ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Oscar winner Gene Hackman: ಪ್ರೀತಿಯ ಪತ್ನಿ, ಮುದ್ದಿನ ನಾಯಿ ಜೊತೆಗೆ ಆಸ್ಕರ್ ವಿಜೇತ ಜೀನ್ ಹ್ಯಾಕ್‌ಮನ್‌ ಶವವಾಗಿ ಪತ್ತೆ!

ಎರಡು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ನಟ ಜೀನ್ ಹ್ಯಾಕ್‌ಮನ್‌, ಅವರ ಪತ್ನಿ ಮತ್ತು ಅವರ ನಾಯಿ ನ್ಯೂ ಮೆಕ್ಸಿಕೋದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಾಲಿವುಡ್ ನಟ ಜೀನ್ ಹ್ಯಾಕ್‌ಮನ್‌ ಮತ್ತು ಅವರ ಪತ್ನಿ ನಿಗೂಢ ಸಾವು!

Profile Pushpa Kumari Feb 27, 2025 6:42 PM

ಮೆಕ್ಸಿಕೊ: ಆಸ್ಕರ್ ಪ್ರಶಸ್ತಿ​ ವಿಜೇತ, ಹಾಲಿವುಡ್​ ನಟ ಜೀನ್​ ಹ್ಯಾಕ್‌ಮನ್‌ (Oscar winner Gene Hackman) ಮತ್ತು ಪತ್ನಿ ಬೆಟ್ಸಿ ಅರಕಾವಾ ಮೆಕ್ಸಿಕೋದ ಮನೆಯಲ್ಲಿ ಸಾಕು ನಾಯಿ ಸಮೇತ ಶವವಾಗಿ ಪತ್ತೆಯಾಗಿದ್ದಾರೆ. ನಟ ಜೀನ್ ಹ್ಯಾಕ್‌ಮನ್‌ಗೆ 95 ವರ್ಷ ಮತ್ತು ಪತ್ನಿ ಬೆಟ್ಸ್​ಗೆ 63 ವರ್ಷ ಆಗಿದ್ದು ಸಾವಿಗೆ ನಿಖರವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ. ದಂಪತಿ ತಮ್ಮಸಾಕು ನಾಯಿಯೊಂದಿಗೆ ಸಾವನ್ನಪ್ಪಿದ್ದು, ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ಮಾಡುತ್ತಿದ್ದು ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜೀನ್ ಹ್ಯಾಕ್‌ಮನ್ ಎರಡು ದಶಕಗಳಿಂದ ನಟನೆಯಿಂದ ನಿವೃತ್ತರಾಗಿದ್ದು ಅವರ ಪತ್ನಿ ಬೆಟ್ಸಿ ಶಾಸ್ತ್ರೀಯ ಪಿಯಾನೋ ವಾದಕರಾಗಿದ್ದರು. ಹ್ಯಾಕ್‌ಮನ್ ಎರಡು ಬಾರಿ ವಿವಾಹವಾಗಿದ್ದು ಕ್ರಿಸ್ಟೋಫರ್, ಎಲಿಜಬೆತ್ ಜೀನ್ ಮತ್ತು ಲೆಸ್ಲಿ ಅನ್ನಿ ಎಂಬ ಮೂವರು ಮಕ್ಕಳನ್ನು ಹೊಂದಿದ್ದು ಮೊದಲ ಪತ್ನಿ ಫಾಯೆ ಮಾಲ್ಟೀಸ್ ಅವರು 2017ರಲ್ಲಿ ನಿಧನರಾದರು.

ಜೀನ್ ಹ್ಯಾಕ್‌ಮನ್‌ 80ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ವಿವಿಧ ಟಿವಿ ಮಾಧ್ಯಮ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಜೀನ್ ​ ಹ್ಯಾಕ್​ಮ್ಯಾನ್ ಒಬ್ಬ ಉತ್ತಮ ನಟರಾಗಿದ್ದು, 1972 ರ ಚಲನಚಿತ್ರದ ಫ್ರೆಂಚ್ ಕನೆಕ್ಷನ್‌ನಲ್ಲಿನ ಅಭಿನಯಕ್ಕಾಗಿ ತಮ್ಮ ಮೊದಲ ಆಸ್ಕರ್ ಪ್ರಶಸ್ತಿಯನ್ನು ಪಡೆದಿದ್ದರು. ಈ ಸಿನಿಮಾದಲ್ಲಿ‌ ಪೊಲೀಸ್‌ ಪಾತ್ರವನ್ನು ನಿರ್ವಹಿಸಿದರು. 1992 ಪಾಶ್ಚಾತ್ಯ ಅನ್‌ ಫರ್ಗಿವನ್‌ನಲ್ಲಿ ಸ್ಯಾಡಿಸ್ಟ್ ಶೆರಿಫ್ ಪಾತ್ರದಲ್ಲಿ ತಮ್ಮ ಎರಡನೇ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದರು

ಇದನ್ನು ಓದಿ: Kalaburagi News: ಗುಲ್ಬರ್ಗ ವಿಶ್ವವಿದ್ಯಾಲಯದ ಮೇಲೆ ಲೋಕಾಯುಕ್ತ ದಾಳಿ: ವಿವಿಧ ದಾಖಲೆಗಳ ಪರಿಶೀಲನೆ

ಎರಡು ಆಸ್ಕರ್‌ಗಳ ಜೊತೆಗೆ, ಎರಡು BAFTA ಪ್ರಶಸ್ತಿಗಳು ಮತ್ತು ನಾಲ್ಕು ಗೋಲ್ಡನ್ ಗ್ಲೋಬ್‌ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 1930 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ ​ ಹ್ಯಾಕ್‌ಮನ್‌ 16 ನೇ ವಯಸ್ಸಿನಲ್ಲಿ ಮೆರೈನ್ ಕಾರ್ಪ್ಸ್‌ಗೆ ಸೇರ್ಪಡೆಗೊಂಡಿದ್ದು 1947 ರಿಂದ 1952 ರವರೆಗೆ ಕ್ಷೇತ್ರ ರೇಡಿಯೊ ಆಪರೇಟರ್ ಆಗಿ ಸೇವೆ ಸಲ್ಲಿಸಿದ್ದು ಬ್ರಾಡ್ ಕಾಸ್ಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. 2004 ರಲ್ಲಿ 'ವೆಲ್‌ ಕಮ್ ಟು ಮೂಸ್‌ಪೋರ್ಟ್' ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು.