Tuesday, 9th August 2022

ಮಾಜಿ ಪ್ರಧಾನಿ ದೇವೇಗೌಡರ ಮರಿಮೊಮ್ಮಗನ ನಾಮಕರಣ

ಬೆಂಗಳೂರು : ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಮೊಮ್ಮಗನ ನಾಮಕರಣ ಶಾಸ್ತ್ರ ಅದ್ದೂರಿಯಾಗಿ ನೆರವೇರಿದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ʼಅಮ್ಯಾನ್‌ ದೇವ್‌ ಎಂದು ನಿಖಿಲ್‌ ಪುತ್ರನಿಗೆ ಹೆಸರಿಟ್ಟು ಆರ್ಶಿರ್ವದಿಸಿದರು.

2021ರ ಸೆಪ್ಟೆಂಬರ್‌ 24ರಂದು ನಿಖಿಲ್‌ ಕುಮರಸ್ವಾಮಿ ಮತ್ತು ರೇವತಿ ದಂಪತಿಗೆ ಗಂಡು ಮಗು ಜನಿಸಿತ್ತು. ಇದೀಗ ಪುಟ್ಟ ಕಂದನಿಗೆ ಕುಟುಂಬಸ್ಥರು ನಾಮಕರಣ ಶಾಸ್ತ್ರ ಮಾಡುವ ಮೂಲಕ ಹೆಸರಿಟ್ಟಿದ್ದಾರೆ.

ಬೆಂಗಳೂರು ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬುಧವಾರ ಕುಮಾರ ಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ದೇವೇಗೌಡರ ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಕಾರ್ಯಕ್ರಮ ನೆರವೇರಿತು.