ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nishaanchi OTT: ಅನುರಾಗ್ ಕಶ್ಯಪ್ ನಿರ್ದೇಶನದ ʻನಿಶಾಂಚಿʼ ಸಿನಿಮಾ! 2 ಪಾರ್ಟ್‌ಗಳು ಏಕಕಾಲಕ್ಕೆ ಸ್ಟ್ರೀಮಿಂಗ್‌, ಎಲ್ಲಿ?

ಅನುರಾಗ್ ಕಶ್ಯಪ್ (Anurag Kashyap) ಅವರ ಎರಡು ಭಾಗಗಳ ಕ್ರೈಂ ಡ್ರಾಮ ಮೂವಿ, 'ನಿಶಾಂಚಿ' (Nishaanchi)ಈಗ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈ ಚಿತ್ರದಲ್ಲಿ ಐಶ್ವರ್ಯ ಠಾಕ್ರೆ ಮತ್ತು ವೇದಿಕಾ ಪಿಂಟೊ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿಶಾಂಚಿ ಸೆಪ್ಟೆಂಬರ್ 19, 2025 ರಂದು ಬಿಡುಗಡೆಯಾಯಿತು (Release). ಮಿಶ್ರ ವಿಮರ್ಶೆಗಳನ್ನು ಪಡೆದುಕೊಂಡಿತ್ತು. ಇದರಲ್ಲಿ ಮೊಹಮ್ಮದ್ ಜೀಶನ್ ಅಯ್ಯೂಬ್ ಮತ್ತು ಕುಮುದ್ ಮಿಶ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಅನುರಾಗ್ ಕಶ್ಯಪ್ ನಿರ್ದೇಶನದ ʻನಿಶಾಂಚಿʼ! ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

'ನಿಶಾಂಚಿ' ಸಿನಿಮಾ ಒಟಿಟಿಯಲ್ಲಿ -

Yashaswi Devadiga
Yashaswi Devadiga Nov 14, 2025 7:15 PM

ವೀಕೆಂಡ್‌ ಬಂತು ಅಂದರೆ ಸಾಕು, ಒಟಿಟಿಯಲ್ಲಿ(OTT) ಯಾವೆಲ್ಲ ಸಿನಿಮಾಗಳಿವೆ ಎಂದು ಸಿನಿಪ್ರೀಯರು ಸರ್ಚ್‌ ಮಾಡ್ತಾ ಇರ್ತಾರೆ. ಅನುರಾಗ್ ಕಶ್ಯಪ್ (Anurag Kashyap) ಅವರ ಕ್ರೈಂ ಡ್ರಾಮ, ಗ್ಯಾಂಗ್‌ಸ್ಟರ್‌ ಕಥೆಯುಳ್ಳ ಮೂವಿಯೊಂದು ಒಟಿಟಿಗೆ ( Action Comedy OTT) ಎಂಟ್ರಿ ಕೊಟ್ಟಿದೆ. ಅದುವೇ ʻನಿಶಾಂಚಿʼ ಸಿನಿಮಾ. "ನಿಶಾಂಚಿ"ಯ ಎರಡೂ ಭಾಗಗಳನ್ನು ಒಟಿಟಿಯಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ ಅನುರಾಗ್ ಕಶ್ಯಪ್‌. ಹಾಗಾದರೆ ಸಿನಿಮಾ ಸ್ಟ್ರೀಮಿಂಗ್‌ (Streaming) ಎಲ್ಲಿ?

ಅನುರಾಗ್ ಕಶ್ಯಪ್ ಅವರ ಎರಡು ಭಾಗಗಳ ಕ್ರೈಂ ಡ್ರಾಮ ಮೂವಿ, 'ನಿಶಾಂಚಿ' ಈಗ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈ ಚಿತ್ರದಲ್ಲಿ ಐಶ್ವರ್ಯ ಠಾಕ್ರೆ ಮತ್ತು ವೇದಿಕಾ ಪಿಂಟೊ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿಶಾಂಚಿ ಸೆಪ್ಟೆಂಬರ್ 19, 2025 ರಂದು ಬಿಡುಗಡೆಯಾಯಿತು. ಮಿಶ್ರ ವಿಮರ್ಶೆಗಳನ್ನು ಪಡೆದುಕೊಂಡಿತ್ತು.

ಇದನ್ನೂ ಓದಿ: Bigg Boss Kannada 12: ಓವರ್​ ಕಾನ್ಫಿಡೆನ್ಸೇ ಗಿಲ್ಲಿಗೆ ಮುಳುವಾಯ್ತಾ?​ ರಘು ಆಟಕ್ಕೆ ಬಹುಪರಾಕ್‌ ಅಂತಿದ್ದಾರೆ ವೀಕ್ಷಕರು!

OTT ನಲ್ಲಿ ನಿಶಾಂಚಿ ಭಾಗ 1 ಮತ್ತು ಭಾಗ 2!

ಅನುರಾಗ್ ಕಶ್ಯಪ್ ಅವರ ನಿಶಾಂಚಿ ಚಿತ್ರ ಬಿಡುಗಡೆಯಾದ ಸುಮಾರು ಎರಡು ತಿಂಗಳ ನಂತರ, ಅಂತಿಮವಾಗಿ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ.

