ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದ ಸೂರ್ಯ ನಟನೆಯ ʻಕರುಪ್ಪುʼ ಸಿನಿಮಾ; ಕರುನಾಡಿನಲ್ಲಿ 9 ದಿನಕ್ಕೆ ಆದ ಗಳಿಕೆ ಎಷ್ಟು?

ನಟ ಸೂರ್ಯ ಮತ್ತು ತ್ರಿಷಾ ಕೃಷ್ಣನ್ ಅಭಿನಯದ 'ಕರುಪ್ಪು' ಸಿನಿಮಾ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಕೇವಲ 9 ದಿನಗಳಲ್ಲಿ ಬರೋಬ್ಬರಿ 217.74 ಕೋಟಿ ರೂಪಾಯಿ ಗಳಿಸಿ ಭರ್ಜರಿ ಇತಿಹಾಸ ಸೃಷ್ಟಿಸಿದೆ. ಆರ್‌ಜೆ ಬಾಲಾಜಿ ನಿರ್ದೇಶನದ ಈ ಫ್ಯಾಂಟಸಿ ಆ್ಯಕ್ಷನ್ ಡ್ರಾಮಾ ಕರ್ನಾಟಕದಲ್ಲೂ ಭಾರಿ ಸಂಚಲನ ಮೂಡಿಸಿದ್ದು, ದಾಖಲೆ ಪ್ರಮಾಣದ ಹಣವನ್ನು ಬಾಚಿಕೊಂಡಿದೆ.

ಬಾಕ್ಸ್ ಆಫೀಸ್‌ನಲ್ಲಿ Karuppu ಹವಾ; ಕರ್ನಾಟಕದಲ್ಲಿ ಆದ ಗಳಿಕೆ ಎಷ್ಟು?‌

-

Avinash GR
Avinash GR May 24, 2026 7:31 PM

ಸೂರ್ಯ ನಟನೆಯ 'ಕರುಪ್ಪು' ಸಿನಿಮಾ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಒಟ್ಟು ದಿನವು ಭಾರತದಲ್ಲಿ 12.20 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ. ಇದು 8ನೇ ದಿನಕ್ಕೆ ಹೋಲಿಸಿದರೆ, ಕಲೆಕ್ಷನ್‌ಲ್ಲಿ (7.80 ಕೋಟಿ ರೂ.) ಚೇತರಿಕೆ ಕಂಡು ಬಂದಿದೆ.

'ಸ್ಯಾಕ್ನಿಲ್ಕ್' ವರದಿ ಪ್ರಕಾರ, ಈ ಸಿನಿಮಾವು ಈವರೆಗೂ ವಿಶ್ವಾದ್ಯಂತ 217.74 ಕೋಟಿ ರೂಪಾಯಿ ಗಳಿಸಿದ್ದು, 250 ಕೋಟಿ ರೂ. ಕ್ಲಬ್‌ ಸೇರುವತ್ತ ದಾಪುಗಾಲಿಟ್ಟಿದೆ. ಎರಡನವೇ ವಾರದ ಮುಕ್ತಾಯದ ವೇಳೆಗೆ ಈ ದಾಖಲೆ ಸೃಷ್ಟಿಯಾಗುವುದು ಖಚಿತ ಎನ್ನಲಾಗಿದೆ.

Trisha Krishnan: ಕರುಪ್ಪು ಯಶಸ್ಸಿನ ಬೆನ್ನಲ್ಲೇ ತ್ರಿಷಾ ಹೊಸ ಪೋಸ್ಟ್‌! ವಿಜಯ್‌ ಚರ್ಚೆ ಏಕೀಗ?

