ನಟ ಗೋವಿಂದ (Actor Govinda) ಅವರನ್ನು ಬುಧವಾರ ಮುಂಬೈನ ಕ್ರಿಟಿಕೇರ್ ಏಷ್ಯಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ (Admitted) ಎಂದು ವರದಿಯಾಗಿದೆ. ವರದಿಯ ಪ್ರಕಾರ, ಪ್ರಜ್ಞೆ ತಪ್ಪಿದ ಹಿನ್ನೆಲೆಯಲ್ಲಿ ಗೋವಿಂದ ಅವರನ್ನು ಆಸ್ಪತ್ರೆಗೆ (Hospital) ದಾಖಲು ಮಾಡಲಾಗಿದೆ. ನಟ ತಡರಾತ್ರಿ ಮನೆಯಲ್ಲಿ ಮೂರ್ಛೆ ಹೋದರು ಎಂದು ಅವರ ಸ್ನೇಹಿತ ಮತ್ತು ಕಾನೂನು ಸಲಹೆಗಾರ ಲಲಿತ್ ಬಿಂದಾಲ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ವೈದ್ಯರನ್ನು ಸಂಪರ್ಕಿಸಿದ ನಂತರ ಅವರಿಗೆ ಚಿಕಿತ್ಸೆ ನೀಡಲಾಯಿತು. ಮತ್ತು ಬೆಳಗ್ಗೆ 1ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮಾಧ್ಯಮವೊಂದಕ್ಕೆ ಎಂದು ಬಿಂದಾಲ್ ದೃಢಪಡಿಸಿದರು.
ಅತ್ಯಂತ ದುಃಖದಲ್ಲಿ ಕಂಡು ಬಂದಿದ್ದ ಗೋವಿಂದ್
ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ನಟ ಧರ್ಮೇಂದ್ರ ಅವರನ್ನು ಭೇಟಿ ಮಾಡಿದ ಒಂದು ದಿನದ ನಂತರ ಗೋವಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೀಡಿಯೊದಲ್ಲಿ, ಅವರು ಆಸ್ಪತ್ರೆಯಿಂದ ಹೊರಬರುತ್ತಿರುವಾಗ ಅತ್ಯಂತ ದುಃಖದಲ್ಲಿ ಕಂಡು ಬಂದಿದ್ದರು.
ಇದನ್ನೂ ಓದಿ: Bigg Boss Kannada 12: ಮಾಳು ನೇರನುಡಿ ಮನೆಯವರಿಗೆ ಅರಗಿಸಿಕೊಳ್ಳೋಕೆ ಆಗ್ತಿಲ್ವಾ? ರಾಶಿಕಾ ಕಣ್ಣೀರು, ಅಶ್ವಿನಿ ಗರಂ
ಇದು ಎರಡನೇ ಬಾರಿ
ಒಂದು ವರ್ಷದೊಳಗೆ ಗೋವಿಂದ ಆಸ್ಪತ್ರೆಗೆ ದಾಖಲಾಗುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಅಕ್ಟೋಬರ್ 1 ರಂದು ನಟ ಅಪಘಾತಕ್ಕೀಡಾಗಿದ್ದರು. ಅವರದೇ ಗನ್ ನಿಂದ ಗುಂಡನ್ನು ಹಾರಿಸಿಕೊಂಡಿದ್ದರು. ಗುಂಡು ನಟ ಗೋವಿಂದ ಅವರ ಕಾಲಿಗೆ ತಗುಲಿತ್ತು. ಹೊರಗೆ ಹೊರಡುವ ಮುನ್ನ ನಟ ಗೋವಿಂದ ತಮ್ಮ ಗನ್ ಚೆಕ್ ಮಾಡುತ್ತಿದ್ದಾಗ, ಆ ಸಮಯದಲ್ಲಿ ಅವರು ಮಿಸ್ ಫೈರ್ ಮಾಡಿಕೊಂಡಿದ್ದರು. ಈ ಘಟನೆ ಬೆಳಗಿನ ಜಾವ ಸುಮಾರು 4:45 ಕ್ಕೆ ನಡೆದಿತ್ತು.
ಘಟನೆ ನಡೆದ ಮೂರು ದಿನಗಳ ನಂತರ ಗೋವಿಂದ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಸದಸ್ಯರಾಗಿರುವ ನಟ ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ಮತ್ತು ಮಗಳು ಟೀನಾ ಅಹುಜಾ ಅವರೊಂದಿಗೆ ಇದ್ದರು.
ಗೋವಿಂದ ಅವರ ವೃತ್ತಿಜೀವನ
1980 ಮತ್ತು 1990 ರ ದಶಕದಲ್ಲಿ ಇಲ್ಜಾಮ್ (1986), ಲವ್ 86 (1986) ಮತ್ತು ಇಷ್ಕ್ ಮೇ ಜೀನಾ ಇಷ್ಕ್ ಮೇ ಮಾರ್ನಾ (1994) ನಂತಹ ಚಿತ್ರಗಳ ಮೂಲಕ ನಟ ಖ್ಯಾತಿಗೆ ಏರಿದರು. ಡೇವಿಡ್ ಧವನ್ ಅವರಂತಹ ನಿರ್ದೇಶಕರೊಂದಿಗಿನ ಅವರ ಸಹಯೋಗವು ಕೂಲಿ ನಂ. 1, ಹೀರೋ ನಂ. 1, ರಾಜಾ ಬಾಬು ಮತ್ತು ಪಾರ್ಟ್‌ನರ್‌ನಂತಹ ಹಿಟ್‌ಗಳನ್ನು ನೀಡಿತು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ- ಕಾವ್ಯ ದೋಸ್ತಿ ಕಟ್? ಕಾವು ಜೊತೆ ಇನ್ಮುಂದೆ ಮಾತನಾಡುವುದಿಲ್ವಂತೆ ಗಿಲ್ಲಿ!
ಹಾಸ್ಯದ ಹೊರತಾಗಿ, ಗೋವಿಂದ ಅವರು ಹೆಚ್ಚು ಗಂಭೀರ ಪಾತ್ರಗಳಲ್ಲಿ ಸ್ಮರಣೀಯ ಅಭಿನಯವನ್ನು ನೀಡಿದ್ದಾರೆ, ಅವರ 3 ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ ಅವರ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅವರ ಕೊನೆಯ ಚಿತ್ರ ರಂಗೀಲಾ ರಾಜ, ಇದು 2019 ರಲ್ಲಿ ಬಿಡುಗಡೆಯಾಯಿತು.