ನಿಶಾಂಚಿ ಒಂದು ಕ್ಲಾಸಿಕ್ ಬಾಲಿವುಡ್ ಮನರಂಜನಾ ಚಿತ್ರ, ಈ ಸಿನಿಮಾ ನೋಡುವಾಗ ಹಲವಾರು ರೆಟ್ರೋ ಸಿನಿಮಾಗಳನ್ನ ನೆನಪಿಸುತ್ತೆ ಎಂಬದು ವೀಕ್ಷಕರ ಅಭಿಪ್ರಾಯ. ಈ ಚಿತ್ರದಲ್ಲಿ ಸಂಗೀತ, ಆಕ್ಷನ್, ರೊಮ್ಯಾಂಟಿಕ್‌ ಜೊತೆ , ಕೌಟುಂಬಿಕ ಮಿಶ್ರಣವಿದೆ. ಸ್ನೇಹಿತ ಸ್ನೇಹಿತನಿಗೆ ದ್ರೋಹ ಮಾಡುವುದು ಮತ್ತು ಪ್ರೇಮಿ ಪ್ರೇಮಿಗೆ ದ್ರೋಹ ಮಾಡುವುದು ಸೇರಿದಂತೆ ಅನೇಕ ವಿಚಾರಗಳು ಈ ಸಿನಿಮಾದಲ್ಲಿವೆ.

2016 ರಲ್ಲಿ ಕಥೆ ರೆಡಿ!

2012 ರಲ್ಲಿ ಗ್ಯಾಂಗ್ಸ್ ಆಫ್ ವಾಸ್ಸೇಪುರ್‌ನಲ್ಲಿ ಮಾಡಿದಂತೆ ನಿಶಾಂಚಿಯೊಂದಿಗೆ ಈ ವ್ಯಕ್ತಿ ತನ್ನ ಇತಿಹಾಸವನ್ನು ಮರುಸೃಷ್ಟಿಸಬಹುದೇ ಎಂದು ನೋಡಬೇಕಾಗಿದೆ. ಈ ಹಿಂದೆ, ಅನುರಾಗ್ ಕಶ್ಯಪ್ ಅವರು 2016 ರಲ್ಲಿ ನಿಶಾಂಚಿ ಚಿತ್ರಕಥೆಯನ್ನು ಬರೆದಿದ್ದಾಗಿ ಬಹಿರಂಗಪಡಿಸಿದ್ದರು.

"ನಿಶಾಂಚಿ"ಯ ಎರಡೂ ಭಾಗಗಳನ್ನು ಒಟಿಟಿಯಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ ಅನುರಾಗ್ ಕಶ್ಯಪ್ಅನುರಾಗ್ ಕಶ್ಯಪ್ ಅವರ "ನಿಶಾಂಚಿ" ಚಿತ್ರವು 2006 ರಲ್ಲಿ ಕಾನ್ಪುರದಲ್ಲಿ ನಡೆಯುತ್ತದೆ. ಈ ಕಥೆಯು ಅವಳಿ ಸಹೋದರರಾದ ಬಬ್ಲು ಮತ್ತು ದಾಬ್ಲೂ (ಐಶ್ವರ್ಯ ಠಾಕ್ರೆ) ಸುತ್ತ ಸುತ್ತುತ್ತದೆ.

ಬಬ್ಲು ಮತ್ತು ಅವನ ಸ್ನೇಹಿತೆ ರಿಂಕು (ವೇದಿಕಾ ಪಿಂಟೊ) ಬ್ಯಾಂಕ್ ದರೋಡೆಗೆ ಪ್ರಯತ್ನಿಸುತ್ತಾರೆ, ಆದರೆ ಅವರ ಪ್ಲ್ಯಾನ್‌ ವಿಫಲಗೊಳ್ಳುತ್ತದೆ. ಬಬ್ಲು ಪೊಲೀಸರಿಂದ ಸಿಕ್ಕಿಹಾಕಿಕೊಂಡು 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುತ್ತಾನೆ. ಈ ಮಧ್ಯೆ, ದಾಬ್ಲೂ, ರಿಂಕು ಜೊತೆಗೆ ಸಮಯಕ್ಕೆ ಸರಿಯಾಗಿ ತಪ್ಪಿಸಿಕೊಳ್ಳುತ್ತಾನೆ.

ಬಳಿಕ ದೊಡ್ಡ ಪ್ರಶ್ನೆ ಏನೆಂದರೆ: ಬಬ್ಲು ಕುಖ್ಯಾತ ದರೋಡೆಕೋರನಾಗುತ್ತಾನಾ? ಅಥವಾ ಅವನು ತನ್ನ ಕುಟುಂಬದೊಂದಿಗೆ ಉತ್ತಮ ಜೀವನವನ್ನು ಹುಡುಕುತ್ತಾನಾ? ಈ ಉತ್ತರ ಕಂಡುಕೊಳ್ಳಲು ನೀವು "ನಿಶಾಂಚಿ" ಯ ಎರಡೂ ಭಾಗಗಳನ್ನು ನೋಡಬೇಕಾಗುತ್ತದೆ. ಅದು ಈಗ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: Bigg Boss Kannada 12: ಚಾನೆಲ್​ ವಿರುದ್ಧ ಗಂಭೀರ ಆರೋಪ ಮಾಡಿದ ಜಾಹ್ನವಿ; ಕಾರಣ ಇದು

ನಿಶಾಂಚಿ ಚಿತ್ರವನ್ನು ಅಜಯ್ ರೈ ಮತ್ತು ರಂಜನ್ ಸಿಂಗ್ ಅವರು ಜಾರ್ ಪಿಕ್ಚರ್ಸ್ ಬ್ಯಾನರ್ ಮತ್ತು ಫ್ಲಿಪ್ ಫಿಲ್ಮ್ಸ್ ಸಹಯೋಗದೊಂದಿಗೆ ನಿರ್ಮಿಸಿದ್ದಾರೆ. ಇದರಲ್ಲಿ ಮೊಹಮ್ಮದ್ ಜೀಶನ್ ಅಯ್ಯೂಬ್ ಮತ್ತು ಕುಮುದ್ ಮಿಶ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.