Lakshmi Baramma: ಮಾತು ಬಾರದ ಅರ್ಚಕರು ನನ್ನ ನೋಡಿ ಹೀಗೆ ಮಾಡಿದ್ರು: ಶಾಕಿಂಗ್ ವಿಚಾರ ಬಿಚ್ಚಿಟ್ಟ ಭೂಮಿಕಾ
ಭೂಮಿಕಾ ರಮೇಶ್ ಸದ್ಯ ವಿಶ್ವವಾಣಿ ಸ್ಪೆಷಲ್ ಯೂಟ್ಯೂಬ್ ಚಾನೆಲ್ನ ವಿಶೇಷ ಸಂದರ್ಶನದಲ್ಲಿ ಕೆಲ ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಮಾತು ಬಾರದ ಅರ್ಚಕರೊಬ್ಬರು ತಮ್ಮನ್ನು ಗುರುತಿಸಿದ ಬಗೆಯನ್ನು ಹೇಳುವ ಮೂಲಕ, ಜನರು ತಮಗೆ ತೋರಿಸುತ್ತಿರುವ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.

Bhoomika Ramesh Interview

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇದರಲ್ಲಿ ಮುಖ್ಯ ಭೂಮಿಕೆಯಲ್ಲಿ ಲಕ್ಷ್ಮಿಯಾಗಿ ಎಲ್ಲರ ಮೆಚ್ಚುಗೆ ಪಡೆದಿರುವ ಭೂಮಿಕಾ ರಮೇಶ್ಗೆ ಕೂಡ ಸಾಕಷ್ಟು ಫ್ಯಾನ್ಸ್ ಇದ್ದಾರೆ. ರಿಯಾಲಿಟಿ ಶೋಗಳ ಮೂಲಕ ಕಿರುತೆರೆಗೆ ಬಂದ ಭೂಮಿಕಾ ನಂತರ ಸೀರಿಯಲ್ಗೆ ಬಂದರು. ಇವರ ಜರ್ನಿಯೇ ಸಾಕಷ್ಟು ವಿಭಿನ್ನವಾಗಿದೆ. ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ಭಾಗ್ಯನ ತಂಗಿಯಾಗಿ ನಟಿಸುತ್ತಿದ್ದ ಲಕ್ಷ್ಮಿ ನಂತರ ಲಕ್ಷ್ಮೀ ಬಾರಮ್ಮ ಎನ್ನುವ ಸಪರೇಟ್ ಧಾರಾವಾಹಿ ಮೂಲಕ ಹೀರೋಯಿನ್ ಆದರು.
ಕೇವಲ 19ನೇ ವಯಸ್ಸಿಗೆ ಹೀರೋಯಿನ್ ಆಗಿ ಮಿಂಚಿದ ಭೂಮಿಕಾ ರಮೇಶ್ ಸದ್ಯ ವಿಶ್ವವಾಣಿ ಸ್ಪೆಷಲ್ ಯೂಟ್ಯೂಬ್ ಚಾನೆಲ್ನ ವಿಶೇಷ ಸಂದರ್ಶನದಲ್ಲಿ ಕೆಲ ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಮಾತು ಬಾರದ ಅರ್ಚಕರೊಬ್ಬರು ತಮ್ಮನ್ನು ಗುರುತಿಸಿದ ಬಗೆಯನ್ನು ಹೇಳುವ ಮೂಲಕ, ಜನರು ತಮಗೆ ತೋರಿಸುತ್ತಿರುವ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.
ನಾನು ಧರ್ಮಸ್ಥಳಕ್ಕೋ ಎಲ್ಲೋ ಹೋದಾಗ ನಡೆದ ಘಟನೆ ಇದು. ನನ್ನ ಅಪ್ಪ-ಅಮ್ಮನ ಜೊತೆ ಹೋಗಿದ್ದೆ. ಅಲ್ಲಿದ್ದ ಅರ್ಚಕರೊಬ್ಬರಿಗೆ ಮಾತು ಬರುತ್ತಿರಲಿಲ್ಲ. ಅವರು ನನ್ನನ್ನು ನೋಡಿ ಟಿ.ವಿಯಲ್ಲಿ ನೋಡಿದ್ದೆ ಎನ್ನುವ ರೀತಿಯಲ್ಲಿ ಆ್ಯಕ್ಷನ್ ಮಾಡಿ ತೋರಿಸಿದರು. ಅದು ನನಗೆ ಗೊತ್ತಾಯಿತು, ಹೌದು ಎನ್ನುವಂತೆ ತಲೆಯಾಡಿಸಿ ಸುಮ್ಮನಾದೆ. ಆದರೆ ಆ ಬಳಿಕ ಅವರು ಅವರ ಪೂಜೆಯ ತಟ್ಟೆಯಲ್ಲಿದ್ದ ಕಾಯಿನ್ ತೋರಿಸಲು ಶುರು ಮಾಡಿದರು. ಅದನ್ನು ನಾನು ಗಮನಿಸಿರಲಿಲ್ಲ.
