Tuesday, 17th May 2022

ಆಸ್ಪತ್ರೆಗೆ ಪೂರ್ಣ ಪ್ರಮಾಣದಲ್ಲಿ ವೈದ್ಯರ ನೇಮಕ ಮಾಡಿ: ಎನ್.ಎಸ್.ಬೋಸ್ ರಾಜು

ಮಾನ್ವಿ: ಕಾಂಗ್ರೇಸ್ ಪಕ್ಷದ ಅವಧಿಯಲ್ಲಿ ೧೧ಕೋಟಿ ವೆಚ್ಚದಲ್ಲಿ ಮಂಜೂರಾಗಿದ್ದ ಆಸ್ಪತ್ರೆ ಇಂದು ಪೂರ್ಣ ಗೊಂಡಿದ್ದು ಮಾಜಿ ಶಾಸಕ ಹಂಪಯ್ಯ ಸಾಹುಕಾರ ಅವರ ಶ್ರಮದ ಫಲವಾಗಿದ್ದು ನಾಳೆ ಪಟ್ಟಣದಲ್ಲಿ ಉದ್ಘಾಟನೆ ಅಗುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಪೂರ್ಣ ಪ್ರಮಾಣದಲ್ಲಿ ವೈದ್ಯರ ನೇಮಕ ಹಾಗೂ ವೈದ್ಯಕೀಯ ಸಲಕರಣೆಗಳನ್ನು ಸರಕಾರದಿಂದ ನೀಡದೆ ಇರುವುದರಿಂದ ಜನರಿಗೆ ಅಗತ್ಯವಾದ ಸೇವೆ ಸಿಗುವುದಕ್ಕೆ ಅಗುವುದಿಲ್ಲ ಎಂದು ಆಸ್ಪತ್ರೆಯ ಪಾರ್ಮಾಸಿ ಅಧಿಕಾರಿ ಬಸವರಾಜ ರವರಿಗೆ ಎ.ಐ.ಸಿ.ಸಿ. ಪ್ರಧಾನ ಕಾರ್ಯದÀರ್ಶಿ ಎನ್,ಎಸ್.ಬೋಸ್ ರಾಜು ತಿಳಿಸಿದರು.

ಪಟ್ಟಣದ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿನ ವೈದ್ಯರನ್ನು,ಸಿಬ್ಬಂದಿಯನ್ನು ನೂತನ ಆಸ್ಪತ್ರೆಗೆ ನಿಯೋಜಿಸುವುದರಿಂದ ಎರಡು ಆಸ್ಪತ್ರೆ ಗಳಲ್ಲಿ ವೈದ್ಯರ ಕೊರತೆಯುಂಟಾಗುತ್ತದೆ ಅದರಿಂದ ನೂತನ ಆಸ್ಪತ್ರೆಗೆ ಪ್ರತ್ಯೇಕÀವಾದ ವೈದ್ಯರನ್ನು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ತಿಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷದ ಅವಧಿಯಲ್ಲಿ ತಾಲ್ಲೂಕಿನ ಜನರಿಗೆ ಅಗತ್ಯವಿರುವ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು ೨೦೧೭ ರಲ್ಲಿ ಮಂಜೂರಾದ ಅನೇಕ ಯೋಜನೆಗಳನ್ನು ಇಂದಿನ ಸರಕಾರದಿಂದ ಹಾಗೂ ಅವುಗಳನ್ನು ಪೂರ್ಣಗೋಳಿಸಲು ಇಂದಿನ ಶಾಸಕರಿಗೆ ಅಗುತ್ತಿಲ್ಲ ಅದರಿಂದ ತಾಲ್ಲೂಕಿನ ಅಭಿವೃದ್ದಿ ಕುಂಟಿತವಾಗಿದೆ ಪಟ್ಟಣದ ನೀರಾವರಿ ಕಚೇರಿ ಆವರಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳ ಗುರುತಿಸಿ ಕಟ್ಟಡ ನಿರ್ಮಾಣಕ್ಕೆ ಕುಮಾರ ಸ್ವಾಮಿಯವರು ಮುಖ್ಯಮಂತ್ರಿ ಯವರಾಗಿದ್ದಾಗ ೮೦ಲಕ್ಷ ಮಂಜೂರು ಮಾಡುವುದಾಗಿ ನೀಡಿದ ಭರವಸೆ ಪೂರೈಸಿಲ್ಲ.

ಒಳಾಂಗಣ ಕ್ರೀಡಾಂಗಣ, ಟೌನ್‌ಹಾಲ್, ನಗರ ಯೋಜನ ಪ್ರಾಧಿಕಾರ ಕಟ್ಟಡ,ನೂತನ ಬಸ್ ಡಿಪೋ,ವಿದ್ಯಾರ್ಥಿಗಳ ವಸತಿ ನಿಲಯಗಳು ಪೂರ್ಣವಾಗಿದ್ದರು ಅವುಗಳಿಗೆ ಅಗತ್ಯವಿರುವ ಸಾಮಾಗ್ರಿಗಳ ಪೂರೈಕೆ ಮಾಡದೆ ಇರುವುದರಿಂದ ಕೋಟ್ಯಾಂತರ ಅನುದಾನವನ್ನು ತಂದು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡರು ಜನರಿಗೆ ಅವುಗಳ ಬಳಕೆಗೆ ಸಾಧÀ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ಮಾಜಿ ಶಾಸಕ ಹಂಪಯ್ಯ ಸಾಹುಕರ, ಪುರಸಭೆ ಉಪಾಧ್ಯಕ್ಷ ಸುಕುಮುನಿ, ವಸಂತನಾಯಕ,ಗಫೂರ್ ಸಾಬ್,ದೊಡ್ಡಬಸಪ್ಪ ಗೌಡ,ಮಹಂತೇಶ ಸ್ವಾಮಿ,ಶೇಖ ಫರೀದ್ ಉಮರಿ, ಬಾಲಸ್ವಾಮಿ ಕೊಡ್ಲೆ,ರೇವಣಸಿದ್ದಯ್ಯ ಸ್ವಾಮಿ, ಸೇರಿದಂತೆ ಇನ್ನಿತರರು ಇದ್ದರು.