Friday, 30th September 2022

ಇಂದಿನಿಂದ ರಾತ್ರಿ 10 ಗಂಟೆಯವರೆಗೆ ನಮ್ಮ ಮೆಟ್ರೋ ಸಂಚಾರ

ಬೆಂಗಳೂರು : ಇಂದಿನಿಂದ ನಮ್ಮ ಮೆಟ್ರೋ ಸಂಚಾರ ರಾತ್ರಿ 10 ಗಂಟೆಯವರೆಗೆ ವಿಸ್ತರಣೆ ಮಾಡಿ ಬಿಎಂಆರ್ಸಿಎಲ್ ಆದೇಶಿಸಿದೆ.

ಬಿಎಂಆರ್ ಸಿ ಎಲ್ ಆದೇಶ ಹೊರಡಿಸಿದ್ದು, ನಗರದಲ್ಲಿ ಮೆಟ್ರೋ ರೈಲು ಸಂಚಾರ ಸೇವೆಯು ಸೆ.18ರ ಶನಿವಾರದಿಂದ ರಾತ್ರಿ 10ರವರೆಗೆ ಇರಲಿದೆ ಎಂಬುದಾಗಿ ತಿಳಿಸಿದೆ. ಮೆಜೆಸ್ಟಿಕ್ ನ ಕೆಂಪೇಗೌಡ ಮೆಟ್ರೋ ನಿಲ್ದಾಣ, ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳಿಂದ ರಾತ್ರಿ 9.30ಕ್ಕೆ ಕೊನೆಯ ಮೆಟ್ರೋ ರೈಲು ಹೊರಡಲಿದೆ.

ಬೆಳಿಗ್ಗೆ 7ರ ಬದಲಾಗಿ 6 ಗಂಟೆಯಿಂದಲೇ ಮೆಟ್ರೋ ರೈಲು ಸೇವೆ ಆರಂಭಗೊಳ್ಳಲಿದೆ. ರಾತ್ರಿ 9 ಗಂಟೆಗೆ ಕೊನೆಗೊಳ್ಳುತ್ತಿದ್ದಂತ ಮೆಟ್ರೋ ರೈಲು ಸಂಚಾರ ರಾತ್ರಿ 10ರವರೆಗೆ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ.