ಶಿವಮೊಗ್ಗ: ರಾಜ್ಯದ ಹಿರಿಯ ಆನೆ ಎಂದೇ ಹೆಸರಾಗಿದ್ದ ಸಕ್ರೆಬೈಲು ಆನೆಬಿಡಾರದ ಹಿರಿಯ ಆನೆ ಗೀತಾ (85) ಸಾವನ್ನಪ್ಪಿದೆ.

ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಆಹಾರ ತ್ಯಜಿಸಿದ್ದು, ಸಕ್ರೆಬೈಲಿನ ಕ್ರಾಲ್ ಸಮೀಪ ಬೆಳಗ್ಗೆ ಮೃತಪಟ್ಟಿದೆ.

ಆನೆ ಗೀತಾ 1968ರಲ್ಲಿ ಕಾಕನಕೋಟೆಯಲ್ಲಿ ಸೆರೆಹಿಡಿದು ಸಕ್ರೆಬೈಲ್‍ಗೆ ಕರೆತಂದು ಪಳಗಿಸಲಾಗಿತ್ತು. ಎಲ್ಲರ ಅಚ್ಚುಮೆಚ್ಚಿನ ಆನೆಯಾಗಿದ್ದು, ಗೀತಾ ನಿಧನಕ್ಕೆ ಮಾವುತರು ಕಂಬನಿ ಮಿಡಿದಿದ್ದಾರೆ.