SS Rajamouli: ಆ ಮಹಿಳೆಗಾಗಿ ನನ್ನ ಜೀವನವನ್ನೇ ಹಾಳು ಮಾಡಿಬಿಟ್ಟ- ಡೆತ್‌ನೋಟ್ ಬರೆದಿಟ್ಟು, ವಿಡಿಯೋ ಮಾಡಿ ರಾಜಮೌಳಿ ಆಪ್ತ ಸೂಸೈಡ್
ಟಾಲಿವುಡ್‌ನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ನನ್ನ ಸಾವಿಗೆ ರಾಜಮೌಳಿ ಕಾರಣವೆಂದು ಡೆತ್ ನೋಟ್ ಬರೆದು, ಅವರ ಆಪ್ತ, ನಿರ್ಮಾಪಕ ಶ್ರೀನಿವಾಸ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎಸ್.ಎಸ್. ರಾಜಮೌಳಿ

ಹೈದರಾಬಾದ್: ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ(SS Rajamouli) ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ. ರಾಜಮೌಳಿಯವರ ಒಂದು ಕಾಲದ ಆಪ್ತ ಸ್ನೇಹಿತ, ನಿರ್ಮಾಪಕ ಶ್ರೀನಿವಾಸ್ ರಾವ್ ಆತ್ಮಹತ್ಯೆಗೆ ಶರಣಾಗಿದ್ದು, ತಮ್ಮ ಸಾವಿಗೆ ರಾಜಮೌಳಿಯೇ ಕಾರಣ ಎಂದು ಡೆಟ್‌ನೋಟ್ ಹಾಗೂ ಸಾವಿಗೂ ಮುನ್ನ ಮಾಡಿರುವ ವಿಡಿಯೊದಲ್ಲಿ ಅಳಲು ತೋಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ. ಶ್ರೀನಿವಾಸ ರಾವ್ ಅವರು ಡೆತ್‌ನೋಟ್ ಬರೆದಿದ್ದು, ಸಾವಿಗೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿ ರಾಜಮೌಳಿ ವಿರುದ್ಧ ಪೊಲೀಸರಿಗೆ ಸುಮೋಟೋ ಕೇಸ್ ದಾಖಲಿಸಿಕೊಳ್ಳಲು ಮನವಿ ಮಾಡಿದ್ದಾರೆ.
ರಾಜಮೌಳಿ, ಶ್ರೀನಿವಾಸ್ ರಾವ್ 34 ವರ್ಷಗಳಿಂದ ಸ್ನೇಹಿತರಾಗಿದ್ದರು. ಯಮದಂಗಾ ಸಿನಿಮಾದ ನಿರ್ಮಾಪಕರಾಗಿರುವ ಶ್ರೀನಿವಾಸ್ ರಾವ್ ಇದೀಗ ರಾಜಮೌಳಿ ವಿರುದ್ಧ ಆರೋಪ ಮಾಡಿದ್ದಾರೆ. ವಿಡಿಯೋದಲ್ಲಿ ಅವರು ರಾಜಮೌಳಿ ನನಗೆ ಚಿತ್ರಹಿಂಸೆ ಮತ್ತು ಕಿರುಕುಳ ನೀಡಿದ್ದಾರೆ. ನನಗೆ ನರಕ ಎಂದರೆ ಏನು ಎಂಬುದುನ್ನು ತೋರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ರಾಜಮೌಳಿ ಮಾನಸಿಕ ಕಿರುಕುಳ ನೀಡಿದ್ದಾರೆ ಮತ್ತು ನಮ್ಮ ನಡುವಿನ ಬಿರುಕಿಗೆ ಮಹಿಳೆಯೊಬ್ಬರು ಕಾರಣ ಎಂದು ಅವರು ಹೇಳಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳದೆ ನನಗೆ ಬೇರೆ ದಾರಿಯಿಲ್ಲ. ನಾನು 55 ವರ್ಷ ವಯಸ್ಸಿನಲ್ಲೂ ಒಂಟಿಯಾಗಿರಲು ರಾಜಮೌಳಿಯೇ ಕಾರಣ. ಯಮಡೊಂಗ ಸಿನಿಮಾದವರೆಗೂ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಆದರೆ ಅವನು ಒಬ್ಬ ಮಹಿಳೆಗಾಗಿ ನನ್ನ ವೃತ್ತಿಜೀವನವನ್ನು ಹಾಳುಮಾಡಿದನು ಎಂದು ಬರೆದು ಆತ್ಮಹತ್ಯೆ ಪತ್ರವನ್ನು ಬರೆದಿದ್ದಾರೆ.
