ಶಿರಸಿ: ಉತ್ತರಕನ್ನಡದ ಭಟ್ಕಳದಲ್ಲಿ ಸಾರ್ವಜನಿಕರನ್ನು ಅವಾಚ್ಯವಾಗಿ ನಿಂದಿಸಿ ಅಪ್ರಾಪ್ತ ಮುಸ್ಲಿಂ ಯುವಕರು ಮೊಟ್ಟೆ ಎಸೆದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಭಟ್ಕಳದ ಬಂದರು ಪ್ರದೇಶದ ನಿವಾಸಿಗಳಾದ ಸುಮಾರು 17 ವರ್ಷ ಪ್ರಾಯದ 6 ಮಂದಿ ಯುವಕರಿಂದ ಕೃತ್ಯ ನಡೆದಿದೆ ಎನ್ನಲಾಗಿದೆ. ಮೂರು ಪ್ರತ್ಯೇಕ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬಂದು ಯುವಕರಿಂದ ಈ ಕೃತ್ಯ ನಡೆದಿದ್ದು, ಭಟ್ಕಳ ಪುರವರ್ಗದ ಮಂಜುನಾಥ್ (29) ಹಾಗೂ ಹನುಮಾನ್ ನಗರದ ಕೃಷ್ಣ (50) ಎಂಬವರ ಮೇಲೆ ಮೊಟ್ಟೆ ಎಸೆದಿದ್ದಾರೆ.
ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ವೇಳೆ ಜನರ ಕೈಗೆ ಓರ್ವ ಅಪ್ರಾಪ್ತ ಹುಡುಗ ಸಿಕ್ಕಿದ್ದಾನೆ. ಯುವಕನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೂವರು ಯುವಕ ರನ್ನು ಭಟ್ಕಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಟ್ಕಳ ಪೊಲೀಸರು ಪಿಯುಸಿ ಪರೀಕ್ಷೆ ಬಳಿಕ ಉಳಿದ ಮೂವರನ್ನು ವಶಕ್ಕೆ ಪಡೆಯಲಿದ್ದಾರೆ. ಈ ಕೃತ್ಯದ ಹಿಂದೆ ಯುವಕರ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ.