Saturday, 21st May 2022

ಯಾದಗಿರಿ ನಗರಸಭೆ ಉಪ ಚುನಾವಣೆ: ಮಂದ ಮತದಾನ

ಯಾದಗಿರಿ: ಜೆಡಿಎಸ್ ಸದಸ್ಯೆ ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಸೋಮವಾರ ಉಪ ಚುನಾವಣೆ ನಡೆಯುತ್ತಿದೆ.

ನಗರದ ಅಸರ್ ಮೊಹಲ್ಲಾದ ಶ್ರೀ ಸಾಯಿ ಶಾಲೆಯಲ್ಲಿ ಮತದಾನ ನಡೆಯುತ್ತಿದೆ. ಹೋಳಿ ಹಬ್ಬದ ಆಚರಣೆಯಿಂದ ಮತದಾರರು ನಿರೀಕ್ಷೆಯಂತೆ ಮತಗಟ್ಟೆ ಕೇಂದ್ರಗಳಿಗೆ ಆಗಮಿಸುತ್ತಿಲ್ಲ.

ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಅಭ್ಯರ್ಥಿ ಮಧ್ಯೆ ತ್ರಿಕೋನ ಸ್ಪರ್ಧೆ ನಡೆದಿದೆ. ವಾರ್ಡ್ ನಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಮತದಾರರಿದ್ದಾರೆ. ಆಯಾ ಪಕ್ಷದ ಮುಖಂಡರ ಮತಗಟ್ಟೆ ಹೊರಗಡೆ ಕುಳಿತು ಮತದಾರರನ್ನು ಮನವೊಲಿ ಸುವ ಕೆಲಸ ಮಾಡುತ್ತಿದ್ದಾರೆ. ಮಾ.31 ಕ್ಕೆ ಫಲಿತಾಂಶ ಘೋಷಣೆಯಾಗಲಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily