Friday, 7th October 2022

ಬಿಜೆಪಿಗೆ ಹೆಚ್ಚಿನ ಯುವಕರು ಸೇರ್ಪಡೆ: ವಿಜಯೇಂದ್ರ

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ರಂಗು ಹೆಚ್ಚಾಗಿದ್ದು, ತಾಲ್ಲೂಕಿನ ಚಂಗಾವರದಲ್ಲಿ ಪಕ್ಷ ಸೇರ್ಪಡೆ ಹಾಗೂ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ. ಕಾಡುಗೊಲ್ಲ ಸಮಾಜದ ಮುಖಂಡರಾದ ಮಾರಣ್ಣನವರು ಪಕ್ಷಕ್ಕೆ ಸೇರ್ಪಡೆಗೊಂಡರು.

ಅಭಿವೃದ್ಧಿ ಮರೀಚಿಕೆಯಾಗಿದ್ದ ಕ್ಷೇತ್ರವನ್ನು ಅಭಿವೃದ್ಧಿಯ ದೃಷ್ಠಿಯಿಂದ ಬದಲಾವಣೆ ತರಲೇಬೇಕೆಂಬ ಧ್ಯೇಯದೊಂದಿಗೆ ಹೆಚ್ಚು ಯುವಮಿತ್ರರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಕ್ಷೇತ್ರದಲ್ಲಿ ಸಂಚಲನವನ್ನುಂಟು ಮಾಡಿದೆ.  ಜನತೆಯ ಬೆಂಬಲ ಹಾಗೂ ಪಕ್ಷದ ಕಾರ್ಯಕರ್ತರಲ್ಲಿನ ಉತ್ಸಾಹ ಗೆಲುವಿನ ವಿಶ್ವಾಸ ತಂದಿದೆ ಎಂದು ಯುವ ಮುಖಂಡ ವಿಜಯೇಂದ್ರ ತಿಳಿಸಿದರು.