ಕೃಷ್ಣರಾಜಪೇಟೆ ತಾಲ್ಲೂಕಿನ ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೇ ಪ್ರಗತಿಪರ ರೈತ ಭದ್ರೇಗೌಡ ನೇಣಿಗೆ ಶರಣು…
ದೊಡ್ಡಸೋಮನಹಳ್ಳಿ ಗ್ರಾಮದ ದಿ.ಈರೇಗೌಡರ ಮಗನಾದ ಭದ್ರೇಗೌಡ ಪತ್ನಿ ಮಮತಾ, ಪುತ್ರ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ… ತನ್ನ ತೋಟದ ತೇಗದ ಮರಕ್ಕೆ ಹಗ್ಗ ಕಟ್ಟಿಕೊಂಡು ನೇಣಿಗೆ ಶರಣಾಗಿದ್ದಾರೆ.. ಶಾಸಕ ಡಾ.ನಾರಾಯಣಗೌಡ ದೊಡ್ಡಸೋಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಾಲಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾದ ರೈತ ಭದ್ರೇಗೌಡರ ಕುಟುಂಬಕ್ಕೆ ಸಾಂತ್ವನ ಹೇಳಿದರು….ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಸ್.ಶ್ರೀಧರ್, ಮುಖಂಡರಾದ ಶಾಮಣ್ಣ, ನಾಗೇಶ್, ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು…
ಮೃತ ಭದ್ರೇಗೌಡ ಅಘಲಯ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ 70ಸಾವಿರ ಬೆಳೆಸಾಲ ಸೇರಿದಂತೆ 4ಲಕ್ಷ ರೂಗಳಿಗೂ ಹೆಚ್ಚಿನ ಕೈಸಾಲ ಮಾಡಿಕೊಂಡಿದ್ದರು…ಅಂತರ್ಜಲ ವಿಫಲವಾಗಿ ಕೊಳವೆ ಬಾವಿಯಲ್ಲಿ ನೀರಿಲ್ಲದ ಕಾರಣ ಬೆಳೆಗಳು ಒಣಗಿದ್ದವು…ಸ್ವಾಭಿಮಾನಿಯಾಗಿದ್ದ ಭದ್ರೇಗೌಡ ಸಾಲಗಾರರ ಕಾಟವನ್ನು ತಾಳಲಾರದೇ ಇಂದು ಮುಂಜಾನೆ ತನ್ನ ಜಮೀನಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಬಗ್ಗೆ ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…