ಕಡಿಮೆ ಆಗದ ಕರುಪ್ಪು ಹವಾ

9 ದಿನವೂ ಭಾರತದಲ್ಲಿ 12+ ಕೋಟಿ ರೂ. ಹರಿದುಬಂದಿರುವುದು ನಿರ್ಮಾಪಕರಿಗೆ ಮೊಗದಲ್ಲಿ ಖುಷಿ ತಂದಿದೆ. ಆಕ್ಯುಪನ್ಸಿ ಕೂಡ ಉತ್ತಮವಾಗಿದ್ದು, ಪ್ರೇಕ್ಷಕರನ್ನು ಸೆಳೆಯುವಲ್ಲಿ ಈ ಸಿನಿಮಾ ಗೆದ್ದಿದೆ. ಆರ್.ಜೆ. ಬಾಲಾಜಿ ನಿರ್ದೇಶನದ 'ಕರುಪ್ಪು' ಚಿತ್ರದಲ್ಲಿ ನಟ ಸೂರ್ಯ ಅವರು ಕರುಪ್ಪುಸಾಮಿ ಅವತಾರದಲ್ಲಿ ಮಿಂಚಿದ್ದು, ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ನಾಯಕಿಯಾಗಿ ತ್ರಿಷಾ ಕೃಷ್ಣನ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಗೆಲುವಿನಲ್ಲಿ ಸಾಯಿ ಅಭ್ಯಂಕರ್‌ ಅವರ ಸಂಗೀತ ದೊಡ್ಡ ಪ್ಲಸ್‌ ಎಂದು ಹೇಳಲಾಗುತ್ತಿದೆ.

ಡ್ರೀಮ್‌ ವಾರಿಯರ್‌ ಪಿಕ್ಚರ್ಸ್‌ ಸಂಸ್ಥೆಗೆ ಕರುಪ್ಪು ಸಿನಿಮಾವು ದೊಡ್ಡ ಬಲ ತಂದುಕೊಟ್ಟಿದೆ. ಈಚೆಗೆ ಈ ಬ್ಯಾನರ್‌ನಿಂದ ಬಂದ ಸಿನಿಮಾಗಳು ಸಾಧಾರಣ ಯಶಸ್ಸನ್ನು ಸಾಧಿಸಿದ್ದವು. ಆದರೆ ಕರುಪ್ಪು ಬ್ಲಾಕ್‌ ಬಸ್ಟರ್‌ ಆಗಿದೆ. ಅತ್ತ ಸೂರ್ಯ ಅವರಿಗೂ ಕರುಪ್ಪು ದೊಡ್ಡ ಬ್ರೇಕ್‌ ನೀಡಿದೆ.

ಕರುಪ್ಪು ಸಿನಿಮಾ



ಕರ್ನಾಟಕದಲ್ಲಿಯೂ ಭಾರಿ ಗಳಿಕೆ

ಕರ್ನಾಟಕದಲ್ಲಿ ಕರುಪ್ಪು ಸಿನಿಮಾದ ತಮಿಳು ವರ್ಷನ್‌ಗೆ ಭಾರಿ ರೆಸ್ಪಾನ್ಸ್‌ ಸಿಕ್ಕಿದೆ. ಎರಡನೇ ವಾರಾಂತ್ಯದಲ್ಲೂ ತನ್ನ ಅಬ್ಬರ ಮುಂದುವರಿಸಿರುವ ಈ ಸಿನಿಮಾವು ಕರುನಾಡಿನಲ್ಲಿ ‘ಮೆಗಾ ಬ್ಲಾಕ್‌ಬಸ್ಟರ್’ ಆಗಿ ಹೊರಹೊಮ್ಮುವತ್ತ ದಾಪುಗಾಲು ಇಡುತ್ತಿದೆ. ಬಿಡುಗಡೆಯಾದ ಮೊದಲ ವಾರದಲ್ಲಿ 15.02 ಕೋಟಿ ಗಳಿಸಿದ್ದ ಈ ಸಸಿನಿಮಾವು. 8ನೇ ದಿನ 81 ಲಕ್ಷ ರೂ. ಗಳಿಸಿತ್ತು. ಆದರೆ. 9ನೇ ದಿನವಾದ ಶನಿವಾರ ಭರ್ಜರಿ ಚೇತರಿಕೆ ಕಂಡು 1.70 ಕೋಟಿ ಲೂಟಿ ಮಾಡಿದೆ. ಇದರೊಂದಿಗೆ ಕೇವಲ 9 ದಿನಗಳಲ್ಲಿ ಕರ್ನಾಟಕ ಒಂದರಲ್ಲೇ ಒಟ್ಟು 17.53 ಕೋಟಿ ರೂಪಾಯಿ ಕಲೆಕ್ಷನ್‌ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಅಲೆ ಸೃಷ್ಟಿಸಿದೆ.