ಬಳಿಕ ನನ್ನ ಅಪ್ಪ-ಅಮ್ಮ ನೋಡಿ ಅವರು ಏನೋ ಹೇಳುತ್ತಿದ್ದಾರೆ ನೋಡು ಎಂದರು. ನಾನು ನೋಡಿದಾಗ ಅವರು ಏನು ಹೇಳಲು ಟ್ರೈ ಮಾಡುತ್ತಾ ಇದ್ದಾರೆ ಎನ್ನುವುದು ಗೊತ್ತಾಗಲಿಲ್ಲ. ಕಾಯಿನ್ಗೂ ನನಗೂ ಏನೂ ಸಂಬಂಧ ಎನ್ನುವುದು ತಿಳಿಯಲಿಲ್ಲ. ಕೊನೆಗೆ ಟಿವಿಯನ್ನು ತೋರಿಸಿ, ನಂತರ ಕಾಯಿನ್ ತೋರಿಸಿದಾಗಲೇ ಅವರು ಲಕ್ಷ್ಮೀ ಬಾರಮ್ಮ ಸೀರಿಯಲ್ ಬಗ್ಗೆ ಹೇಳ್ತಾ ಇದ್ದಾರೆ ಎನ್ನುವುದು ತಿಳಿಯಿತು. ಇಷ್ಟು ಪ್ರೀತಿ ತೋರಿಸುವುದು ನೋಡಿ ಖುಷಿಯಾಯಿತು ಎಂದು ಭೂಮಿಕಾ ಹೇಳಿದ್ದಾರೆ.
ಇದೇವೇಳೆ ತಮ್ಮ ಮದುವೆ, ಪ್ರೀತಿ, ಪ್ರೇಮ, ಬಾಯ್ ಫ್ರೆಂಡ್ ಹಾಗೂ ತಮ್ಮ ಬಾಳ ಸಂಗಾತಿ ಹೇಗಿರಬೇಕು ಎನ್ನುವುದರ ಕುರಿತು ವಿಚಾರ ಹಂಚಿಕೊಂಡಿದ್ದಾರೆ. ನಾನು ಪರ್ಸನಲ್ ಮೊಬೈಲ್ ಅಂತ ಯೂಸ್ ಮಾಡೋದೇ ಇಲ್ಲ. ನನ್ಗೆ ಬಾಯ್ ಫ್ರೆಂಡ್ ಮಾಡೋಕೆ ಟೈಮ್ ಸಿಗಲಿಲ್ಲ ಎಂದಿದ್ದಾರೆ. ತಮ್ಮ ಹುಡುಗ ಹೀಗೆ ಇರಬೇಕು ಎಂದು ಪ್ರತಿಯೊಬ್ಬರಿಗೂ ನಿರೀಕ್ಷೆ ಇರುತ್ತದೆ. ನನಗೂ ಕೆಲವು ಆರೀತಿಯ ಆಸೆಗಳಿವೆ. ನಾನು ಟ್ರೆಡಿಶನಲ್ ಹುಡುಗಿ ಅಂತಾ ಎಲ್ಲರಿಗೂ ಗೊತ್ತು. ಹೀಗಾಗಿ ಆ ರೀತಿನೇ ನಾನು ಆಲೋಚನೆ ಮಾಡುತ್ತೇನೆ. ಎಲ್ಲರ ಮನೆಯಲ್ಲೂ ಮನಸ್ತಾಪಗಳು ಸಾಮಾನ್ಯವಾಗಿರುವುದರಿಂದ ನನಗೆ ಫ್ಯಾಮಿಲಿ ತುಂಬಾ ಮುಖ್ಯ. ಒಂದು ವೇಳೆ ಒಂದು ದಿನ ನಾನು ನನ್ನ ಹುಡುಗನನ್ನು ನಿಲ್ಲಿಸಿಕೊಂಡು ನಾನು ಮುಖ್ಯನಾ ನಿಮ್ಮ ಅಮ್ಮ ಮುಖ್ಯನಾ ಎನ್ನುವ ಪರಿಸ್ಥಿತಿ ಬಂದರೆ ಅವನು ನನ್ನ ಅಮ್ಮನೇ ಮುಖ್ಯ ಎಂದು ಹೇಳಬೇಕು. ಆ ರೀತಿಯ ಹುಡುಗ ಆಗಿರಬೇಕು ಎಂದು ಹೇಳಿದ್ದಾರೆ.
Aishwarya Shindogi: ಐಶ್ವರ್ಯಾಗೆ ಪ್ರಪೋಸ್ ಮಾಡೇ ಬಿಟ್ರಾ ಶಿಶಿರ್?: ವಿಡಿಯೋ ವೈರಲ್