Wednesday, 1st February 2023

ನಾರಾಯಣಗೌಡ-ವಿಜಯೇಂದ್ರ ಜೋಡೆತ್ತುಗಳು

ಮಂಡ್ಯ: ಉಪಚುನಾವಣಾ ಕಣದಲ್ಲಿ ಕೆ.ಆರ್.ಪೇಟೆ ಕ್ಷೇತ್ರ ಹೈವೋಲ್ಟೇಜ್ ಕಣವಾಗಿದೆ. ಪ್ರತಿಷ್ಠೆೆಯ ಕಣವಾಗಿರುವ ಕೆ.ಆರ್.ಪೇಟೆಯಲ್ಲಿ ಕಾಂಗ್ರೆೆಸ್ ವಿರುದ್ಧ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಸ್ಪರ್ಧೆಗಿಳಿದಿದ್ದಾರೆ. ಚುನಾವಣಾ ಪ್ರಚಾರವೂ ಭರದಿಂದ ಸಾಗಿದೆ. ಶನಿವಾರ ಬಿಜೆಪಿ ರಾಜ್ಯಾಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಈ ವೇಳೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮತ್ತು ಬಿಎಸ್‌ವೈ ಪುತ್ರ ವಿಜಯೇಂದ್ರರನ್ನು ಜೋಡೆತ್ತಿಿಗೆ ಹೋಲಿಸಿ ಹೊಗಳಿದ್ದಾರೆ.
‘ನಾರಾಯಣಗೌಡ ಮತ್ತು ವಿಜಯೇಂದ್ರ ಜೋಡೆತ್ತುಗಳು. ಈ ಜೋಡೆತ್ತುಗಳ ನೇತೃತ್ವದಲ್ಲಿ ಕ್ಷೇತ್ರ ಅಭಿವೃದ್ಧಿಿ ಆಗುತ್ತದೆ. ಜೋಡೆತ್ತುಗಳನ್ನು ಕೆ.ಆರ್.ಪೇಟೆ ಜನ ಕೈ ಬಿಡಬೇಡಿ’ ಎಂದು ಕಟೀಲ್ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಇದೇ ವೇಳೆ, ಸಿಎಂ ಬಿ.ಎಸ್.ಯಡಿಯೂರಪ್ಪನವರನ್ನು ನಳಿನ್ ಕುಮಾರ್ ಕಟೀಲ್ ಹಾಡಿ ಹೊಗಳಿದ್ದಾರೆ. ಕೇಳಿದ್ದನ್ನು ಕೊಡುವ ಕಾಮಧೇನು ಯಡಿಯೂರಪ್ಪ. ಜನರಿಗೆ ಭಾಗ್ಯಲಕ್ಷ್ಮಿಿಯಂಥ ಹಲವು ಯೋಜನೆಗಳನ್ನು ಕೊಟ್ಟಿಿದ್ದಾರೆ. ಭಾಗ್ಯಲಕ್ಷ್ಮೀ ಯೋಜನೆ ಜತೆಗೆ, ವಿದ್ಯಾಾರ್ಥಿನಿಯರಿಗೆ ಸೈಕಲ್, ವೃದ್ಧರಿಗೆ, ವಿಧವೆಯರಿಗೆ ಮಾಸಾಶನ ಕೊಟ್ಟಿಿದ್ದು ಯಡಿಯೂರಪ್ಪ ಎಂದರು.

ಯಡಿಯೂರಪ್ಪರನ್ನ ಕೊಟ್ಟ ನೆಲ ಇದು
ಕೆ.ಆರ್.ಪೇಟೆ ಒಂದು ಪುಣ್ಯ ಭೂಮಿ. ಯಡಿಯೂರಪ್ಪ ಅವರಿಗೆ ಜನ್ಮ ಕೊಟ್ಟ ಪುಣ್ಯ ಭೂಮಿ ಇದು. ರಾಜ್ಯದ ಸಮರ್ಥ ನಾಯಕನನ್ನು, ರಾಜ್ಯವನ್ನು ದೇಶದಲ್ಲೇ ಮಾದರಿ ಮಾಡಲು ಪಣ ತೊಟ್ಟಿಿರುವ ಬಸವಣ್ಣನ ಅನುಯಾಯಿ ಯಡಿಯೂರಪ್ಪರನ್ನ ಕೊಟ್ಟ ನೆಲ ಇದು. ನಾಡಿನ ಸ್ವಾಾಭಿಮಾನಕ್ಕಾಾಗಿ ಅಧಿಕಾರ ತ್ಯಾಾಗ ಮಾಡಿದ ನಾರಾಯಣಗೌಡರ ಭೂಮಿ ಇದು. ಯಡಿಯೂರಪ್ಪ ಅವರ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿಗೆ ಮತ ನೀಡಿ. ನಿಮ್ಮ ಪುಣ್ಯ ಭೂಮಿಯ ಸ್ವಾಾಭಿಮಾನದ ಉಳಿವಿಗಾಗಿ ಬಿಜೆಪಿಗೆ ಮತ ನೀಡಿ. ಗೂಂಡಾಗಿರಿ ರಾಜಕಾರಣದ ಅಂತ್ಯಕ್ಕಾಾಗಿ ಬಿಜೆಪಿಗೆ ಮತ ನೀಡಿ ಎಂದರು.
ನಾರಾಯಣಗೌಡರು ಹಣ, ಅಧಿಕಾರಕ್ಕಾಾಗಿ ರಾಜೀನಾಮೆ ಕೊಟ್ಟಿಿಲ್ಲ. ಅವರದ್ದೇ ಸರಕಾರ ಅಧಿಕಾರದಲ್ಲಿದ್ದಾಗ ರಾಜೀನಾಮೆ ಕೊಟ್ಟಿಿದ್ದಾರೆ. ಕೆ.ಆರ್.ಪೇಟೆಯನ್ನ ರಾಮ ರಾಜ್ಯ ಮಾಡಲು ರಾಜೀನಾಮೆ ಕೊಟ್ಟಿಿದ್ದಾರೆ. ಮಹಾರಾಷ್ಟ್ರದಲ್ಲಿ ಇವತ್ತು ಬಿಜೆಪಿ ಸರಕಾರ ಅಧಿಕಾರಕ್ಕೇರಿದೆ. ಕೆ.ಆರ್.ಪೇಟೆಯಲ್ಲಿ ಬಿಜೆಪಿಯ ನಾರಾಯಣಗೌಡ ಗೆಲ್ಲುತ್ತಾಾರೆ ಎಂಬ ವಿಶ್ವಾಾಸ ನನಗಿದೆ ಎಂದರು.

error: Content is protected !!