Monday, 16th May 2022

ನಂದಿಬೆಟ್ಟ ವೀಕೆಂಡ್‌ನಲ್ಲಿ ಲಾಕ್‌ !

ಚಿಕ್ಕಬಳ್ಳಾಪುರ: ಕರೋನಾ ಸೋಂಕಿನ ಭೀತಿ ಮರೆತು ಸಾವಿರಾರು ಮಂದಿ ಒಮ್ಮೆಲೆ ನಂದಿ ಬೆಟ್ಟಕ್ಕೆ ಭೇಟಿ ಕೊಟ್ಟದ್ದು, ಸಾಮಾಜಿಕ ಅಂತರ, ಮಾಸ್ಕ್​ ಧರಿಸು ವಿಕೆ ನಿಯಮವನ್ನು ಹಲವರು ಪಾಲಿಸದಿರುವುದು ಕರೋನಾ ಸೋಂಕು ಹೆಚ್ಚಳದ ಭೀತಿಯನ್ನು ಮೂಡಿಸಿದೆ. ಹಾಗಾಗಿ, ಇದಕ್ಕೆ ಬ್ರೇಕ್​ ಹಾಕಲು ಅಪರ ಜಿಲ್ಲಾಧಿ ಕಾರಿ ಎಚ್.ಅಮರೇಶ್ ಅವರು, ಶನಿವಾರ ಮತ್ತು ಭಾನುವಾರ ನಂದಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಅನ್​ಲಾಕ್​ ಶುರುವಾಗುತ್ತಿದ್ದಂತೆ ನಂದಿಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಸೋಂಕನ್ನು ಲೆಕ್ಕಿಸದೆ ಲಗ್ಗೆ ಇಟ್ಟಿದ್ದರು. ಕಳೆದ ಶನಿವಾರ ಮತ್ತು ಭಾನುವಾರ ನಂದಿ ಗಿರಿಧಾಮ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಸೂರ್ಯೋದಯಕ್ಕೂ ಮುನ್ನವೇ ನೂರಾರು ಬೈಕ್ ಮತ್ತು ಕಾರಿನಲ್ಲಿ ನಂದಿ ಹಿಲ್ಸ್​ಗೆ ನಾ ಮುಂದು, ತಾ ಮುಂದು ಎಂಬಂತೆ ಬಂದಿದ್ದರು.

ಮುಂದಿನ ಆದೇಶದವರೆಗೂ ಪ್ರತಿ ಶುಕ್ರವಾರ ಸಂಜೆ 6 ರಿಂದ ಸೋಮವಾರ ಬೆಳಗ್ಗೆ 6ರ ವರೆಗೆ ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧ ಹೇರಲಾಗಿದೆ. ವೀಕೆಂಡ್ ಡೇ ಹೊರತುಪಡಿಸಿದಂತೆ ಉಳಿದ ದಿನಗಳಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.