55 ವರ್ಷದ ಅವರು ತಮ್ಮ ಮತ್ತು ರಾಜಮೌಳಿ ನಡುವೆ 34 ವರ್ಷಗಳ ಸ್ನೇಹವಿತ್ತು ಎಂದು ಹೇಳಿಕೊಂಡರು, ಆದರೆ ತ್ರಿಕೋನ ಪ್ರೇಮದಿಂದಾಗಿ ಅವರ ಬಾಂಧವ್ಯದಲ್ಲಿ ಬಿರುಕು ಮೂಡಿತು. ನಮ್ಮದು ಒಂದು ರೀತಿ ತ್ರಿಕೋನ ಪ್ರೇಮ ಕಥೆ ಆಗಿತ್ತು ರಾಜಮೌಳಿ ನನಗೆ ನಿನ್ನ ಪ್ರೀತಿಯನ್ನು ತ್ಯಾಗ ಮಾಡು ಎಂದು ಹೇಳಿದ. ನಾನು ನನ್ನ ಪ್ರೀತಿಯನ್ನು ತ್ಯಾಗ ಮಾಡಿದೆ. ನಾವು ಆಗ ವೃತ್ತಿ ಜೀವನದ ಆರಂಭದಲ್ಲಿದ್ದೆ. ಆತ ಆನಂತರ ನಂಬರ್ 1 ಡೈರೆಕ್ಟರ್ ಆದ ಮತ್ತು ನನಗೆ ಕಿರುಕುಳ ಕೊಡಲು ಆರಂಭಿಸಿದ. ನಾನು ನನ್ನ ಪ್ರೀತಿಯನ್ನು ತ್ಯಾಗ ಮಾಡಿದ್ದಕ್ಕಾಗಿ ಆತನಿಂದ ಕಿರುಕುಳ ಅನುಭವಿಸಿದೆ. ನಾನು ಯುವಕರಿಗೆ ಕಿವಿ ಮಾತು ಹೇಳುತ್ತೇನೆ. ಮಹಿಳೆಯ ಹಿಂದೆ ಹೋಗಬೇಡಿ ಮೊದಲು ವೃತ್ತಿಬದುಕನ್ನು ಕಟ್ಟಿಕೊಳ್ಳಿ ಎಂದು ಶ್ರೀನಿವಾಸ ರಾವ್ ಹೇಳಿಕೊಂಡಿದ್ದಾರೆ.
Star Director #SSRajamouli in Big controversy
— Milagro Movies (@MilagroMovies) February 27, 2025
వివాదంలో స్టార్ డైరెక్టర్ ఎస్.ఎస్. రాజమౌళిpic.twitter.com/Jw7PhoqFEg
ಈ ಸುದ್ದಿಯನ್ನೂ ಓದಿ : Thalapathy 69: ಕಾಲಿವುಡ್ ಸ್ಟಾರ್ ವಿಜಯ್ ಅಭಿನಯದ 'ದಳಪತಿ 69' ಟಾಲಿವುಡ್ ಚಿತ್ರದ ರಿಮೇಕ್? ಯಾವುದು ಆ ಸಿನಿಮಾ?
ಸದ್ಯ ವೈರಲ್ ಆದ ಈ ವಿಡಿಯೋ ಬಗ್ಗೆ ರಾಜಮೌಳಿ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಏನು ಹೇಳುತ್ತಾರೆ ಎಂದು ಕಾದು ನೋಡಬೇಕು.