ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ninna Jothe Nanna Kathe: ಸ್ಟಾರ್ ಸುವರ್ಣದಲ್ಲಿ ನಿನ್ನ ಜೊತೆ ನನ್ನ ಕಥೆ - ಸ್ನೇಹದ ಕಡಲಲ್ಲಿ "ಮಹಾಸಂಗಮ": ಕಾದು ಕುಳಿತ ವೀಕ್ಷಕರು

Serial Ninna Kathe Nanna Jothe and Snehada Kadalalli Mahasangama: ಟಿಆರ್ಪಿಯಲ್ಲಿ ಕೂಡ ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿಗಳು ಮೇಲೇರುತ್ತಿದೆ. ಇದೀಗ ಜನರಿಗೆ ಮತ್ತಷ್ಟು ಹತ್ತಿರವಾಗಲು ನಿನ್ನ ಜೊತೆ ನನ್ನ ಕಥೆ ಮತ್ತು ಸ್ನೇಹದ ಕಡಲಲ್ಲಿ ಧಾರಾವಾಹಿಯ ಮಹಾಸಂಗಮ ನಡೆಯಲಿದೆ.

Ninna Kathe Nanna Jothe and Snehada Kadalalli Mahasangama

ಇತ್ತೀಚಿನ ದಿನಗಳಲ್ಲಿ ಕಿರುತೆರೆ ಲೋಕದಲ್ಲಿ ಮಹಾಸಂಗಮ ಎಂಬುದು ಟ್ರೆಂಡ್ ಆಗಿ ಬಿಟ್ಟಿದೆ. ಮುಖ್ಯವಾಗಿ ಧಾರಾವಾಹಿಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ತಮ್ಮ ನೆಚ್ಚಿನ ಸೀರಿಯಲ್ ನಟ-ನಟಿಯರನ್ನು ಒಂದೇ ಧಾರಾವಾಹಿಯಲ್ಲಿ ನೋಡುವುದು ನೋಡುಗರಿಗೆ ಒಂದು ಹಬ್ಬ ಅಂತಲೇ ಹೇಳಬಹುದು. ಇದೀಗ ಅಂತಹ ಒಂದು ಮಹಾಸಂಗಮದ ಸುವರ್ಣ ಕ್ಷಣಕ್ಕೆ ಸ್ಟಾರ್ ಸುವರ್ಣ ಸಾಕ್ಷಿಯಾಗಲಿದೆ. ನಿನ್ನ ಜೊತೆ ನನ್ನ ಕಥೆ (Ninna Kathe Nanna Jothe) ಮತ್ತು ಸ್ನೇಹದ ಕಡಲಲ್ಲಿ (Snehada Kadalalli) ಸೀರಿಯಲ್‌ ಕಲಾವಿದರು ಒಟ್ಟಿಗೆ ಅಭಿನಯಿಸುತ್ತಿದ್ದಾರೆ.

ಹೌದು, ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುವ ಧಾರಾವಾಹಿಗಳಿಗೆ ವಿಶೇಷ ಅಭಿಮಾನಿ ಬಳಗವಿದೆ. ಇತರೆ ಚಾನೆಲ್​ಗಳಿಗೆ ಹೋಲಿಸಿದರೆ ಇದರಲ್ಲಿ ಪ್ರಸಾರ ಆಗುವ ಸೀರಿಯಲ್​ಗಳ ಸಂಖ್ಯೆ ಕಡಿಮೆ.. ಆದರೆ, ಟೆಲಿಕಾಸ್ಟ್ ಕಾಣುವ ಧಾರಾವಾಹಿಗಳಿಗೆ ಉತ್ತಮ ವೀಕ್ಷಕರಿದ್ದಾರೆ. ಟಿಆರ್​ಪಿಯಲ್ಲಿ ಕೂಡ ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿಗಳು ಮೇಲೇರುತ್ತಿದೆ. ಇದೀಗ ಜನರಿಗೆ ಮತ್ತಷ್ಟು ಹತ್ತಿರವಾಗಲು ನಿನ್ನ ಜೊತೆ ನನ್ನ ಕಥೆ ಮತ್ತು ಸ್ನೇಹದ ಕಡಲಲ್ಲಿ ಧಾರಾವಾಹಿಯ ಮಹಾಸಂಗಮ ನಡೆಯಲಿದೆ.



ವಿಶೇಷ ಎಂದರೆ ಈ ಮಹಾಸಂಗಮ ಬರೋಬ್ಬರಿ ಒಂದು ವಾರಗಳ ಕಾಲ ನಡೆಯಲಿದೆ. ಇದೇ ಸೋಮವಾರದಿಂದ ಪ್ರತಿ ದಿನ ರಾತ್ರಿ 8 ರಿಂದ 9 ಗಂಟೆವರಗೂ ಪ್ರಸಾರ ಕಾಣಲಿದೆ. ‘‘ನೊಂದವರನ್ನು ನಗಿಸಲು.. ಸ್ನೇಹವರನ್ನು ಸಂಭ್ರಮಿಸಲು.. ಪ್ರೀತಿಯ ಹಂಚಲು.. ದುಷ್ಟರನ್ನು ಶಿಕ್ಷಿಸಲು.. ಎರಡು ಪರಿವಾರಗಳು ಒಂದಾಗಿ ಬರುತ್ತಿವೆ.. ಸ್ನೇಹದ ಕಥೆ ಕಡಲಿನ ಜೊತೆ! ಮಹಾಸಂಗಮದ ಮಹಾಸಂಚಿಕೆಯನ್ನು ಮಿಸ್ ಮಾಡ್ಕೋಬೇಡಿ! ನಿನ್ನ ಜೊತೆ ನನ್ನ ಕಥೆ - ಸ್ನೇಹದ ಕಡಲಲ್ಲಿ ಮಹಾಸಂಗಮ’’ ಎಂದು ಸ್ಟಾರ್ ಸುವರ್ಣ ಪ್ರೊಮೋ ಹಂಚಿಕೊಂಡಿದೆ.

Hanumantha: ಧನರಾಜ್ ಮಗಳ ಜೊತೆ ಫೋಟೋಕ್ಕೆ ಕ್ಯೂಟ್ ಆಗಿ ಪೋಸ್ ಕೊಟ್ಟ ಹನುಮಂತ