಂಭವನ್ನು ಆಯೋಜಿಸಲಾಗಿದೆ. ನಿವೃತ್ತಿಿಯ ನಂತರ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಜ್ಯಾಾಕ್ ಮಾ ಉದ್ದೇಶಿಸಿದ್ದಾಾರೆ.

ಜ್ಯಾಾಕ್ ಮಾ ಅವರ ಯಶಸ್ಸಿಿನ ಕೆಲ ಸೂತ್ರಗಳು ಸದಾ ಮೆಲುಕು ಹಾಕುವಷ್ಟು ಮನನೀಯವಾಗಿವೆ:
*ನಿಮ್ಮ ಸಹವರ್ತಿಗಳು ಸರಿಯಾದ ವ್ಯಕ್ತಿಿಗಳಾಗಿದ್ದರೆ ಸಾಕು, ಅತ್ಯುತ್ತಮರೇನೂ ಆಗಿರಬೇಕಿಲ್ಲ.
* ಗುರಿ ಸಾಧನೆಯ ಮಾರ್ಗ ಕಠಿಣವಾಗಿದ್ದರೂ ಸರಿ, ನಿಮ್ಮ ಮೊದಲ ದಿನದ ಕನಸು ಸದಾ ಜೊತೆಗಿರಲಿ.
* ಸಾಧಕರ ಯಶಸ್ಸಿಿಗಿಂತ, ಅವರು ಮಾಡಿರಬಹುದಾದ ತಪ್ಪುುಗಳಿಂದ ಇತರರು ಪಾಠ ಕಲಿಯಬೇಕು.
* ಸೋತಾಗ ಎಂದಿಗೂ ಕೈ ಚೆಲ್ಲದಿರಿ. ಇಂದಿನ ದಿನ ಕಷ್ಟದಾಯಕವೆನಿಸಿದರೆ ನಾಳೆ ಇನ್ನೂ ಕೆಟ್ಟದಾಗಿರಬಹುದು.             ಆದರೆ ನಾಳಿದ್ದು ಸೂರ್ಯೋದಯ ಖಂಡಿತ.
* ಎದುರಾಳಿಗಳನ್ನು ನೋಡಿ ಕಲಿಯಿರಿ. ಅನುಸರಿಸಬೇಡಿ.
* ಪ್ರಯತ್ನಶೀಲರಾಗದಿದ್ದರೆ ನಿಮಗೆ ಅವಕಾಶ ಇದೆ ಎಂಬುದು ತಿಳಿಯುವುದೇ ಇಲ್ಲ.
* ಜೀವನ ಚಿಕ್ಕದೆನಿಸಿದರೂ ಸುಂದರವಾಗಿದೆ. ಜೀವನವನ್ನು ಆರಾಧಿಸಿ.
* ಹಣವೆಂದರೆ ಸಂತಸವಲ್ಲ, ಅದೊಂದು ಜವಾಬ್ದಾಾರಿ.
==