Monday, 15th August 2022

ಪ್ರಧಾನಿ ಮೋದಿ ಹೆಸರಲ್ಲಿ ಮೃತ್ಯುಂಜಯ ಪಾರಾಯಣ

ಹೊಸಪೇಟೆ: ಪಂಜಾಬ್ ನಲ್ಲಿ ಪ್ರಾಣಾಪಾಯದಿಂದ ಪಾರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ನಗರದ ಮೃತ್ಯುಂಜಯ ನಗರದ ಶ್ರೀಮೃತ್ಯುಂಜೇಶ್ವರ ದೇವಸ್ಥಾನದಲ್ಲಿ ಸೋಮವಾರ ಮೃತ್ಯುಂಜಯ ಜಪ ಪಾರಾಯಣ ನಡೆಯಿತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆರೋಗ್ಯ ನಿಮಿತ್ತ ಮೃತ್ಯುಂಜಯ ಜಪವನ್ನು ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಪಾರಾಯಣ ನಡೆಸುವ ಮೂಲಕ ಸದೃಢ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದರು. ದೇವಸ್ಥಾನದ ಅರ್ಚಕ ಪವನ್ ಜೋಶಿ ಮೃತ್ಯುಂಜಯ ಜಪ, ಅಭಿಷೇಕ ನಡೆಸಿಕೊಟ್ಟರು.

ನಗರಸಭೆ ಮಾಜಿ ಸದಸ್ಯ ಚಂದ್ರಕಾಂತ್ ಕಾಮತ್ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಶ್ರೀ ಮೃತ್ಯುಂಜೇಶ್ವರ ಭಜನಾ ಮಂಡಳಿ ಪ್ರಮುಖರಾದ ಪಾರ್ವತಮ್ಮ, ಗಾಯತ್ರಿ, ಸುಧಾ, ಭಾಗ್ಯ, ರೇಣುಕಾ, ಸುಜಾತಾ ಹಾಗೂ ಸ್ಥಳೀಯ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಮೋದಿ ಅಭಿಮಾನಿಗಳು ಇದ್ದರು.